ಕರ್ನಾಟಕ

karnataka

ETV Bharat / bharat

'ಬಿಕಿನಿ' ಅಲ್ಲಾ 'ಭರಾ ಹುವಾ ಕಿನಿ': ಲೆಜೆಂಡರಿ ಫೋಟೋಗೆ ನೆಟ್ಟಿಗರಿಂದ ಫುಲ್​ ಮಾರ್ಕ್ಸ್​ - ಅಮಿತಾಬ್ ಬಚ್ಚನ್​​ ಬಿಕಿನಿ ಫೋಟೋ

77 ವರ್ಷದ ಲೆಜೆಂಡರಿ ಆ್ಯಕ್ಟರ್ ತಮ್ಮ ಹಳೆಯ ಫೋಟೋವನ್ನು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು, ಅದನ್ನು ಇದು ಬಿಕಿನಿಯಲ್ಲ "ಭರಾ ಹುವಾ ಕಿನಿ" ಎಂದಿದ್ದಾರೆ. ಇನ್ನೂ ಫೋಟೋ ನೋಡಿದ ನೆಟಿಜನ್ಸ್ ಲೈಕ್ಸ್​, ಕಾಮೆಂಟ್ಸ್​ ಮಾಡುವುದರ ಮೂಲಕ​ ಫುಲ್​ ಮಾರ್ಕ್ಸ್​ ನೀಡಿದ್ದಾರೆ.

Big B amps up Insta game with his version of bikini pic
'ಬಿಕಿನಿ' ಅಲ್ಲಾ 'ಭರಾ ಹುವಾ ಕಿನಿ': ಲೆಜೆಂಡರಿ ಫೋಟೊಗೆ ನೆಟ್ಟಿಗರಿಂದ ಫುಲ್​ ಮಾರ್ಕ್ಸ್​

By

Published : Apr 29, 2020, 2:12 PM IST

ಮುಂಬೈ:'ಮಹಾನ್' ಚಿತ್ರದ 37 ವರ್ಷಗಳ ಪೂರೈಕೆಯ ಸಂಭ್ರಮದಲ್ಲಿರುವ ಅಮಿತಾಬ್ ಬಚ್ಚನ್, 1983ರ ಚಿತ್ರದ ಸೆಟ್‌ನಿಂದ ಗಿಡ್ಡನೆಯ ಶಾರ್ಟ್ಸ್​ ಧರಿಸಿರುವ ಚಿತ್ರವೊಂದನ್ನು ಪೋಸ್ಟ್​ ಮಾಡಿ 'ಬಿಕಿನಿ' ಎಂದು ಉಲ್ಲೇಖಿಸಿದ್ದಾರೆ.

ಮಂಗಳವಾರ ಅಮಿತಾಬ್ ಬಚ್ಚನ್​​ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಫೋಟೋವನ್ನು ಹಂಚಿಕೊಂಡು "ಹೆಚ್ಚು ಲೈಕ್​" ಪಡೆಯಲು ಬಿಕಿನಿ ಫೋಟೋಗಳನ್ನು ಪೋಸ್ಟ್​ ಮಾಡಬೇಕೆಂದು ನನಗೊಬ್ಬರು ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ.

ಈ ನಿಟ್ಟಿನಲ್ಲಿ 77 ವರ್ಷದ ಲೆಜೆಂಡರಿ ಆ್ಯಕ್ಟರ್ ತಮ್ಮ ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಪಟ್ಟೆ ಇರುವ ಅಂಗಿ ಮತ್ತು ಚಡ್ಡಿ ಧರಿಸಿದ್ದಾರೆ. ಅವರ ಮಾತಿನಲ್ಲಿ ಹೇಳುವುದಾದರೆ, ಅದು ಬಿಕಿನಿ ರೂಪದ "ಭರಾ ಹುವಾ ಕಿನಿ" ಅಂತೆ.

ಚಿತ್ರವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ, ಇದು ಸುಮಾರು 732 ಕೆ ಲೈಕ್‌ಗಳನ್ನು ಗಳಿಸಿದೆ ಮತ್ತು ಕಾಮೆಂಟ್‌ಗಳ ವಿಭಾಗವು ಅಭಿಮಾನಿಗಳ ಅಭಿನಂದನೆಯೊಂದಿಗೆ ತುಂಬಿದೆ. ಅಭಿಮಾನಿಯೊಬ್ಬರು " ಚಂದದ ಕಾಲುಗಳು !!! ಕೇವಲ ತಮಾಷೆಗಷ್ಟೆ !! ಚನ್ನಾಗಿರಿ ಸರ್ !!!" ಎಂದು ಬರೆದು ಕಮೆಂಟ್​ ಮಾಡಿದ್ದಾರೆ.

ABOUT THE AUTHOR

...view details