ಕರ್ನಾಟಕ

karnataka

ETV Bharat / bharat

ಗಾನ ಗಂಧರ್ವ ಎಸ್​​ಪಿಬಿಗೆ ಭಾರತ ರತ್ನ ನೀಡಿ: ನಮೋಗೆ ಪತ್ರ ಬರೆದ ಜಗನ್​

ಗಾನ ಗಾರುಡಿಗ, ಪದ್ಮವಿಭೂಷಣ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಇದೀಗ ಪತ್ರ ಬರೆದಿದ್ದಾರೆ.

Andhra CM writes to pm modi
Andhra CM writes to pm modi

By

Published : Sep 28, 2020, 5:41 PM IST

ಅಮರಾವತಿ:ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ ಅವರು ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದು, ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸ್ಯಾಂಡಲ್​ವುಡ್​, ಬಾಲಿವುಡ್ ಸೇರಿ ಸಿನಿರಂಗ, ರಾಜಕೀಯ ಮುಖಂಡರು ಕಂಬನಿ ಮಿಡಿದಿದ್ದಾರೆ.

ಗಾನ ಗಾರುಡಿಗನಿಗೆ ಭಾರತ ರತ್ನ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​​ ಜಗನಮಮೋಹನ್​ ರೆಡ್ಡಿ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತ ಎಸ್​​ಪಿಬಿ ಹುಟ್ಟಿದ್ದು ಮೂಲತಃ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ. ಈಗಾಗಲೇ ಅಲ್ಲಿ ಮ್ಯೂಸಿಯಂ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, ಭಾರತ ಸರ್ಕಾರ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದಿದ್ದಾರೆ.

ಕಳೆದ ಸೆಪ್ಟೆಂಬರ್​ 25ರಂದು ನಿಧನರಾಗಿದ್ದ ಎಸ್​ಪಿಬಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದು, ಕೋಟ್ಯಂತರ ಜನರ ಮನಗೆದ್ದಿದ್ದಾರೆ. ​​ಪ್ರಮುಖವಾಗಿ ತೆಲಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಅವರು ಹಾಡುಗಳನ್ನು ಹಾಡಿದ್ದಾರೆ.

For All Latest Updates

ABOUT THE AUTHOR

...view details