ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಚಂದ್ರನ ಕಕ್ಷೆಯನ್ನು ತಲುಪಿದ ಚಂದ್ರಯಾನ-2 ರ ಯಶಸ್ಸಿನ ಹೆಜ್ಜೆಗೆ ಭಾರತೀಯ ಬಾಹ್ಯಾಕಾಶ ಸಶೋಧನಾ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಚಂದ್ರನ ಕಕ್ಷೆ ತಲುಪಿದ ಚಂದ್ರಯಾನ- 2 ನೌಕೆ... ಇಸ್ರೋಗೆ ಮೋದಿ ಅಭಿನಂದನೆ - ಇಸ್ರೋ ವಿಜ್ಞಾನಿ
ಚಂದ್ರಯಾನ-2 ಚಂದ್ರನ ಕಕ್ಷೆಯನ್ನು ತಲುಪಿರುವುದಕ್ಕೆ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಚಂದ್ರನತ್ತ ಪಯಣಕ್ಕೆ ಇದು ಪ್ರಮುಖ ಹೆಜ್ಜೆಯಾಗಿದೆ. ಈ ಯಶಸ್ಸಿಗೆ ಮೋದಿ ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇಸ್ರೋಗೆ ಅಭಿನಂದನೆ ಸಲ್ಲಿಸಿದ ಮೋದಿ
ಚಂದ್ರಯಾನ-2, ಚಂದ್ರನ ಕಕ್ಷೆಯನ್ನು ತಲುಪಿರುವುದಕ್ಕೆ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಚಂದ್ರನತ್ತ ಪಯಣಕ್ಕೆ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬೆಳಗ್ಗೆ ಇಸ್ರೋ ಮುಖ್ಯಸ್ಥ ಕೆ. ಸಿವನ್ ಅವರು ಚಂದ್ರಯಾನ -2 ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಕಾಲಿಟ್ಟಿದೆ. ಚಂದ್ರಯಾನ -2 ನೌಕೆಯು ಚಂದ್ರನ ಮೇಲೆ ಸೆಪ್ಟೆಂಬರ್ 7ರಂದು ಲ್ಯಾಂಡ್ ಆಗಲಿದೆ ಎಂದು ಮಾಹಿತಿ ನೀಡಿದ್ದರು.