ಭೋಪಾಲ್(ಮಧ್ಯಪ್ರದೇಶ):ಕಳೆದ ಕೆಲ ದಿನಗಳ ಹಿಂದೆ ಲಂಡನ್ನಿಂದ ವಾಪಸ್ ಆಗಿದ್ದ ಮಹಿಳೆ ಹಾಗೂ ಪತ್ರಕರ್ತರಾಗಿದ್ದ ಆಕೆಯ ತಂದೆಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ವಿಶೇಷ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಒಂದೊಳ್ಳೆ ಸುದ್ದಿ: ಕೊರೊನಾ ಪೀಡಿತ ಪತ್ರಕರ್ತ ಹಾಗು ಮಗಳು ಗುಣಮುಖ; ಅಸ್ಪತ್ರೆಯಿಂದ ಡಿಸ್ಚಾರ್ಜ್ - ಕೋವಿಡ್-19
ಭೋಪಾಲ್ನಲ್ಲಿ ತಂದೆ ಮತ್ತು ಮಗಳ ವರದಿ ನೆಗೆಟಿವ್ ಎಂದು ಬಂದಿರುವುದು ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
Bhopal's 1st COVID-19 patient, her journo father test negative
ಭೋಪಾಲ್ನ AIIMS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರ ಮೆಡಿಕಲ್ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಮಾರ್ಚ್ 21ರಂದು ಈ ಮಹಿಳೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಬಳಿಕ ತಂದೆಯಲ್ಲೂ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Last Updated : Apr 4, 2020, 2:03 PM IST