ಕರ್ನಾಟಕ

karnataka

ಕ್ಲಿನಿಕಲ್ ಪ್ರಯೋಗಗಳಲ್ಲಿ 'ಕೋವಾಕ್ಸಿನ್' ಉತ್ತಮ ಫಲಿತಾಂಶ : ಲಸಿಕೆ ಕುರಿತು ಸಂಶೋಧಕರ ಮಾಹಿತಿ

By

Published : Dec 24, 2020, 10:55 AM IST

ಕೋವಾಕ್ಸಿನ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದ್ದು, ಎರಡನೇ ಹಂತದ ಪ್ರಯೋಗದ ಫಲಿತಾಂಶದ ಬಗ್ಗೆ ಸಂಶೋಧಕರು ಮಾಹಿತಿ ನೀಡಿದ್ದಾರೆ.

Covaxin
ಕೋವಾಕ್ಸಿನ್ ಲಸಿಕೆ

ಹೈದರಾಬಾದ್:ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್ ಲಸಿಕೆ ಕ್ಲಿನಿಕಲ್ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತಿದೆ. ಲಸಿಕೆಯಿಂದಾಗಿ ದೇಹದಲ್ಲಿ ಉತ್ಪಾದನೆಯಾಗುವ ಪ್ರತಿಕಾಯಗಳು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಪರಿಣಾಮಕಾರಿಯಾಗಬಹುದು ಎಂದು ಸಂಶೋಧನಾ ವರದಿ ತಿಳಿಸಿದೆ.

ಕೋವಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಸಹಭಾಗಿತ್ವದಲ್ಲಿ ಹೈದರಾಬಾದ್​ ಮೂಲದ ಭಾರತ್ ಬಯೋಟೆಕ್​ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ. ಪ್ರಸ್ತುತ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸುತ್ತಿದ್ದು, ಎರಡನೇ ಹಂತದ ಪ್ರಯೋಗದ ಫಲಿತಾಂಶದ ಬಗ್ಗೆ ಸಂಶೋಧಕರು ಮಾಹಿತಿ ನೀಡಿದ್ದಾರೆ.

ಮೊದಲ ಹಂತದ ಪ್ರಯೋಗದಲ್ಲಿ ಪ್ರತಿಕಾಯಗಳು ಮೂರು ತಿಂಗಳ ವರೆಗಿನ ಪರಿಣಾಮಕಾರಿತ್ವ ತೋರಿಸಿದರೆ, 2ನೇ ಹಂತದಲ್ಲಿ 6 ರಿಂದ 12 ತಿಂಗಳುಗಳವರೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿ ಇರಲಿದೆ. ಹೀಗಾಗಿ ಕೋವಾಕ್ಸಿನ್ ಲಸಿಕೆಯು ದೀರ್ಘ ಕಾಲೀನ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಹಾಗೂ ಸುರಕ್ಷಿತ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಲಸಿಕೆ ವಿತರಣೆಗೆ ಭಾರತ ಸನ್ನದ್ಧ, ಸೋಂಕಿತರೂ ತೆಗೆದುಕೊಳ್ಳಬೇಕು: ಭಾರತ್ ಬಯೋಟೆಕ್ ಅಧ್ಯಕ್ಷ

2ನೇ ಹಂತದ ಪ್ರಯೋಗದಲ್ಲಿ ಆರೋಗ್ಯವಂತ 380 ಮಕ್ಕಳು ಹಾಗೂ ವಯಸ್ಕರನ್ನು ಒಳಪಡಿಸಲಾಗಿತ್ತು. ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗುತ್ತಿದ್ದಂತೆಯೇ ಲಸಿಕೆ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಲಸಿಕೆ ವಿತರಣೆಗೆ ಭಾರತ ಸನ್ನದ್ಧವಾಗಿದ್ದು, ಸೋಂಕಿತರೂ ಲಸಿಕೆ ತೆಗೆದುಕೊಳ್ಳಬೇಕು ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಕೃಷ್ಣ ಎಲ್ಲಾ ಹೇಳಿದ್ದಾರೆ.

ABOUT THE AUTHOR

...view details