ಹೈದರಾಬಾದ್: ಕೊರೊನಾ ವೈರಸ್ ಸಂಬಂಧ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ತಯಾರಕರಾದ ಭಾರತ್ ಬಯೋಟೆಕ್ನ ವ್ಯವಹಾರ ಅಭಿವೃದ್ಧಿಯ ಮುಖ್ಯಸ್ಥ ಡಾ.ರಾಚೆಸ್ ಎಲ್ಲ ಲಸಿಕೆ ಅಭಿವೃದ್ಧಿಯಲ್ಲಿನ ಸವಾಲುಗಳು ಮತ್ತು ಕೊರೊನಾ ಸೋಂಕಿನ ಬಗ್ಗೆ ವಿವರಣೆ ನೀಡಿದ್ದಾರೆ.
ಕೊರೊನಾ ಜಗತ್ತನ್ನು ಏಕೆ ಭಯಭೀತಗೊಳಿಸುತ್ತಿದೆ?:ಈ ವೈರಸ್ ಮಾನವಕುಲಕ್ಕೆ ಹೊಸದು. SARS-CoV-2 ವೈರಸ್ ಕೂಡ ಕೊರೊನಾ ಕುಟುಂಬಕ್ಕೆ ಸೇರಿದೆ. ಬಾವಲಿಗಳು ಮತ್ತು ಉಣ್ಣೆಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದು ಹೇಳಲಾಗುತ್ತದೆ. ಚೀನಾ ಇಂಥಹ ಸೋಂಕು ಹರಡುವಿಕೆಗೆ ಪ್ರಮುಖ ಉದಾಹರಣೆ. ಅಲ್ಲಿ ಜನರು ಕಚ್ಚಾ ಮಾಂಸವನ್ನು ಸೇವಿಸುತ್ತಾರೆ. ಈ ಹಿನ್ನೆಲೆ ರೋಗನಿರೋಧಕ ವ್ಯವಸ್ಥೆ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಮಧುಮೇಹ, ಹೃದಯರಕ್ತನಾಳದ ಮತ್ತು ಶ್ವಾಸಕೋಶದ ಕಾಯಿಲೆಗಳು, ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರಲ್ಲಿ ರೋಗ ನಿರೋಧಕ ಶಕ್ತಿ ಈಗಾಗಲೇ ದುರ್ಬಲಗೊಂಡಿರುತ್ತದೆ. ಈ ಹಿನ್ನೆಲೆ ಈ ವೈರಸ್ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ. ಇಂಥಹ ಜನರು ಈ ಸೋಂಕಿನಿಂದ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಎರಡನೆಯದಾಗಿ ಸೋಂಕಿನ ವೇಗವು ಭಯಾನಕವಾಗಿದೆ. ಸೋಂಕಿತ ವ್ಯಕ್ತಿಯು ಕನಿಷ್ಟ ಮೂರು ಜನರಿಗೆ ವೈರಸ್ ಹರಡಬಹುದು ಎಂದು ಅಧ್ಯಯನಗಳು ದೃಢಪಡಿಸಿವೆ.
ನಮಗೆ COVID-19ಗೆ ಲಸಿಕೆ ಅಭಿವೃದ್ಧಿಪಡಿಸುವುದು ಏಕೆ ಕಷ್ಟ?:ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಈ ವಿಷಯ ಸಂಕೀರ್ಣವಾಗಿದೆ. ಪರಿಣಾಮಕಾರಿ ಆಂಟಿವೈರಲ್ ಔಷಧಿಯನ್ನು ತಯಾರಿಸಲು 5 ರಿಂದ 7 ವರ್ಷಗಳು ತೆಗೆದುಕೊಳ್ಳಬಹುದು. ಇದು ತುಂಬಾ ದುಬಾರಿ ಪ್ರಕ್ರಿಯೆ. ಈ ಲಸಿಕೆಯನ್ನು ಕಂಡುಹಿಡಿದ ನಂತರ ಆರೋಗ್ಯವಂತ ಜನರಿಗೆ ನೀಡಲಾಗುತ್ತದೆ. ಆದ್ದರಿಂದ ಅವು ಪರಿಣಾಮಕಾರಿಗಿಂತ ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿಯೇ 7 ರಿಂದ 20 ವರ್ಷಗಳು ಬೇಕಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ವಿವಿಧ ಹಂತಗಳಿವೆ. ಭಾರತ ಹೆಚ್ಚಾಗಿ ಜೆನರಿಕ್ ಔಷಧಿಗಳನ್ನು ತಯಾರಿಸುತ್ತದೆ. ಆದರೆ, ನಾವು ಈಗಾಗಲೇ ಯುಎಸ್‌ನಂತಹ ದೇಶಗಳಲ್ಲಿ ತಯಾರಿಸಿದ ಔಷಧಿಗಳ ಹಕ್ಕುಗಳನ್ನು ಖರೀದಿಸಿ, ಅವುಗಳನ್ನು ಇಲ್ಲಿ ತಯಾರಿಸಲು ಪ್ರಾರಂಭಿಸುತ್ತೇವೆ. ಆದರೂ ಲಸಿಕೆಯನ್ನು ಈ ರೀತಿ ನೇರವಾಗಿ ಅಭಿವೃದ್ಧಿಪಡಿಸುವುದು ಅಸಾಧ್ಯ. ಮೊದಲಿಗೆ ಸೋಂಕನ್ನು ತಡೆಗಟ್ಟಲು ನಾವು ಹೊಸ ಔಷಧಿ ಕಂಡು ಹಿಡಿಯಬೇಕು. ನಂತರ ಸೋಂಕಿನ ಉತ್ಪಾದನಾ ಪ್ರಕ್ರಿಯೆಯನ್ನು ನಾವು ಆವಿಷ್ಕರಿಸಬೇಕು. ಇದಾದ ನಂತರ ಅದನ್ನು ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ಪ್ರಯೋಗಿಸಬೇಕು.
ವೈರಸ್ ನಮ್ಮ ದೇಹಕ್ಕೆ ಪ್ರವೇಶಿಸುವುದನ್ನು ತಡೆಯುವುದು ಹೇಗೆ?:ಸೋಂಕಿತರ ರಕ್ತನಾಳದಲ್ಲಿ ನಾವು ಕೊರೊನಾ ಸೋಂಕಿನ ಪ್ರತಿಕಾಯಗಳನ್ನು ಕಾಣಬಹುದು. ಆ ಪ್ರತಿಕಾಯಗಳನ್ನು ಹೊರತೆಗೆಯುವುದು ಮತ್ತು ಆರೋಗ್ಯವಂತ ಜನರಿಗೆ ಇಂಜೆಕ್ಟ್ ಮಾಡುವುದು ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ಈ ಪ್ರಕ್ರಿಯೆಯನ್ನು ಕಾನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಎಂದು ಕರೆಯಲಾಗುತ್ತದೆ. ಈ ಅಧ್ಯಯನವು ಮೊದಲು ನ್ಯೂಯಾರ್ಕ್‌ನಲ್ಲಿ ಪ್ರಾರಂಭವಾಯಿತು. ಆದರೆ, ಇದು ತಾತ್ಕಾಲಿಕ ಪರಿಹಾರ ಮಾತ್ರ.
ಕೊರೊನಾಗೆ ಯಾವುದಾದರೂ ಔಷಧಿ ಇದೆಯೇ? :ಪ್ರಸ್ತುತ COVID-19ಗೆ ಚಿಕಿತ್ಸೆ ನೀಡಲು ಯಾವುದೇ ಔಷಧಿಗಳಿಲ್ಲ. ಆಂಟಿಮಲೇರಿಯಲ್ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಆಂಟಿಬಯೋಟಿಕ್ ಅಜಿಥ್ರೊಮೈಸಿನ್ ಪರಿಣಾಮಕಾರಿ ಎಂದು ವೈದ್ಯರು ಹೇಳಿದ್ದರೂ ಕೂಡ ಇದಕ್ಕೆ ಪ್ರಾಯೋಗಿಕ ಪುರಾವೆಗಳಿಲ್ಲ. ಆದರೆ, ಈ ಔಷಧಿಗಳು ಕೂಡ ದೇಹಕ್ಕೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಕೆಲವು ವಿಜ್ಞಾನಿಗಳು ಒಸೆಲ್ಟಾಮಿವಿರ್ ಎಂಬ ಆಂಟಿವೈರಲ್ ಔಷಧವನ್ನು ಬಳಸಲು ಸಲಹೆ ನೀಡಿದರು. ಆದರೆ, ಯಾವುದೇ ಫಲಿತಾಂಶಗಳು ಕಂಡು ಬಂದಿಲ್ಲ. ಈರೆಗಿನ ಸಂಶೋಧನಾ ಮಾಹಿತಿಯ ಪ್ರಕಾರ, ರೆಮ್‌ಡೆಸಿವಿರ್ (Remdesivir) ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಯಂತೆ. ಈ ಔಕ್ಷಧಿಯ ಪ್ರಯೋಗ ಯಶಸ್ವಿಯಾದರೆ ನಾವು ಸ್ಥಳೀಯವಾಗಿ ಔಷಧಿಯನ್ನು ತಯಾರಿಸಬಹುದಾಗಿದೆ.
ನಾವು ಏನಾದರೂ ಮಾಡಬಹುದಾದ ಕೆಲಸ ಇದೆಯೇ?:ಈ ವಿಷಯದಲ್ಲಿ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳು ಅಸಾಧಾರಣವಾಗಿವೆ. 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸುವುದು ಮತ್ತು 130 ಕೋಟಿ ಜನಸಂಖ್ಯೆಯನ್ನು ನಿಯಂತ್ರಿಸುವುದು ಸುಲಭದ ಮಾತಲ್ಲ. ನಮ್ಮದು ಜನನಿಬಿಡ ದೇಶ. ನಮ್ಮ ಆರೋಗ್ಯ ವ್ಯವಸ್ಥೆಗಳು ಹೆಚ್ಚು ದೃಢವಾಗಿಲ್ಲ. ಆದ್ದರಿಂದ, ಕಟ್ಟುನಿಟ್ಟಾದ ಲಾಕ್‌ಡೌನ್ ಕಡ್ಡಾಯವಾಗಿದೆ. ಪ್ರತಿ ನಾಗರಿಕನೂ ಈ ನಿರ್ಧಾರದ ಮಹತ್ವ ಅರಿತುಕೊಳ್ಳಬೇಕು. ಪ್ರತಿಯೊಬ್ಬರೂ ತಪ್ಪದೇ ಸಾಮಾಜಿಕ ಅಂತರ ಅನುಸರಿಸಬೇಕು.
ಈ ಭೀಕರ ಕಾಲದಲ್ಲಿಭಾರತಯಾವ ಪಾತ್ರ ವಹಿಸಬಹುದು?:ವಿಶ್ವಾದ್ಯಂತ ಜನಿಸಿದ ಹತ್ತು ಶಿಶುಗಳಲ್ಲಿ ಆರು ಮಕ್ಕಳು ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಪಡೆಯುತ್ತಿದ್ದಾರೆ. ಅಗ್ಗದ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಕಂಪನಿಗಳು ಅತ್ಯುತ್ತಮವಾಗಿವೆ. ನಾವು ಸಾಮಾನ್ಯ ವೆಚ್ಚದ ಹತ್ತನೇ ಒಂದು ಭಾಗಕ್ಕೆ ಲಸಿಕೆಗಳನ್ನು ತಯಾರಿಸುತ್ತೇವೆ. ಪರಿಣಾಮಕಾರಿ ಲಸಿಕೆಗಳನ್ನು ತಯಾರಿಸುವ ಇತಿಹಾಸ ನಮ್ಮಲ್ಲಿರುವುದರಿಂದ, COVID-19 ಲಸಿಕೆಯನ್ನು ಅಭಿವೃದ್ಧಿಪಡಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ನಾವು ನಮ್ಮದೇ ಆದ ಲಸಿಕೆಯನ್ನು ಅಭಿವೃದ್ಧಿಪಡಿಸಬಹುದು ಅಥವಾ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಸಂಸ್ಥೆಗಳೊಂದಿಗೆ ಪಾಲುದಾರರಾಗಬಹುದು. ಈ ಕಾರಣಕ್ಕಾಗಿ ನಾವು ಭಾರತ್ ಬಯೋಟೆಕ್‌ನಲ್ಲಿ ಅಂತಾರಾಷ್ಟ್ರೀಯ ಒಕ್ಕೂಟದೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ.
ಇದು ಖಂಡಿತವಾಗಿಯೂ ತ್ವರಿತ ಫಲಿತಾಂಶಗಳನ್ನು ಹೊಂದಿರುತ್ತದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್, ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ಏಕಕಾಲದಲ್ಲಿ ಪ್ರಯೋಗಗಳನ್ನು ಅನುಮೋದಿಸಿದ್ದಾರೆ. ಇದು ಅಭೂತಪೂರ್ವ ನಡೆ. ಪ್ರಸ್ತಾವನೆಗಳೊಂದಿಗೆ ಬರುವ ಫಾರ್ಮಾ ಮತ್ತು ಡಯಾಗ್ನೋಸ್ಟಿಕ್ ಕಂಪನಿಗಳಿಗೆ ನೀಡುವ ಅನುದಾನವನ್ನು ಡಿಸಿಜಿಐ ಅನುಮೋದಿಸಿದೆ. ಇವೆಲ್ಲವೂ ಭಾರತ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಣಾಯಕ ಕ್ರಮಗಳು.