- ಅಣಕು ಶವ ಮೆರವಣಿಗೆ, ಅಣಕು ಶವ ಸುಟ್ಟು ಮೂಲಕ ಬಳ್ಳಾರಿಯಲ್ಲಿ ರೈತ ಮುಖಂಡರ ಪ್ರತಿಭಟನೆ
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯ
ಭಾರತ್ ಬಂದ್ : ಕೃಷಿ ಮಸೂದೆಗಳ ವಿರುದ್ಧ ದೇಶದ ಹಲವೆಡೆ ನಡೆದ ಪ್ರತಿಭಟನೆಯ ಬಿಸಿ ಹೀಗಿತ್ತು... - ಭಾರತ್ ಬಂದ್ 2020
17:47 September 25
ಸುಗ್ರೀವಾಜ್ಞೆ ಕೈಬಿಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ರೈತ ಮುಖಂಡರ ಪ್ರತಿಭಟನೆ
17:45 September 25
ಹೊಸಪೇಟೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
- ಹೊಸಪೇಟೆಯ ರೋಟರಿ ವೃತದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
- ರೈತರಿಗೆ ಮಾರಕವಾಗುವ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಸರ್ಕಾರ ಜಾರಿಗೆ ತರುತ್ತಿವೆ
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ
- ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ವಿರುದ್ಧ ನಡೆದು ಕೊಳ್ಳುತ್ತಿದೆ, ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿವೆ
- ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು
17:32 September 25
ದೆಹಲಿಯ ಜಂತರ್ ಮಂತರ್ನಲ್ಲಿ ಎಐಕೆಎಸ್, ಸಿಐಟಿಯುನಿಂದ ಪ್ರತಿಭಟನೆ
ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷದ (CPI-M) ರೈತ ಘಟಕವಾದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಟ್ರೇಡ್ ಯೂನಿಯನ್ ಸಂಘಟನೆಯಾದ ಸಿಐಟಿಯು (ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಪ್ರತಿಭಟನೆಗಳನ್ನು ನಡೆಸಿವೆ. ಕೃಷಿ, ಕಾರ್ಮಿಕ ಮಸೂದೆ ವಿರೋಧದ ಪ್ರತಿಭಟನೆಯಲ್ಲಿ ಎಡ ಪಕ್ಷಗಳ ಕೆಲವು ರಾಜಕಾರಣಿಗಳು ಸಹ ಭಾಗವಹಿಸಿದ್ದರು.
16:44 September 25
ಪಂಜಾಬ್ನ ವಿವಿಧೆಡೆ ಪ್ರತಿಭಟನೆ: ಅಕಾಲಿ ದಳ ಸಾಥ್
- ಪಂಜಾಬ್ನ ವಿವಿಧೆಡೆ ಪ್ರತಿಭಟನೆ
- ರೈಲು ಹಳಿಯ ಮೇಲೆ ಕುಳಿತು ಕೇಂದ್ರದ ವಿರುದ್ಧ ರೈತರ ಆಕ್ರೋಶ
- ಪ್ರತಿಭಟನೆಗೆ ಶಿರೋಮಣಿ ಅಕಾಲಿ ದಳದ (SAD) ನಾಯಕ ಬಿಕ್ರಮ್ ಸಿಂಗ್ ಮಜಿತಿಯಾ ಬೆಂಬಲ
- ಕೇಂದ್ರದ ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ಕೇಂದ್ರ ಸಚಿವೆ ಮತ್ತು ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು
15:46 September 25
ಬಿಹಾರದ ಗಯಾದಲ್ಲಿ ಪ್ರತಿಪಕ್ಷಗಳ ಆಕ್ರೋಶ
- ಕೃಷಿ ಮಸೂದೆಗಳ ವಿರೋಧಿಸಿ ಬಿಹಾರದ ಗಯಾದಲ್ಲಿ ಪ್ರತಿಪಕ್ಷಗಳ ಆಕ್ರೋಶ
- ನಾವು ರೈತ ವಿರೋಧಿ ನೀತಿಯ ವಿರುದ್ಧ ಪ್ರತಿಭಟಿಸುತ್ತಿದ್ದೇವೆ
- ಕೇಂದ್ರ ಸರ್ಕಾರ ಇದನ್ನು ಹಿಂದಪಡೆಯಲೇ ಬೇಕು
- ಇದು ಕಾರ್ಪೋರೇಟ್ ವಲಯಕ್ಕೆ ಮಾತ್ರ ಉಪಯುಕ್ತವಾಗಿದೆ
- ಇದರಿಂದ ಎಲ್ಲಾ ಮಂಡಿಗಳು ಮುಚ್ಚಲಿವೆ
- RJD ಜಿಲ್ಲಾ ಕಾರ್ಯಕರ್ತನೋರ್ವ ಹೇಳಿಕೆ
15:37 September 25
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ
ದೇವನಹಳ್ಳಿ : ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಲು ಹೊರಟಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವಾರು ಕಾಯ್ದೆಗಳು ದಲಿತ, ರೈತ ಮತ್ತು ಕಾರ್ಮಿಕ ವಿರೋಧಿಯಾಗಿದ್ದು ಈ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ನಗರದ ರಾಷ್ಟ್ರೀಯ ಹೆದ್ದಾರಿ- 207 ರಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
13:07 September 25
ತಮಿಳುನಾಡು ರೈತರ ವಿಭಿನ್ನ ಪ್ರತಿಭಟನೆ
- ಕೃಷಿ ಮಸೂದೆಗಳ ವಿರುದ್ಧ ತಮಿಳುನಾಡು ರೈತರ ವಿಭಿನ್ನ ಪ್ರತಿಭಟನೆ
- ತಿರುಚಿರಾಪಳ್ಳಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
- ನ್ಯಾಷನಲ್ ಸೌತ್ ಇಂಡಿಯನ್ ರಿವರ್ ಇಂಟರ್ಲಿಂಕಿಂಗ್ ಫಾರ್ಮರ್ಸ್ ಅಸೋಸಿಯೇಷನ್ ರೈತರ ಆಕ್ರೋಶ
- ಮಾನವ ತಲೆಬುರುಡೆಗಳನ್ನು ಹಿಡಿದು ವಿಭಿನ್ನ ರೀತಿಯಲ್ಲಿ ಪ್ರತಿಭಟಿಸುತ್ತಿರುವ ರೈತರು
12:46 September 25
ಜೆಎಪಿ ಕಾರ್ಯಕರ್ತರನ್ನು ಥಳಿಸಿದ ಬಿಜೆಪಿ ಕಾರ್ಯಕರ್ತರು
- ಬಿಹಾರದ ಪಾಟ್ನಾದಲ್ಲಿ ಪ್ರತಿಭಟನೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ
- ಪಪ್ಪು ಯಾದವ್ ಅವರ ಜನ್ ಅಧಿಕಾರ್ ಪಕ್ಷದ (ಜೆಎಪಿ) ಕಾರ್ಯಕರ್ತರನ್ನು ಥಳಿಸಿದ ಬಿಜೆಪಿ ಕಾರ್ಯಕರ್ತರು
- ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಜೆಎಪಿ ಕಾರ್ಯಕರ್ತರು ಪಯತ್ನಿಸಿದ ವೇಳೆ ಘಟನೆ
- ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ಜೆಎಪಿ
12:31 September 25
ಹೆದ್ದಾರಿ ತಡೆದು, ಬೆಂಕಿ ಹಚ್ಚಿ ರೈತರ ಪ್ರತಿಭಟನೆ, 56 ಮಂದಿ ಪ್ರತಿಭಟನಾಕಾರರು ವಶಕ್ಕೆ
- ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಖಂಡಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ
- ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ಪ್ರಗತಿಪರ ಸಂಘಟನೆಗಳಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ
- 56 ಮಂದಿ ಪ್ರತಿಭಟನಾಕಾರರು ಪೊಲೀಸರ ವಶಕ್ಕೆ
11:53 September 25
ರಸ್ತೆ ಬಂದ್ ಮಾಡಿ ಪ್ರತಿಭಟನೆ: ಹೋರಾಟಗಾರರು ಪೊಲೀಸರ ವಶಕ್ಕೆ
- ಧಾರವಾಡ ಹೊರವಲಯದ ರಾಯಾಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ
- ಹುಬ್ಬಳ್ಳಿ-ಧಾರವಾಡ ನಡುವಿನ ಹೆದ್ದಾರಿ ತಡೆದು ಪ್ರತಿಭಟನಾಕಾರರ ಆಕ್ರೋಶ
- ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು
- 10ಕ್ಕೂ ಹೆಚ್ಚು ರೈತರು ಹಾಗೂ ಹೋರಾಟಗಾರರು ವಶಕ್ಕೆ
- ವಶಕ್ಕೆ ಪಡೆದ ಬಳಿಕ ರಸ್ತೆ ತೆರವುಗೊಳಿಸಿದ ಪೊಲೀಸರು
11:48 September 25
ರಸ್ತೆ ರೋಖೋ: ಧಾರವಾಡದಲ್ಲಿ ವಾಹನ ಸಂಚಾರಕ್ಕೆ ಅಡಚಣೆ
- ಧಾರವಾಡದಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ
- ನಗರದ ರಾಯಾಪೂರ ಬಳಿ ರಸ್ತೆ ತಡೆದು ಪ್ರತಿಭಟನೆ
- ವಾಹನ ಸವಾರರ ಪರದಾಟ
11:42 September 25
ರೈತರ ಕಲ್ಯಾಣಕ್ಕಾಗಿ ಸರ್ಕಾರ ಸುಧಾರಣೆಗಳನ್ನು ತಂದಿದೆ - ಪಿಎಂ ಮೋದಿ
- ಹಿಂದಿನ ಸರ್ಕಾರಗಳು ರೈತರು, ಕಾರ್ಮಿಕರಿಗೆ ಎಂದಿಗೂ ಅರ್ಥವಾಗದ ಭರವಸೆ ನೀಡಿ ಕಾನೂನುಗಳನ್ನು ತಂದಿವೆ
- ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಈ ಪರಿಸ್ಥಿತಿಯನ್ನು ಬದಲಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ
- ರೈತರ ಕಲ್ಯಾಣಕ್ಕಾಗಿ ಸುಧಾರಣೆಗಳನ್ನು ತಂದಿದೆ
- ಕೃಷಿ ಮಸೂದೆಗಳ ಅಂಗೀಕಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ
11:34 September 25
ಆರ್ಜೆಡಿ ನಾಯಕರ ಟ್ರ್ಯಾಕ್ಟರ್ ಪ್ರತಿಭಟನೆ
- ಕೃಷಿ ಮಸೂದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಆರ್ಜೆಡಿ ನಾಯಕರು
- ತೇಜಸ್ವಿ ಯಾದವ್ ಟ್ರ್ಯಾಕ್ಟರ್ ಓಡಿಸಿದರೆ, ಟ್ರ್ಯಾಕ್ಟರ್ ಮೇಲೇರಿ ಕುಳಿತ ತೇಜ್ ಪ್ರತಾಪ್ ಯಾದವ್
10:56 September 25
ಟ್ರ್ಯಾಕ್ಟರ್ ಓಡಿಸಿ ಪ್ರತಿಭಟನೆಗೆ RJD ನಾಯಕ ತೇಜಸ್ವಿ ಯಾದವ್ ಸಾಥ್
- ಪ್ರತಿಭಟನೆಯಲ್ಲಿ ರಾಷ್ಟ್ರೀಯ ಜನತಾ ದಳದ ನಾಯಕ (RJD) ನಾಯಕ ತೇಜಸ್ವಿ ಯಾದವ್ ಸಾಥ್ ಭಾಗಿ
- ಬಿಹಾರದ ಪಾಟ್ನಾದಲ್ಲಿ ಟ್ರ್ಯಾಕ್ಟರ್ ಓಡಿಸುವ ಮೂಲಕ ಸಂಸತ್ನಲ್ಲಿ ಅಂಗೀಕಾರಗೊಂಡ ಕೃಷಿ ಮಸೂದೆಗಳ ವಿರುದ್ಧದ ಪ್ರತಿಭಟನೆಗೆ ಸಾಥ್
10:47 September 25
ಚಾಮರಾಜನಗರದಲ್ಲಿ ಜನಜೀವನ ಸಾಮಾನ್ಯ.. ರಾಜ್ಯ ಬಂದ್ನತ್ತ ಎಲ್ಲರ ಗಮನ..!
- ಕೃಷಿ ಮಸೂದೆಗಳು, ನೂತನ ಭೂ ಸುಧಾರಣೆ ಕಾಯ್ದೆ ವಿರೋಧಿಸಿ ಇಂದು ಭಾರತ್ ಬಂದ್
- ಚಾಮರಾಜನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ
- ಎಂದಿನಂತೆ ಹೋಟೆಲ್, ಅಂಗಡಿ- ಮುಂಗಟ್ಟುಗಳು ತೆರೆದಿವೆ
- ಬೆಳಗ್ಗೆ 10.45ರ ಬಳಿಕ ರಾಜ್ಯ ರೈತ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿವೆ
- ಎಸ್ಡಿಪಿಐ ಸಂಘಟನೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲಿದೆ
- ವಿವಿಧ ಕನ್ನಡ ಪರ ಸಂಘಟನೆಗಳು ಸೇರಿದಂತೆ ಕಾರ್ಮಿಕ ಸಂಘಟನೆಗಳು ಬಂದ್ಗೆ ಬೆಂಬಲ ನೀಡಲಿವೆ
10:46 September 25
ಹಾವೇರಿಯಲ್ಲಿ 11 ಗಂಟೆಯಿಂದ ಪ್ರತಿಭಟನೆ ಆರಂಭ
ಹಾವೇರಿಯಲ್ಲಿ ಬಂದ್ ಬೆಂಬಲಿಸಿ 11 ಗಂಟೆಯಿಂದ ಪ್ರತಿಭಟನೆ ನಡೆಸಲಿರೋ ರೈತಸಂಘ
ಸದ್ಯಕ್ಕೆ ಎಂದಿನಂತೆ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಓಡಾಡ್ತಿರೋ ವಾಹನಗಳು
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಿರೋ ರೈತಸಂಘದ ಕಾರ್ಯಕರ್ತರು
10:27 September 25
ಹುಬ್ಬಳ್ಳಿಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ
- ಹುಬ್ಬಳ್ಳಿಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ
- ಪ್ರತಿಭಟನೆಗೆ ಇದುವರೆಗೂ ಯಾವುದೇ ಸಂಘಟನೆಗಳು ರಸ್ತೆಗೆ ಇಳಿದಿಲ್ಲ
- ಹೀಗಾಗಿ ನಗರದಲ್ಲಿ ಸಹಜ ಸ್ಥಿತಿಯಿದೆ
- ಇನ್ನು ಧಾರವಾಡದಲ್ಲಿ ಬೆಳಗ್ಗೆಯಿಂದ ಪ್ರತಿಭಟನೆಗಳು ನಡೆದಿಲ್ಲ
- 10:30ಕ್ಕೆ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಪ್ರತಿಭಟಿಸಲು ನಿರ್ಧಾರ
- ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಿರುವ ಹೋರಾಟಗಾರರು
- ಮಧ್ಯಾಹ್ನ 12 ಗಂಟೆಗೆ ಗಬ್ಬೂರು ಬೈಪಾಸ್‌ನಲ್ಲಿ ಹೆದ್ದಾರಿ ಬಂದ್ ಮಾಡಲು ನಿರ್ಧಾರ
10:10 September 25
ಎಮ್ಮೆ ಮೇಲೆ ಕುಳಿತು ಪ್ರತಿಭಟನೆ...!
ಕೃಷಿ ಮಸೂದೆ ಅಂಗೀಕಾರದ ವಿರುದ್ಧ ದೇಶ್ಯಾದ್ಯಂತ ರೈತರು ಕೈಗೊಂಡಿರುವ ಪ್ರತಿಭಟನೆಗೆ ಬಿಹಾರ್ದಲ್ಲಿ ಆರ್ಜೆಡಿ ಕಾರ್ಯಕರ್ತರು ಕೈ ಜೋಡಿಸಿದ್ದಾರೆ. ಬಿಹಾರ್ದ ದರ್ಭಾಂಗ್ನಲ್ಲಿ ರಾಷ್ಟ್ರೀಯ ಜನತಾ ದಳ ಕಾರ್ಯಕರ್ತರು ಎಮ್ಮೆ ಮೇಲೆ ಕುಳಿತು ಪ್ರತಿಭಟಿಸುವ ಮೂಲಕ ರೈತರಗೆ ಬೆಂಬಲಿಸಿದರು.
09:58 September 25
ನವದೆಹಲಿ-ಉತ್ತರಪ್ರದೇಶ ಗಡಿಯಲ್ಲಿ ಖಾಕಿ ಕಣ್ಗಾವಲು!
ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆ ಪೊಲೀಸರು ಕಟ್ಟೆಚ್ಚರ ವಹಿಸುತ್ತಿದ್ದಾರೆ. ಅದರಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಸಹ ಖಾಕಿ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಇನ್ನು ದೆಹಲಿ ಮತ್ತು ಉತ್ತರಪ್ರದೇಶದ ಗಡಿಭಾಗ ನಗರ ಚಿಲ್ಲಾ ಏರಿಯಾದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
09:47 September 25
ಪ್ರತಿಭಟನೆ ನಿಯಂತ್ರಿಸಲು ಪೊಲೀಸರ ಹರಸಾಹಸ!
ಕೇಂದ್ರ ಸರ್ಕಾರ ಕೃಷಿ ಮಸೂದೆ ಪಾಸ್ ಮಾಡಿದ ಹಿನ್ನೆಲೆ ರಾಷ್ಟ್ರವ್ಯಾಪಿ ರೈತರು ಕೈಗೊಂಡಿರುವ ಭಾರತ್ ಬಂದ್ಗೆ ಕರ್ನಾಟಕ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಬೆಂಗಳೂರು ಮತ್ತು ತಮಿಳುನಾಡು ಗಡಿಯಲ್ಲಿ ರೈತರು ಪ್ರತಿಭಟನೆ ಕೈಗೊಂಡಿದ್ದಾರೆ. ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
09:39 September 25
ಖಾಕಿ ಕಟ್ಟೆಚ್ಚರ!
ಅಧಿವೇಶನದಲ್ಲಿ ಕೃಷಿ ಮಸೂದೆ ಅಂಗೀಕಾರದ ಹಿನ್ನೆಲೆ ರೈತರು ಇಂದು ದೇಶಾದ್ಯಂತ ಪ್ರತಿಭಟನೆ ಕೈಗೊಂಡಿದ್ದಾರೆ. ಇನ್ನು ಪಂಜಾಬ್‌ನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವುದರಿಂದ ಪೊಲೀಸರು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.
09:22 September 25
ಪಂಜಾಬ್‌ನಲ್ಲಿ ‘ರೈಲ್ ರೋಕೊ’ ಚಳುವಳಿ
ಕೃಷಿ ಮಸೂದೆಗಳ ವಿರುದ್ಧ ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಆಶ್ರಯದಲ್ಲಿ ರೈತರು ‘ರೈಲ್ ರೋಕೊ’ ಚಳುವಳಿ ಕೈಗೊಂಡಿದ್ದಾರೆ.
08:30 September 25
ರೈಲು ಸಂಚಾರ ರದ್ದುಗೊಳಿಸಿದ ಅಧಿಕಾರಿ...
ಕೃಷಿ ಮಸೂದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್ಗೆ ಮಿಶ್ರ ಪ್ರತಿಕ್ರಿಯೆ ದೊರೆಯುತ್ತಿದ್ದು, ಹರಿಯಾಣದಿಂದ ಪಂಜಾಬ್ಗೆ ತೆರಳಬೇಕಾಗಿದ್ದ ರೈಲುಗಳನ್ನು ರದ್ದುಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹರಿಯಾಣದ ಅಂಬಾಲಾ ರೈಲ್ವೇ ಅಧಿಕಾರಿ ಬಿಎಸ್ ಗಿಲ್ ಹೇಳಿದ್ದಾರೆ.