ಪೆರುಮಲ್ಲಾಪುರಂ(ಆಂಧ್ರಪ್ರದೇಶ):ಪ್ರತಿಯೊಂದು ಪ್ರದೇಶವು ಅಲ್ಲಿನ ವಿಶಿಷ್ಟ ತಿನಿಸುಗಳಿಂದ ಹೆಚ್ಚು ಪ್ರಸಿದ್ಧಿ ಹೊಂದಿರುತ್ತದೆ. ಅದರಂತೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಪೆರುಮಲ್ಲಾಪುರಂನಲ್ಲಿ ತಯಾರಿಸುವ 'ಬೆಲ್ಲಂ ಗರೆಲು' ವಡೆ ಹೆಚ್ಚು ಜನಪ್ರಿಯವಾಗಿದೆ.
ಈ ವಡೆಗಿದೆ 70ವರ್ಷಗಳ ಇತಿಹಾಸ... ಆಂಧ್ರದಲ್ಲೇ ಇದು ಸಖತ್ ಫೇಮಸ್!
ಪ್ರತಿಯೊಂದು ಪ್ರದೇಶವು ಅಲ್ಲಿನ ವಿಶಿಷ್ಟ ತಿನಿಸುಗಳಿಂದ ಹೆಚ್ಚು ಪ್ರಸಿದ್ಧಿ ಹೊಂದಿರುತ್ತದೆ. ಅದರಂತೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಪೆರುಮಲ್ಲಾಪುರಂನಲ್ಲಿ ತಯಾರಿಸುವ 'ಬೆಲ್ಲಂ ಗರೆಲು' ವಡೆ ಹೆಚ್ಚು ಜನಪ್ರಿಯವಾಗಿದೆ.
70 ವರ್ಷಗಳ ಇತಿಹಾಸವಿರುವ ಪೆರುಮಲ್ಲಾಪುರಂ ವಡೆಗೆ, ಸ್ಥಳೀಯವಾಗಿ 'ಬೆಲ್ಲಂ ಗರೆಲು' ಕರೆಯಲಾಗುತ್ತೆ. ಈ ವಡಾಗಳನ್ನ ಬೆಲ್ಲದ ಸೂಪ್‌ನಲ್ಲಿ ಸ್ವಲ್ಪ ಸಮಯದವರೆಗೆ ನೆನೆಸಿ ತಯಾರಿಸಲಾಗುತ್ತೆ. 1940ರಲ್ಲಿ ದಂಪತಿಗಳು ಪೆರುಮಲ್ಲಾಪುರಂದಲ್ಲಿ ಒಂದು ಸಣ್ಣ ಹೋಟೆಲ್ ಪ್ರಾರಂಭಿಸಿ, ಬೆಲ್ಲಮ್ ಗರೆಲು ತಯಾರಿಸಲು ಪ್ರಾರಂಭಿಸಿದರು. ಇದು ಹೋಟೆಲ್ನ ಪ್ರಸಿದ್ಧ ಖಾದ್ಯವಾಯಿತು. ಆ ಬಳಿಕ ಬೆಲ್ಲಂ ಗರೆಲು ವಡಾದಿಂದಾಗಿ ಪೆರುಮಲ್ಲಾಪುರಂ ಗ್ರಾಮ ಹೆಚ್ಚು ಜನಪ್ರಿಯವಾಗತೊಡಗಿತು.
ಸದ್ಯ,ಈ ವಡೆ ಪ್ರಾರಂಭಿಸಿದ ದಂಪತಿ ನಿಧನರಾಗಿದ್ದು, ಅವರ ಮಗ ಮತ್ತು ಮೊಮ್ಮಗ ಈ ಹೋಟೆಲ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ವಡೆಗಳಿಗೆ ಭಾರಿ ಬೇಡಿಕೆ ಇದ್ದು, ಜನಪ್ರಿಯವಾಗಿದೆ.