ಕೊಲ್ಕತ್ತಾ:ನವೆಂಬರ್ 25ರಂದು ನಡೆದ ಪಶ್ಚಿಮ ಬಂಗಾಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಲಿಯಾಗಂಜ್ ವಿಧಾನಸಭಾ ಸ್ಥಾನ ಟಿಎಂಸಿ ಪಾಲಾಗಿದೆ.
ಇಂದು ಬೆಳಗ್ಗೆ 8 ಗಂಟೆಯಿಂದಲೇ ಶುರುವಾಗಿದ್ದ ಪಶ್ಚಿಮ ಬಂಗಾಳ ಉಪಚುನಾವಣೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಟಿಎಂಸಿ ಪಕ್ಷ ಗೆದ್ದು ಬೀಗಿದೆ.
ಇನ್ನೂ ವಿಧಾನಸಭಾ ಸ್ಥಾನಕ್ಕೆ ಕಲಿಯಗಂಜ್, ಕರೀಂಪುರ ಮತ್ತು ಖರಗ್‌ಪುರ ಸದರ್ ಕ್ಷೇತ್ರಗಳಿಂದ 18 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು, ಸರಿಸುಮಾರು 7 ಲಕ್ಷ ಮತದಾರರಲ್ಲಿ ಶೇ. 78ರಷ್ಟು ಮತದಾನವಾಗಿದೆ ಎಂದು ಪಶ್ಚಿಮ ಬಂಗಾಳ ಚುನಾವಣಾ ಆಯೋಗ ತಿಳಿಸಿದೆ.
ಶಾಸಕರಾದ ದಿಲೀಪ್ ಘೋಷ್ (ಬಿಜೆಪಿ) ಮತ್ತು ಮಹುವಾ ಮೊಯಿತ್ರಾ (ಟಿಎಂಸಿ) ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭಾ ಸ್ಥಾನಗಳನ್ನು ಗೆದ್ದ ಹಿನ್ನಲೆ ಖರಗ್‌ಪುರ್ ಸದರ್ ಮತ್ತು ಕರಿಮ್‌ಪುರ ಸ್ಥಾನಗಳು ಖಾಲಿಯಾಗಿತ್ತು. ಮತ್ತು ಕಲಿಯಗಂಜ್ ಎಂಎಲ್ಎ ಆಗಿದ್ದ ಪರಮಾಥನಾಥ್ ರಾಯ್ ನಿಧನ ಹಿನ್ನಲೆ ಆ ಸ್ಥಾನವೂ ಖಾಲಿಯಾಗಿತ್ತು. ಹೀಗಾಗಿ ಈ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲಾಯಿತು.
ಸಿಪಿಐ (ಎಂ) ಬೆಂಬಲದೊಂದಿಗೆ ಕಾಂಗ್ರೆಸ್ ನಾಮಿನಿ ಧಿತಾಶ್ರೀ ರಾಯ್ ಅವರನ್ನು ಟಿಎಂಸಿಯ ತಪನ್ ದೇಬ್ ಸಿನ್ಹಾ ಮತ್ತು ಬಿಎಪಿಯ ಕಮಲಗಂದ್ರದಲ್ಲಿ ಕಮಲ್ ಚಂದ್ರ ಸರ್ಕಾರ್ ವಿರುದ್ಧ ಕಣಕ್ಕಿಳಿಸಲಾಗಿತ್ತು. ಹಾಗೂ ಕರಿಂಪುರದಲ್ಲಿ ಸಿಪಿಐ (ಎಂ) ಕಾಂಗ್ರೆಸ್ ಅಭ್ಯರ್ಥಿ ಘೋಲಮ್ ರಬ್ಬಿ ಮಜುಂದಾರ್ ಮತ್ತು ಟಿಎಂಸಿಯ ಬಿಮಾಲೆಂಡು ಸಿಂಘಾ ರಾಯ್ ವಿರುದ್ಧ ಸ್ಪರ್ಧಿಸಿದ್ದರು. ಇನ್ನೂ ಖರಗ್‌ಪುರ ಸದರ್‌ನಲ್ಲಿ ಬಿಜೆಪಿಯ ಪ್ರೇಮ್ ಚಂದ್ರ ಝ, ಕಾಂಗ್ರೆಸ್-ಸಿಪಿಐ (ಎಂ) ಮೈತ್ರಿಕೂಟದ ಚಿತ್ತರಂಜನ್ ಮಂಡಲ್ ಮತ್ತು ಟಿಎಂಸಿಯ ಪ್ರದೀಪ್ ಸರ್ಕಾರ್ ಸ್ಪರ್ಧಿಸಿದ್ದರು.
ಖರಗ್‌ಪುರ ಸದರ್ ಸ್ಥಾನವನ್ನು ಟಿಎಂಸಿ 20, 811 ಮತಗಳಿಂದ ಗೆದ್ದುಕೊಂಡಿದೆ:
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಖರಗ್‌ಪುರ್ ಸದರ್ ಸ್ಥಾನದಲ್ಲಿ 20, 811 ಮತಗಳ ಅಂತರದಿಂದ ಜಯ ದಾಖಲಿಸಿದೆ. ಟಿಎಂಸಿ ಅಭ್ಯರ್ಥಿ ಪ್ರದೀಪ್ ಸರ್ಕಾರ್ ಅವರು ಬಿಜೆಪಿ ಅಭ್ಯರ್ಥಿ ಪ್ರೇಮ್ ಚಂದ್ರ ಝ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಚಿತ್ತರಂಜನ್ ಮಂಡಲ್ ಅವರನ್ನು ಸೋಲಿಸಿದ್ದಾರೆ.