ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ನಿಂದ ಸಂಕಷ್ಟದಲ್ಲಿದ್ದ 'ಕೃಷ್ಣ'ನಿಗೆ ಕೋಟಿ ಕೊಟ್ಟ 'ಕುಬೇರ' - ರಾಜಸ್ಥಾನದ ಕೃಷ್ಣ ದೇಗುಲ

ರಾಜಸ್ಥಾನದ ಸಾವರಿಯಾ ಸೇಠ್ ದೇವಾಲಯಕ್ಕೆ ಭಕ್ತನೋರ್ವನು ಒಂದು ಕೋಟಿ 38 ಲಕ್ಷ ರೂಪಾಯಿಗಳ ಡಿಡಿಯನ್ನು ನೀಡಿದ್ದು, ತನ್ನ ಹೆಸರು ಬಹಿರಂಗಪಡಿಸದಿರಲು ವಿನಂತಿಸಿದ್ದಾನೆ.

Largest donation ever in Sanwaliyaji temple
ಸಾವರಿಯಾ ಸೇಠ್ ದೇವಾಲಯ

By

Published : Jun 13, 2020, 4:43 PM IST

ರಾಜಸ್ಥಾನ:ಇಲ್ಲಿನ ಚಿತ್ತೋಡ್​ಗಢ್​ ಜಿಲ್ಲೆಯ ಸುಪ್ರಸಿದ್ಧ ಸಾವರಿಯಾ ಸೇಠ್ ದೇವಾಲಯಕ್ಕೆ (ಕೃಷ್ಣ ದೇಗುಲ) ಭಕ್ತನೋರ್ವ ಒಂದು ಕೋಟಿ ರೂ. ದೇಣಿಗೆ ನೀಡಿದ್ದು, ಇದು ಈ ದೇವಸ್ಥಾನಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾಗಿದೆ.

ಇಂದೋರ್ ಮೂಲದ ಭಕ್ತನು ಒಂದು ಕೋಟಿ 38 ಲಕ್ಷ ರೂಪಾಯಿಗಳ ಡಿಡಿಯನ್ನು ದೇಗುಲಕ್ಕೆ ನೀಡಿದ್ದು, ತನ್ನ ಹೆಸರು ಬಹಿರಂಗಪಡಿಸದಿರಲು ವಿನಂತಿಸಿದ್ದಾನೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕನ್ಹಯ್ಯ ದಾಸ್​ ತಿಳಿಸಿದ್ದಾರೆ.

ಸಾವರಿಯಾ ಸೇಠ್ ದೇವಾಲಯಕ್ಕೆ ಕೋಟಿ ರೂ. ನೀಡಿದ ಕೃಷ್ಣ ಭಕ್ತ

ಕೊರೊನಾ ಲಾಕ್​ಡೌನ್​ನಿಂದಾಗಿ ಎರಡೂವರೆ ತಿಂಗಳಿನಿಂದ ದೇವಾಲಯವನ್ನು ಮುಚ್ಚಲಾಗಿತ್ತು. ಈ ವೇಳೆ ದೇಗುಲಕ್ಕೆ 20 ರಿಂದ 25 ಕೋಟಿ ರೂ. ನಷ್ಟವಾಗಿದೆ. ಆದರೂ ಕೆಲವು ಭಕ್ತರು ದೇವಸ್ಥಾನದ ಆಡಳಿತ ಮಂಡಳಿಯ ಖಾತೆಗಳಿಗೆ ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸುತ್ತಿದ್ದರು. ಈ ಭಕ್ತ ಹಣ ನೀಡಿರುವುದು ಇಲ್ಲಿನ ಸಿಬ್ಬಂದಿಗೆ ಸಮಾಧಾನದ ವಿಚಾರವಾಗಿದೆ.

ಇನ್ನು ಮುಖ್ಯಮಂತ್ರಿಗಳ ಸಹಾಯ ನಿಧಿ ಮತ್ತು ಪಿಎಂ ಕೇರ್ಸ್ ಫಂಡ್​ ಮೂಲಕ ಸಾವರಿಯಾ ಸೇಠ್ ದೇವಾಲಯಕ್ಕೆ 1 ಕೋಟಿ 52 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ.

ABOUT THE AUTHOR

...view details