ವಾಷಿಂಗ್ಟನ್ :ಕೋವಿಡ್-19 ತಡೆಯುವ ಸಲುವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ 1.9 ಟ್ರಿಲಿಯನ್ ಯುಎಸ್ ಡಾಲರ್ಘೋಷಣೆ ಮಾಡಿದ್ದಾರೆ. ಇದಕ್ಕೆ ರಿಪಬ್ಲಿಕನ್ಸ್ ಒಂದು ವೇಳೆ ವಿರೋಧ ವ್ಯಕ್ತಪಡಿಸಿದ್ರೆ, ತಮ್ಮ ಆದ ರೀತಿಯಲ್ಲಿ ಪ್ಯಾಕೇಜ್ಗೆ ಅನುಮೋದನೆ ನೀಡುವ ಪ್ರಕ್ರಿಯೆ ಪ್ರಾರಂಭಿಸಲು ಮತಚಲಾಯಿಸಲಾಯಿತು.
ಸೆನೆಟ್ನಲ್ಲಿ ಜೋ ಬೈಡನ್ ನೇತೃತ್ವದ ಡೆಮೋಕ್ರಾಟಿಕ್ ಪಕ್ಷದ ಸದಸ್ಯರ ಕೊರತೆ ಇದ್ದು, ರಿಪಬ್ಲಿಕನ್ಸ್ ಹೆಚ್ಚಿದ್ದಾರೆ. ಹಾಗಾಗಿ, ಸೆನೆಟ್ನಲ್ಲಿ 50-49ರಷ್ಟು ಮತಚಲಾಯಿಸಿ, ಜಿಒಪಿ (ರಿಪಬ್ಲಿಕನ್ ಪಕ್ಷ) ಬೆಂಬಲದೊಂದಿಗೆ ಅಥವಾ ಇಲ್ಲದೆ ಮಸೂದೆಯನ್ನು ಅನುಮೋದಿಸುವ ಸುದೀರ್ಘ ಪ್ರಕ್ರಿಯೆಯನ್ನು ಬೈಡನ್ ಪ್ರಾರಂಭಿಸಿದರು.