ಕರ್ನಾಟಕ

karnataka

ETV Bharat / bharat

ಪೋತಿರೆಡ್ಡಿಪೇಟ TO ಶ್ವೇತಭವನ.. ಬೈಡನ್​ ಭಾಷಣದ ಹಿಂದೆ ಭಾರತೀಯನ ಪಾತ್ರ.. - ಅಮೆರಿಕದ ಶ್ವೇತಭವನ

ವಿನಯ್ ರೆಡ್ಡಿ ಅಮೆರಿಕದಲ್ಲೇ ಹುಟ್ಟಿ ಬೆಳೆದಿದ್ದು, ತಮ್ಮ ಪೂರ್ವಜರ ಊರಾದ ಪೋತಿರೆಡ್ಡಿಪೇಟದೊಂದಿಗೆ ಅನೋನ್ಯ ಸಂಬಂಧ ಕೂಡ ಹೊಂದಿದ್ದರು. ಈಗಲೂ ಸಹ ಈ ಗ್ರಾಮದಲ್ಲಿ ಮೂರು ಎಕರೆ ಭೂಮಿ ಹಾಗೂ ಮನೆ ಹೊಂದಿದ್ದಾರೆ..

Biden's speechwriter Vinay Reddy
ಚೆಲ್ಲೋಟಿ ವಿನಯ್ ರೆಡ್ಡಿ

By

Published : Jan 20, 2021, 3:19 PM IST

Updated : Jan 20, 2021, 3:33 PM IST

ಹೈದರಾಬಾದ್ :ಜಗತ್ತು ಅಮೆರಿಕದ ನೂತನ ಅಧ್ಯಕ್ಷರಾಗಲಿರುವ ಜೋ ಬೈಡನ್ ಅವರ ಭಾಷಣಕ್ಕೆ ಕಾತರದಿಂದ ಕಾಯುತ್ತಿದೆ. ಈ ಬೆನ್ನಲ್ಲೇ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಜೋ ಬೈಡನ್ ಅವರಿಗೆ ಭಾಷಣ ಬರೆದು ಕೊಡುವುದರಲ್ಲಿ ಭಾರತೀಯ ಮೂಲದವರೊಬ್ಬರ ಪಾತ್ರ ಬಹಿರಂಗವಾಗಿದೆ.

ತೆಲಂಗಾಣದ ಕರೀಂನಗರ ಜಿಲ್ಲೆಯ ಹೈದರಾಬಾದ್​​ನಿಂದ 200 ಕಿಲೋಮೀಟರ್​ ದೂರದಲ್ಲಿರುವ ಪೋತಿರೆಡ್ಡಿಪೇಟ ಗ್ರಾಮದ ಮೂಲದವರಾದ ಚೆಲ್ಲೋಟಿ ವಿನಯ್ ರೆಡ್ಡಿ ಅಮೆರಿಕದ ಅಧ್ಯಕ್ಷರ ಭಾಷಣ ರಚಿಸುವ ವಿಭಾಗದ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಚೆಲ್ಲೋಟಿ ವಿನಯ್ ರೆಡ್ಡಿ ಅವರ ತಂದೆ ನಾರಾಯಣ ರೆಡ್ಡಿ ಪೋತಿರೆಡ್ಡಿಪೇಟ ಗ್ರಾಮದಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ, ಹೈದರಾಬಾದ್​ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದರು. ನಂತರ 1970ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿಯೇ ವಾಸವಿದ್ದರು.

ಇದನ್ನೂ ಓದಿ:ಅಮೆರಿಕ​ ಯಶಸ್ಸಿನಲ್ಲಿ ಭಾರತದ ಪಾತ್ರ ಪ್ರಮುಖ: ಆ್ಯಂಟನಿ ಬ್ಲಿಂಕೆನ್

ವಿನಯ್ ರೆಡ್ಡಿ ಅಮೆರಿಕದಲ್ಲೇ ಹುಟ್ಟಿ ಬೆಳೆದಿದ್ದು, ತಮ್ಮ ಪೂರ್ವಜರ ಊರಾದ ಪೋತಿರೆಡ್ಡಿಪೇಟದೊಂದಿಗೆ ಅನೋನ್ಯ ಸಂಬಂಧ ಕೂಡ ಹೊಂದಿದ್ದರು. ಈಗಲೂ ಸಹ ಈ ಗ್ರಾಮದಲ್ಲಿ ಮೂರು ಎಕರೆ ಭೂಮಿ ಹಾಗೂ ಮನೆ ಹೊಂದಿದ್ದಾರೆ.

ನಾರಾಯಣ ರೆಡ್ಡಿ ಮತ್ತು ಅವರ ಪತ್ನಿ ಆಗಾಗ ಈ ಗ್ರಾಮಕ್ಕೆ ಭೇಟಿ ನೀಡಿ, ಸಂಬಂಧಿಗಳು, ಸ್ನೇಹಿತರು ಹಾಗೂ ಗ್ರಾಮಸ್ಥರೊಂದಿಗೆ ಒಡನಾಟ ಉಳಿಸಿಕೊಂಡಿದ್ದಾರೆ. 2020ರ ಫೆಬ್ರವರಿಯಲ್ಲಿ ನಾರಾಯಣಗೌಡರು ಗ್ರಾಮಕ್ಕೆ ಕೊನೆಯದಾಗಿ ಭೇಟಿ ನೀಡಿದ್ದರು.

Last Updated : Jan 20, 2021, 3:33 PM IST

ABOUT THE AUTHOR

...view details