ಕೋಲ್ಕತ್ತಾ:ದೇಶಾದ್ಯಂತ ಅನ್ಲಾಕ್ 1 ಜಾರಿಯಲ್ಲಿದ್ದು, ಬಸ್ ಸಂಚಾರ ಸೇರಿದಂತೆ ಕೆಲವೊಂದು ಅಗತ್ಯ ಸೇವೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಪಶ್ಚಿಮ ಬಂಗಾಳ ಮಾತ್ರ ಜುಲೈ 31ರವರೆಗೆ ಲಾಕ್ಡೌನ್ ಮುಂದೂಡಿಕೆ ಮಾಡಿ ಮಹತ್ವದ ಆದೇಶ ಹೊರಹಾಕಿದೆ.
ಪಶ್ಚಿಮ ಬಂಗಾಳದಲ್ಲಿ ಜುಲೈ 31ರವರೆಗೆ ಲಾಕ್ಡೌನ್... ಮಮತಾ ಬ್ಯಾನರ್ಜಿ ಘೋಷಣೆ - ಪಶ್ಚಿಮ ಬಂಗಾಳ ಲಾಕ್ಡೌನ್
ಕೆಲವೊಂದು ಅಗತ್ಯ ಸೇವೆಗಳಿಗೆ ಅವಕಾಶ ನೀಡಿ ಪಶ್ಚಿಮ ಬಂಗಾಳ ಜುಲೈ 31ರವರೆಗೆ ಲಾಕ್ಡೌನ್ ಆದೇಶ ಹೊರಹಾಕಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಇಂದು ಸರ್ವಪಕ್ಷ ಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದು, ಆರೋಗ್ಯ ಸೇವೆ ಸೇರಿದಂತೆ ಕೆಲವೊಂದು ಅಗತ್ಯ ಸೇವೆಗಳಿಗೆ ಅವಕಾಶ ನೀಡಿದ್ದಾರೆ.
ರೈಲು, ಮೆಟ್ರೋ ಹಾಗೂ ಶಾಲಾ- ಕಾಲೇಜ್ಗಳು ಬಂದ್ ಇರಲಿದ್ದು, ಸದ್ಯದ ಸ್ಥಿತಿಯಲ್ಲಿ ಪರೀಕ್ಷೆ ನಡೆಸದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 14,728 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 9,218 ಆ್ಯಕ್ಟಿವ್ ಕೇಸ್ಗಳಿವೆ. ಜತೆಗೆ 580 ಜನರು ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚು ಕಂಡು ಬರುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.