ಕರ್ನಾಟಕ

karnataka

ETV Bharat / bharat

ಪವನ್​ ಆಟಕ್ಕೆ ಬೆಚ್ಚಿಬಿದ್ದ ಬಲಿಷ್ಠ ಯುಪಿ ಯೋಧಾ.. ಸೆಮಿಫೈನಲ್​ಗೆ ಬೆಂಗಳೂರು ಬುಲ್ಸ್​ ಲಗ್ಗೆ! - ಬೆಂಗಳೂರು ಬುಲ್ಸ್​

ಪವನ್​ ಶೆರಾವತ್​ ರೈಡಿಂಗ್​ ದಾಳಿಗೆ ಬಲಿಷ್ಠ ಯುಪಿ ಯೋಧಾ ತಂಡ ಬೆಚ್ಚಿಬಿದ್ದಿದ್ದು, ಮೊದಲ ಎಲಿಮಿನೇಟರ್​​ ಹೋರಾಟದಲ್ಲಿ ಬೆಂಗಳೂರು ಬುಲ್ಸ್​ ವಿರುದ್ಧ ರೋಚಕ ಸೋಲು ಕಂಡಿದೆ.

ಸೆಮಿಫೈನಲ್​ಗೆ ಬೆಂಗಳೂರು ಬುಲ್ಸ್

By

Published : Oct 14, 2019, 9:51 PM IST

Updated : Oct 14, 2019, 11:03 PM IST

ಅಹಮದಾಬಾದ್​​: 7ನೇ ಆವೃತ್ತಿ ಪ್ರೊ ಕಬಡ್ಡಿಯ ಮೊದಲ ಎಲಿಮಿನೇಟರ್​ ಹೋರಾಟದಲ್ಲಿ ಬೆಂಗಳೂರು ಬುಲ್ಸ್​ ಗೆಲುವು ದಾಖಲು ಮಾಡಿದೆ. ಬಲಿಷ್ಠ ಯುಪಿ ಯೋಧಾ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಸೆಮಿಫೈನಲ್​ಗೆ ಲಗ್ಗೆ ಹಾಕಿದೆ.

ಅಹಮದಾಬಾದ್​​ನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ರೋಚಕ ಹೋರಾಟ ಕಂಡು ಬಂದಿತು. ಆರಂಭದಲ್ಲಿ ಬೆಂಗಳೂರು ಬುಲ್ಸ್​ ಮೇಲೆ ಸವಾರಿ ಮಾಡಿದ ಯೋಧಾ ತಂಡ ಸುಲಭವಾಗಿ ಗೆಲುವು ಕಾಣುವ ವಿಶ್ವಾಸದಲ್ಲಿತ್ತು. ಆದರೆ ಕ್ಯಾಪ್ಟನ್​ ಪವನ್​ ಶೆರಾವತ್​ ಆಟಕ್ಕೆ ಬೆಚ್ಚಿಬಿದ್ದ ಎದುರಾಳಿ ತಂಡ ಕೊನೆ ಕ್ಷಣದಲ್ಲಿ ಸೋತು ಶರಣಾಯಿತು.

ಸೆಮಿಫೈನಲ್​ಗೆ ಬೆಂಗಳೂರು ಬುಲ್ಸ್

ಆಟದ ಒಂದು ಹಂತದಲ್ಲಿ ಯೋಧಾ 34 ಅಂಕ ಹಾಗೂ ಬುಲ್ಸ್​​ 27 ಅಂಕಗಳಿಕೆ ಮಾಡಿದ್ದರಿಂದ ಹಾಲಿ ಚಾಂಪಿಯನ್​ ಬೆಂಗಳೂರು ಸೋಲಿನತ್ತ ಮುಖ ಮಾಡಿತ್ತು. ಆದರೆ ಈ ವೇಳೆ ಪವನ್​ ಸೂಪರ್​ ರೈಡ್ ಮಾಡುವ ಮೂಲಕ ಎದುರಾಳಿ ತಂಡವನ್ನ ಆಲೌಟ್​ ಮಾಡಿ ಪಾಯಿಂಟ್​ 35-36 ಆಗುವಂತೆ ಮಾಡಿದರು. ಇದರ ಬೆನ್ನಲ್ಲೇ ಯೋಧಾ ತಂಡ ಕೂಡ 1 ಅಂಕ ಗಳಿಕೆ ಮಾಡಿದ್ದರಿಂದ ಪಂದ್ಯ ಡ್ರಾಗೊಂಡಿತ್ತು.​​

ಉಭಯ ತಂಡಗಳು ತಮಗೆ ನೀಡಿದ್ದ ಸಮಯದಲ್ಲಿ 36-36 ಅಂಕಗಳಿಂದ ಡ್ರಾ ಸಾಧಿಸಿದ್ದಕ್ಕಾಗಿ 6ನಿಮಿಷಗಳ ಕಾಲ ಹೆಚ್ಚಿನ ಕಾಲಾವಕಾಶ ನೀಡಲಾಗಿತ್ತು. ಈ ವೇಳೆ ಬುಲ್ಸ್​ ಆರಂಭದಲ್ಲಿ 39-38 ಅಂಕಗಳಿಂದ ಹಿನ್ನಡೆ ಅನುಭವಿಸಿತ್ತು. ಇದಾದ ಬಳಿಕ ಪವನ್​ ನಡೆಸಿದ ರೈಡ್​​ನಲ್ಲಿ ಎದುರಾಳಿ ತಂಡದ ಮೂವರನ್ನ ಔಟ್​ ಮಾಡಿದ್ದರಿಂದ ರೋಚಕ ಗೆಲುವು ದಾಖಲು ಮಾಡುವಂತೆ ಆಯಿತು. ಕೊನೆಯದಾಗಿ ತಂಡ 45-48 ಅಂಕಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆ ಹಾಕಿದೆ. ಬುಲ್ಸ್​ ತಂಡದ ಕ್ಯಾಪ್ಟನ್​ ಪವನ್​ ಕುಮಾರ್​​ 18 ರೈಡಿಂಗ್​ ಪಾಯಿಂಟ್​ ಕಲೆ ಹಾಕಿದ್ರೆ, ಸುಮಿತ್​​ 6, ರೋಹಿತ್​ 1 ಪಾಯಿಂಟ್​ ಕಲೆ ಹಾಕಿದರು. ಅದೇ ಎದುರಾಳಿ ತಂಡದ ರಿಷಾಂಕ್ 6 ರೈಡಿಂಗ್​ ಪಾಯಿಂಟ್​ ಶ್ರೀಕಾಂತ್​​ 7 ಅಂಕ ಗಳಿಸಿದರು.

ಅ.16 ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, ಮೊದಲ ಸೆಮೀಸ್‌ನಲ್ಲಿ ಡೆಲ್ಲಿ ತಂಡದ ಎದುರು ಎಲಿಮಿನೇಟರ್‌ 1ರಲ್ಲಿ ಗೆದ್ದ ಬೆಂಗಳೂರು ತಂಡ ಹಾಗೂ 2ನೇ ಸೆಮೀಸ್​​ನಲ್ಲಿ ಬೆಂಗಾಲ್ ವಿರುದ್ಧ ಎಲಿಮಿನೇಟರ್​ 2ರಲ್ಲಿ ಗೆದ್ದ ಯು ಮುಂಬಾ ತಂಡ ಸೆಣಸಾಟ ನಡೆಸಲಿದೆ. ಯೋಧಾ ತಂಡ ಪ್ರೊ ಕಬಡ್ಡಿ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ 45–33 ಪಾಯಿಂಟ್‌ಗಳಿಂದ ಬೆಂಗಳೂರು ಬುಲ್ಸ್‌ ತಂಡವನ್ನು ಸೋಲಿಸಿತ್ತು. ಆದರೆ ಇದೀಗ ಪವನ್​ ಬಳಗ ಸರಿಯಾದ ಪ್ರತ್ಯುತ್ತರ ನೀಡಿದೆ.

ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಅಬ್ಬರಕ್ಕೆ ಮಣಿದ ಹರಿಯಾಣ ಸ್ಟಿಲರ್ಸ್​​ 46-38 ಅಂಕಗಳಿಂದ ಸೋಲು ಕಾಣುವಂತಾಯಿತು.

Last Updated : Oct 14, 2019, 11:03 PM IST

ABOUT THE AUTHOR

...view details