ಕರ್ನಾಟಕ

karnataka

ETV Bharat / bharat

ಬೇಟಿ ಬಚಾವೊ, ಮಿಷನ್ ಶಕ್ತಿ ಟೊಳ್ಳು ಘೋಷಣೆಗಳು: ಪ್ರಿಯಾಂಕಾ ಗಾಂಧಿ - ಮಹಿಳಾ ಭದ್ರತೆಗೆ ಉತ್ತರಪ್ರದೇಶ ಸರ್ಕಾರದ ಕ್ರಮ

"ಬೇಟಿ ಬಚಾವೊ" ಮತ್ತು "ಮಿಷನ್ ಶಕ್ತಿ" ಉತ್ತರ ಪ್ರದೇಶ ಸರ್ಕಾರದ ಟೊಳ್ಳು ಘೋಷಣೆಗಳಾದ್ದು, ಈ ವಿಷಯದ ಅನುಷ್ಠಾನದಲ್ಲಿ ಸರ್ಕಾರ ನಿರ್ಲಕ್ಷ್ಯ ಮನೋಭಾವ ಹೊಂದಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

priyanka
priyanka

By

Published : Jan 13, 2021, 1:33 PM IST

ನವದೆಹಲಿ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಮಹಿಳಾ ಭದ್ರತೆಯ ಬಗ್ಗೆ ಪ್ರಚಾರಕ್ಕಾಗಿ ಮಾತ್ರ ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಅದರೆ ಈ ವಿಷಯದ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಮನೋಭಾವ ಹೊಂದಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಫೇಸ್‌ಬುಕ್ ಪೋಸ್ಟ್‌ ಮಾಡಿರುವ ಪ್ರಿಯಾಂಕಾ, ಮಹಿಳೆಯರ ಮೇಲಿನ ಅಪರಾಧಗಳ ಕುರಿತು ಇತ್ತೀಚಿನ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ, "ಬೇಟಿ ಬಚಾವೊ" ಮತ್ತು "ಮಿಷನ್ ಶಕ್ತಿ" ಉತ್ತರ ಪ್ರದೇಶ ಸರ್ಕಾರದ ಟೊಳ್ಳು ಘೋಷಣೆಗಳಾಗಿವೆ ಎಂದು ಹೇಳಿದ್ದಾರೆ.

ಫೇಸ್‌ಬುಕ್ ಪೋಸ್ಟ್‌

"ಉತ್ತರ ಪ್ರದೇಶದಲ್ಲಿ ಪ್ರತಿದಿನ ಸರಾಸರಿ 165 ಅಪರಾಧಗಳು ನಡೆಯುತ್ತಿವೆ. ಇತ್ತೀಚೆಗೆ ನೂರಾರು ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಈ ಪ್ರಕರಣಗಳಲ್ಲಿ ಅನ್ಯಾಯಕ್ಕೊಳಗಾದವರ ಮಾತನ್ನು ಕೇಳಲಾಗುತ್ತಿಲ್ಲ, ಜೊತೆಗೆ ದೂರುದಾರರೊಂದಿಗೆ ಕೆಟ್ಟದಾಗಿ ವರ್ತಿಸಲಾಗುತ್ತಿದೆ" ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

"ಮಹಿಳಾ ಭದ್ರತೆಯ ಹೆಸರಿನಲ್ಲಿ ಜಾಹೀರಾತುಗಳಿಗಾಗಿ ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡುವ ಸರ್ಕಾರದ ಪೊಲೀಸ್ ಠಾಣೆಗಳಲ್ಲಿ, ಮಹಿಳೆ ದೂರು ಸಲ್ಲಿಸಲು ತಲುಪಿದಾಗ, ಕೆಟ್ಟದಾಗಿ ಟೀಕೆ ಮಾಡಲಾಗುತ್ತದೆ. ಸಹಾನುಭೂತಿಯ ಬದಲು ಅಗೌರವ ತೋರಿಸಲಾಗಿದೆ " ಎಂದು ಅವರು ಹೇಳಿದ್ದಾರೆ.

ಅಪರಾಧ ಚಟುವಟಿಕೆಗಳು ವಿಪರೀತವಾಗಿವೆ ಎಂದು ಆರೋಪಿಸಿ ಪ್ರಿಯಾಂಕಾ ಗಾಂಧಿ ಮತ್ತು ಇತರ ಕಾಂಗ್ರೆಸ್ ಮುಖಂಡರು ಉತ್ತರ ಪ್ರದೇಶದ ಕಾನೂನು ಅವ್ಯವಸ್ಥೆ ಕುರಿತು ಆದಿತ್ಯನಾಥ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದು, ಇದನ್ನು ರಾಜ್ಯ ಸರ್ಕಾರ ನಿರಾಕರಿಸಿದೆ.

ABOUT THE AUTHOR

...view details