ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಕೋವಿಡ್-19 ಬಿಕ್ಕಟ್ಟಿನ ಮಧ್ಯೆ ಕ್ರೆಡಿಟ್ ಕಾರ್ಡ್ ಬಳಸುವಾಗ ಸಾಕಷ್ಟು ಹುಷಾರಾಗಿರಬೇಕಾಗುತ್ತದೆ. ಆದಾಯದ ಮೂಲಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ವಿವೇಚನೆ ಇಲ್ಲದೆ ಕ್ರೆಡಿಟ್ ಕಾರ್ಡ್ ಬಳಸಿದರೆ ಸಾಲದ ಸುಳಿಗೆ ಸಿಲುಕಿ ಒದ್ದಾಡಬೇಕಾಗುತ್ತದೆ.
ಈ ಬಿಕ್ಕಟ್ಟಿನ ಸಮಯದಲ್ಲಿ ಕ್ರೆಡಿಟ್ ಕಾರ್ಡ್ ಬಳಸುವಾಗ ಯಾವೆಲ್ಲ ಜಾಣತನದ ಕ್ರಮಗಳನ್ನು ಅನುಸರಿಸಬೇಕೆಂಬುದನ್ನು ಇಲ್ಲಿ ತಿಳಿಸಲಾಗಿದೆ:
ಎಲ್ಲ ಕ್ರೆಡಿಟ್ ಕಾರ್ಡ್ ಸಾಲಗಳನ್ನು ಕ್ರೋಢೀಕರಿಸಿ
ಇಂದಿನ ಹಣಕಾಸು ಅನಿಶ್ಚಿತತೆಯ ಸಮಯದಲ್ಲಿ ಎಲ್ಲ ಕ್ರೆಡಿಟ್ ಕಾರ್ಡ್ ಸಾಲಗಳನ್ನು ಕ್ರೋಢೀಕರಿಸುವುದು ಸೂಕ್ತವಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಲ್ಲಿ ಯಾವುದೇ ಬ್ಯಾಂಕ್ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡಬಹುದು. ಸಾಲದ ಕಂತು ಮರುಪಾವತಿ ಮುಂದೂಡಿಕೆಯ ಯೋಜನೆಯನ್ನು ನೀವು ಪಡೆದುಕೊಂಡಿರದಿದ್ದಲ್ಲಿ ಹಾಗೂ ಆದಾಯಕ್ಕಿಂತ ಸಾಲದ ಪ್ರಮಾಣ ಕಡಿಮೆ ಇದ್ದಲ್ಲಿ ಸುಲಭವಾಗಿ ವೈಯಕ್ತಿಕ ಸಾಲ ಸಿಗುತ್ತದೆ. ಇನ್ನು ಬೇರೊಂದು ಕ್ರೆಡಿಟ್ ಕಾರ್ಡ್ ಪಡೆದು ಅದಕ್ಕೆ ಇತರ ಎಲ್ಲ ಕಾರ್ಡ್ಗಳ ಸಾಲವನ್ನು ಸಹ ಸೇರಿಸಬಹುದು.
ಸಾಲವನ್ನು ಇಎಂಐ ಗೆ ಪರಿವರ್ತಿಸುವ ಆಯ್ಕೆ ಬೇಡ
ಕ್ರೆಡಿಟ್ ಕಾರ್ಡ್ ಬಳಸಿ ದೊಡ್ಡ ಮೊತ್ತದ ಖರೀದಿಯೊಂದನ್ನು ಮಾಡಿದಾಗ, ಆ ಸಾಲವನ್ನು ಇಎಂಐ ಮಾಡಿಕೊಳ್ಳಿ ಎಂದು ಬ್ಯಾಂಕಿನಿಂದ ನಿಮಗೆ ಕರೆ ಬರಲಾರಂಭಿಸುತ್ತವೆ. ಇದು ತೀರಾ ಆಕರ್ಷಣೀಯವಾಗಿ ಕಂಡರೂ ಇದರ ಮೋಹಕ್ಕೆ ಬಲಿಯಾಗಬೇಡಿ. ಈ ಆಯ್ಕೆಯಲ್ಲಿ ದೊಡ್ಡ ಮೊತ್ತದ ಪ್ರೊಸೆಸಿಂಗ್ ಫೀ ಹಾಗೂ ಹೆಚ್ಚಿನ ಬಡ್ಡಿದರ ವಿಧಿಸಲಾಗುತ್ತದೆ ಎಂಬುದು ಗೊತ್ತಿರಲಿ. ಇದರ ಜೊತೆಗೆ ಈ ಇಎಂಐ ಗಳು ಮುಗಿಯುವವರೆಗೂ ಕಾರ್ಡ್ನಲ್ಲಿ ಬಾಕಿ ಉಳಿದ ಲಿಮಿಟ್ ಬ್ಲಾಕ್ ಆಗಿರುತ್ತದೆ. ಹೀಗಾಗಿ ಈ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು!
ಪ್ರತಿ ತಿಂಗಳೂ ಕ್ರೆಡಿಟ್ ಕಾರ್ಡ್ ಬಿಲ್ ಪರಿಶೀಲಿಸಿ