ಕರ್ನಾಟಕ

karnataka

ETV Bharat / bharat

ಲಡಾಖ್​ ಬಿಕ್ಕಟ್ಟು: ಭಾರತ - ಚೀನಾ ಗಡಿಯಲ್ಲಿ ವೈಮಾನಿಕ ಕಣ್ಗಾವಲಿಡಲು ಬೇಡಿಕೆ - ಭಾರತ - ಚೀನಾ ಗಡಿ

ರೆಡಾರ್‌ಗಳು, ದೀರ್ಘ ಶ್ರೇಣಿಯ ಕ್ಯಾಮೆರಾಗಳು ಮತ್ತು ರೇಡಿಯೊ ಮಾನಿಟರಿಂಗ್ ಸಾಧನಗಳನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ ಮತ್ತು ಕ್ಯಾಮೆರಾ ಕಣ್ಗಾವಲು ಜಾಲವನ್ನು ಅಳವಡಿಸಬೇಕು ಎಂಬ ಬೇಡಿಕೆಗಳಿವೆ.

loc
loc

By

Published : Jun 8, 2020, 4:17 PM IST

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಭಾರತದ ಉತ್ತರದ ಗಡಿಯಾದ ಲಡಾಖ್​ನತ್ತ ಎಲ್ಲರ ಗಮನವಿದೆ. ಏಕೆಂದರೆ ಅಲ್ಲಿ ಭಾರತ ಹಾಗೂ ಚೀನಾ ಸೇನೆಗಳ ನಡುವೆ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

ಚೀನಾದ ಸೈನಿಕರು ವಾಸ್ತವ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಒಳನುಗ್ಗಿದ್ದಾರೆಂದು ವರದಿಯಾಗಿದೆ.

ಈ ವಿಷಯವು ಉಭಯ ದೇಶಗಳ ನಡುವೆ ಶಾಂತಿಯುತವಾಗಿ ಇತ್ಯರ್ಥಗೊಳ್ಳಬಹುದೆಂದು ಭಾವಿಸಲಾಗಿದೆ. ಆದರೂ ಈ ವಿಚಾರ ಇನ್ನೂ ಯಾವುದೇ ನಿರ್ಣಯಕ್ಕೆ ತಲುಪಿಲ್ಲ.

ಪ್ರಸ್ತುತ ಹೆಚ್ಚುವರಿ ಸೇನೆಯನ್ನು ಗಡಿ ವಾಸ್ತವ ರೇಖೆಯ ಉದ್ದಕ್ಕೂ ನಿಯೋಜಿಸಲಾಗಿದ್ದು, ಗಸ್ತು ತಿರುಗುವಿಕೆ, ಕಣ್ಗಾವಲು ಮತ್ತು ಉಲ್ಲಂಘನೆಗಳಿಗೆ ಪ್ರತಿಕ್ರಿಯಿಸುವ ಚಟುವಟಿಕೆಗಳನ್ನು ಸೇನೆ ನಿರ್ವಹಿಸುತ್ತದೆ.

ರೆಡಾರ್‌ಗಳು, ದೀರ್ಘ ಶ್ರೇಣಿಯ ಕ್ಯಾಮೆರಾಗಳು ಮತ್ತು ರೇಡಿಯೊ ಮಾನಿಟರಿಂಗ್ ಸಾಧನಗಳನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ ಮತ್ತು ದೃಶ್ಯ ಗಡಿ ಕಣ್ಗಾವಲು ಜಾಲವನ್ನು ಜಾರಿಗೆ ತರಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಮಾನವಸಹಿತ ಮತ್ತು ಮಾನವರಹಿತ ವ್ಯವಸ್ಥೆಗಳು ಮತ್ತು ಉಪಗ್ರಹ ಚಿತ್ರಣವನ್ನು ಬಳಸಿಕೊಂಡು ವೈಮಾನಿಕ ಕಣ್ಗಾವಲಿಡಬೇಕು. ಎಲ್‌ಎಸಿಯಲ್ಲಿ ಅನಿರೀಕ್ಷಿತ ಚಲನೆಯನ್ನು ಪತ್ತೆಹಚ್ಚುವುದು ತ್ವರಿತ ಜಾಲ ನಿಯೋಜಿಸಬೇಕು ಎಂಬ ಬೇಡಿಕೆಗಳು ಕೇಳಿಬಂದಿವೆ.

ABOUT THE AUTHOR

...view details