ನವದೆಹಲಿ:ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಎಲ್ಲರೂ ಕೈಜೋಡಿಸುತ್ತಿದ್ದು, ಈಗಾಗಲೇ ಅನೇಕರು ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿದ್ದಾರೆ.
ರಿಲಾಯನ್ಸ್,ಟಾಟಾ ಸನ್ಸ್, ಅದಾನಿ ಗ್ರೂಪ್, ವಿಫ್ರೋ, ಇನ್ಪೋಸಿಸ್ ಫೌಂಡೇಶನ್ನಂತಹ ಕಾರ್ಪೋರೇಟ್ ಸಂಸ್ಥೆಗಳು ತುರ್ತು ನಿಧಿಗೆ ದೇಣಿಗೆ ನೀಡಿವೆ. ಇದೀಗ ಭಾರ್ತಿ ಎಂಟರ್ಪ್ರೈಸ್ ಕೂಡ ಕೈಜೋಡಿಸಿದೆ.
100 ಕೋಟಿ ರೂ ದೇಣಿಗೆ ನೀಡಿರುವ ಭಾರ್ತಿ ಎಂಟರ್ಪ್ರೈಸ್, ಮೊಬೈಲ್ ಹಾಗೂ ಬ್ರಾಂಡ್ಬ್ಯಾಂಡ್ ಸರ್ವಿಸ್ ಕೂಡ ಫ್ರೀಯಾಗಿ ನೀಡುತ್ತಿರುವುದಾಗಿ ತಿಳಿಸಿದೆ.
ಪ್ರಧಾನಿ ಮೋದಿ ಮನವಿ ಮಾಡುತ್ತಿದ್ದಂತೆ ಕೇವಲ ಮೂರು ದಿನಗಳಲ್ಲಿ ಪಿಎಂ ಕೇರ್ಸ್ ನಿಧಿಗೆ ಬರೋಬ್ಬರಿ 7,300 ಕೋಟಿ ರೂ.ಗೂ ಹೆಚ್ಚು ಹಣ ಹರಿದು ಬಂದಿತ್ತು.
ಟಾಟಾ ಗ್ರೂಪ್ 1,500 ಕೋಟಿ ರೂ., ರಿಲಾಯನ್ಸ್ ಇಂಡಸ್ಟ್ರೀಸ್ 500 ಕೋಟಿ ರೂ., ಒಎನ್‍ಜಿಸಿ 300 ಕೋಟಿ ರೂ., ಭಾರತೀಯ ರೈಲ್ವೆ 151 ಕೋಟಿ ರೂ. ಮತ್ತು ಲಾರ್ಸೆನ್ ಮತ್ತು ಟೂಬ್ರೊ 150 ಕೋಟಿ ರೂ. ದೇಣಿಗೆ ನೀಡಿದ್ದವು.