- ರೈತರಿಗೆ ಎರಡೂವರೆ ವರ್ಷದ ಬಾಲಕಿ ಸಾಥ್
- ತಂದೆ-ತಾಯಿ ಜೊತೆಗೆ ಧರಣಿಯಲ್ಲಿ ಕಂದಮ್ಮ ಭಾಗಿ
- ಹರಿಯಾಣದ ಸಿರ್ಸಾದಲ್ಲಿ ಫಲಕ ಹಿಡಿದು ಅನ್ನದಾತರಿಗೆ ಬೆಂಬಲ
ಮೋದಿ ಸರ್ಕಾರದ ವಿರುದ್ಧ ಅನ್ನದಾತರ ಕಿಚ್ಚು.. ದೇಶಾದ್ಯಂತ ರೈತರ ರಣಕಹಳೆ - LIVE UPDATES
16:59 December 08
ಅನ್ನದಾತರಿಗೆ ಎರಡೂವರೆ ವರ್ಷದ ಬಾಲಕಿ ಸಾಥ್
16:25 December 08
ಕೈ ಕೈ ಮಿಲಾಯಿಸಿಕೊಂಡ ಕಾರ್ಯಕರ್ತರು
- ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ
- ರಾಜಸ್ಥಾನದ ಜೈಪುರದ ಬಿಜೆಪಿ ಕಚೇರಿ ಬಳಿ ಘಟನೆ
- ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆ ವೇಳೆ ಕೈ ಕೈ ಮಿಲಾಯಿಸಿಕೊಂಡ ಕಾರ್ಯಕರ್ತರು
- ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ
15:32 December 08
ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ ರೈತರು
- ಹರಿಯಾಣದಲ್ಲಿ ರೈತರ ಬೃಹತ್ ಪ್ರತಿಭಟನೆ
- ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ ರೈತರು
- ಅಂಬಾಲಾ-ಹಿಸಾರ್ ಹೆದ್ದಾರಿ ಹಾಗೂ ಫತೇಹಬಾದ್ನಲ್ಲಿ ಹಾದು ಹೋಗುತ್ತಿದ್ದ ಆ್ಯಂಬುಲೆನ್ಸ್
15:22 December 08
ಟ್ರಾಕ್ಟರ್ ರ‍್ಯಾಲಿ
- ಹರಿಯಾಣದ ಕರ್ನಾಲ್‌ನಲ್ಲಿ ರೈತರಿಂದ ಟ್ರಾಕ್ಟರ್ ರ್ಯಾಲಿ
- 250 ಟ್ರಾಕ್ಟರ್ಗಳಲ್ಲಿ ಕುಳಿತು ಸಾವಿರಾರು ಮಂದಿಯ ಪ್ರತಿಭಟನೆ
14:39 December 08
ರೈತರ ಪರ ನಿಂತ ವಕೀಲರು
- ಬಂದ್‌ಗೆ ಅಖಿಲ ಭಾರತ ವಕೀಲರ ಒಕ್ಕೂಟ ಬೆಂಬಲ
- ತಿಸ್ ಹಜಾರಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಿಂದ ಪ್ರತಿಭಟನೆ
- ಪ್ರತಿಭಟನೆಗೆ ಸರ್ಕಾರದ ಪ್ರತಿಕ್ರಿಯೆ ಕಳವಳಕಾರಿ ಸಂಗತಿಯಾಗಿದೆ
- ಈ ಕಾನೂನುಗಳು ರೈತರ ಪರವಾಗಿಯೂ ಇಲ್ಲ, ವಕೀಲರ ಪರವಾಗಿಯೂ ಇಲ್ಲ
- ತಿಸ್ ಹಜಾರಿ ಕೋರ್ಟ್ ಲಾಯರ್ ಪ್ರತಿಕ್ರಿಯೆ
13:16 December 08
ಗಾಜಿಪುರ-ಗಾಜಿಯಾಬಾದ್ ಗಡಿಯಲ್ಲಿ ಪ್ರತಿಭಟನೆ
- ಗಾಜಿಪುರ-ಗಾಜಿಯಾಬಾದ್ (ದೆಹಲಿ-ಉತ್ತರ ಪ್ರದೇಶ) ಗಡಿಯಲ್ಲಿ ಪ್ರತಿಭಟನೆ
- ಸರ್ಕಾರಕ್ಕೆ ಕಾನೂನು ಜಾರಿ ಮಾಡಲು ಸಾಧ್ಯವಾದರೆ, ಅದನ್ನು ರದ್ದು ಕೂಡ ಮಾಡಬಹುದು
- ಸರ್ಕಾರವು ರೈತ ಸಂಘಗಳು ಮತ್ತು ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು
- ರೈತ ಮುಖಂಡ ಆಗ್ರಹ
12:40 December 08
ಟಿಆರ್‌ಎಸ್ ಧರಣಿ
- ತೆಲಂಗಾಣದಲ್ಲಿ ಭಾರತ್ ಬಂದ್‌ಗೆ ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಸಾಥ್
- ಕಾಮರೆಡ್ಡಿ, ರಂಗರೆಡ್ಡಿ ಜಿಲ್ಲೆಗಳಲ್ಲಿ ಪ್ರತಿಭಟನೆ
- ಟಿಆರ್‌ಎಸ್ ನಾಯಕರಾದ ಕೆ ಕವಿತಾ ಮತ್ತು ಕೆ.ಟಿ.ರಾಮರಾವ್ ನೇತೃತ್ವದಲ್ಲಿ ಕಾರ್ಯಕರ್ತರಿಂದ ಧರಣಿ
11:56 December 08
ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿದ್ದ ರೈತ ಸಾವು...!
- ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತ ಸಾವು
- ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ಅನ್ನದಾತ
- ಡಿಸೆಂಬರ್ 1 ರಿಂದ ಧರಣಿಯಲ್ಲಿ ಪಾಲ್ಗೊಂಡಿದ್ದ ರೈತ
11:45 December 08
ಹೆದ್ದಾರಿ ತಡೆದು ಪ್ರತಿಭಟನೆ
- ಪಂಜಾಬ್ನಲ್ಲಿ ಪ್ರತಿಭಟನೆಯ ಕಾವು
- ಚಂಡಿಗಢದ ಮೊಹಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ
- ಜಾರ್ಖಂಡ್ನ ರಾಂಚಿಯಲ್ಲಿ ಬೈಕ್ ರ್ಯಾಲಿ ಮಾಡಿ ಪ್ರೊಟೆಸ್ಟ್ಗೆ ಬೆಂಬಲ
- ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧರಣಿ
11:31 December 08
ಪ್ರತಿಭಟನಾಕಾರರು ಪೊಲೀಸರ ವಶಕ್ಕೆ
- ಅಸ್ಸೋಂನಲ್ಲಿ ಪ್ರತಿಭಟನಾಕಾರರು ಪೊಲೀಸರ ವಶಕ್ಕೆ
- ಗುವಾಹಟಿಯಲ್ಲಿ ಜನತಾ ಭವನ ಎದುರು ಪ್ರತಿಭಟನೆ ನಡೆಸುತ್ತಿದ್ದ ಜನರು
- ಭಾರತ್ ಬಂದ್ ಹಿನ್ನೆಲೆ ರೈತರಿಗೆ ಬೆಂಬಲಿಸಿ ಪ್ರತಿಭಟನೆ
10:47 December 08
ವಿಶಾಖಪಟ್ಟಣಂನಲ್ಲಿ ಪ್ರತಿಭಟನೆಗಿಳಿದ ವಿದ್ಯಾರ್ಥಿ ಸಂಘಟನೆ
- ಆಂಧ್ರದಲ್ಲಿ ಪ್ರತಿಭಟನೆಗಿಳಿದ ವಿದ್ಯಾರ್ಥಿ ಸಂಘಟನೆ
- ವಿಶಾಖಪಟ್ಟಣಂನಲ್ಲಿ ರಾಷ್ಟ್ರೀಯ ಹೆದ್ದಾರಿ -16 ತಡೆದು ಪ್ರತಿಭಟನೆ
- ಭಾರತ್ ಬಂದ್‌ಗೆ ಎಡ ಪಕ್ಷಗಳು, ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸಾಥ್
10:41 December 08
ಪಾಟ್ನಾದಲ್ಲಿ ಭದ್ರತಾ ಸಿಬ್ಬಂದಿಗಳ ನಿಯೋಜನೆ
- ರೈತ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ ಹಿನ್ನೆಲೆ
- ಬಿಹಾರದ ಪಾಟ್ನಾದಲ್ಲಿ ಭದ್ರತಾ ಸಿಬ್ಬಂದಿಗಳ ನಿಯೋಜನೆ
- ಅಹಿತಕರ ಘಟನೆ ನಡೆಯದಂತೆ ಎಲ್ಲೆಲ್ಲೂ ಖಾಕಿ ಕಣ್ಗಾವಲು
10:32 December 08
ಕೋಲ್ಕತ್ತಾದಲ್ಲಿ ರೈಲು ತಡೆದ ಎಡ ಪಕ್ಷಗಳ ಕಾರ್ಯಕರ್ತರು
- ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯ ಪಕ್ಷಗಳ ಆಕ್ರೋಶ
- ಕೋಲ್ಕತ್ತಾದ ಜಾದಬ್‌ಪುರ ರೈಲ್ವೆ ನಿಲ್ದಾಣದಲ್ಲಿ ಹಳಿಗಳ ಮೇಲೆ ಪ್ರತಿಭಟನೆ
- ರೈಲು ತಡೆದ ಕಾರ್ಯಕರ್ತರು
10:27 December 08
ತೆಲಂಗಾಣದಲ್ಲಿ ಆರ್‌ಟಿಸಿ ಸಿಬ್ಬಂದಿಯ ಪ್ರತಿಭಟನೆ
- ಭಾರತ್ ಬಂದ್‌ಗೆ ತೆಲಂಗಾಣ ರಸ್ತೆ ಸಾರಿಗೆ ನಿಗಮ ಬೆಂಬಲ
- ಕಾಮರೆಡ್ಡಿ ಜಿಲ್ಲೆಯಲ್ಲಿ ಆರ್‌ಟಿಸಿ ಸಿಬ್ಬಂದಿಯ ಪ್ರತಿಭಟನೆ
- ಕೃಷಿ ಕಾನೂನುಗಳ ವಿರುದ್ಧ ನಮ್ಮ ಸಿಎಂ ಧ್ವನಿ ಎತ್ತಿದ್ದಾರೆ
- ರೈತರು ಅನ್ಯಾಯಕ್ಕೆ ಒಳಗಾಗಬಾರದು ಎಂದ ಬಸ್ ಚಾಲಕ
10:19 December 08
ಟೈರ್ ಸುಟ್ಟು ಆರ್‌ಜೆಡಿ ಕಾರ್ಯಕರ್ತರ ಪ್ರತಿಭಟನೆ
- ಕೇಂದ್ರದ ವಿರುದ್ಧ ರಾಷ್ಟ್ರೀಯ ಜನತಾದಳ ಆಕ್ರೋಶ
- ರೈತರ ಪ್ರತಿಭಟನೆಗೆ ಬಿಹಾರದಲ್ಲಿ ಆರ್‌ಜೆಡಿ ಕಾರ್ಯಕರ್ತರ ಬೆಂಬಲ
- ದರ್ಬಂಗಾದ ಗಂಜ್ ಚೌಕ್‌ನಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ
09:55 December 08
ಭಾರತ್ ಬಂದ್
ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದೆರಡು ವಾರಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ದೇಶದ 300 ಕ್ಕೂ ಹೆಚ್ಚು ರೈತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದು, ಇತರ ವಿವಿಧ ಸಂಘಟನೆಗಳು ಕೂಡ ಅನ್ನದಾತರಿಗೆ ಸಾಥ್ ನೀಡಿವೆ.