ಕರ್ನಾಟಕ

karnataka

ETV Bharat / bharat

375 ಸ್ವಯಂ ಸೇವಕರ ಮೇಲೆ ಕೊವಾಕ್ಸಿನ್​ ಪ್ರಯೋಗಿಸಿದ ಭಾರತ್​ ಬಯೋಟೆಕ್​​ - ಕೊವಾಕ್ಸಿನ್​ನ ಕ್ಲಿನಿಕಲ್ ಪ್ರಯೋಗ

ಭಾರತದ ಮೊದಲ ದೇಶೀಯ ಲಸಿಕೆಯಾಗಿರುವ ಕೊವಾಕ್ಸಿನ್​ನ ಕ್ಲಿನಿಕಲ್ ಪ್ರಯೋಗದ ಮೊದಲನೇ ಹಂತ ಜುಲೈ 15 ರಿಂದ ಪ್ರಾರಂಭವಾಗಿದ್ದು, 375 ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ.

Covaxin
ಕೊವಾಕ್ಸಿನ್

By

Published : Jul 18, 2020, 3:48 PM IST

ಹೈದರಾಬಾದ್​: ಮಾನವರ ಮೇಲೆ ಕೋವಿಡ್​ ಲಸಿಕೆ 'ಕೊವಾಕ್ಸಿನ್​' ಪ್ರಯೋಗ ಆರಂಭಿಸಿರುವ ಭಾರತ್ ಬಯೋಟೆಕ್, ಈಗಾಗಲೇ 375 ಸ್ವಯಂ ಸೇವಕರ ಮೇಲೆ ಪ್ರಯೋಗ ಮಾಡಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಭಾರತದ ಮೊದಲ ದೇಶೀಯ ಲಸಿಕೆಯಾಗಿರುವ ಕೊವಾಕ್ಸಿನ್​ನ ಕ್ಲಿನಿಕಲ್ ಪ್ರಯೋಗದ ಮೊದಲನೇ ಹಂತ ದೇಶಾದ್ಯಂತ ಜುಲೈ 15 ರಿಂದ ಪ್ರಾರಂಭವಾಗಿದೆ. ಇದು ದೇಶದ 375 ಸ್ವಯಂಸೇವಕರ ಮೇಲೆ ನಡೆಸಿರುವ ರ್ಯಾಂಡಮೈಸ್ಡ್​​,​ ಡಬಲ್-ಬ್ಲೈಂಡ್, ಪ್ಲಸೀಬೊ - ನಿಯಂತ್ರಿತ ಕ್ಲಿನಿಕಲ್ ಪ್ರಯೋಗವಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ಲೇಸಿಬೊ (ಒಂದು ಚಿಕಿತ್ಸೆ) ವನ್ನು ಯಾರು ಪಡೆಯುತ್ತಿದ್ದಾರೆ ಎನ್ನುವುದು ರೋಗಿಗಳಿಗಾಗಲಿ ಅಥವಾ ಸಂಶೋಧಕರಿಗಾಗಲಿ ತಿಳಿಯುವುದಿಲ್ಲ.

ಭಾರತದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್​ನ್ಯಾಷನಲ್​​ ಲಿಮಿಟೆಡ್ (ಬಿಬಿಐಎಲ್) ಹಾಗೂ ನ್ಯಾಷನಲ್​ ಇನ್​ಸ್ಟಿಟ್ಯೂಟ್​​ ಆಫ್​ ವೈರಾಲಜಿ ಸಹಭಾಗಿತ್ವದಲ್ಲಿ 'ಕೊವಾಕ್ಸಿನ್​' ಹೆಸರಿನ ಕೊರೊನಾ ವೈರಸ್ ಲಸಿಕೆ ಕಂಡು ಹಿಡಿದಿದೆ. ಆಗಸ್ಟ್ 15ರ ಒಳಗೆ ಮಾನವನ ಮೇಲೆ ಈ ಲಸಿಕೆಯ ಕ್ಲಿನಿಕಲ್​ ಪ್ರಯೋಗದ ಫಲಿತಾಂಶವನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ.

ಕೋವಿಡ್ -19 ಲಸಿಕೆಗಾಗಿ ಮಾನವರ ಮೇಲೆ ಮೊದಲನೇ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಎರಡು ಕಂಪನಿಗಳಿಗೆ ಅನುಮತಿ ನೀಡಿದೆ. ಒಂದು ಭಾರತ್ ಬಯೋಟೆಕ್. ಇನ್ನೊಂದು ಝ್ಯಾಡಸ್​ ಕ್ಯಾಡಿಲಾ ಕಂಪನಿ.

ABOUT THE AUTHOR

...view details