ಬೀಜಿಂಗ್ (ಚೀನಾ):ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣದಿಂದ ಚೀನಾ ತನ್ನ ರಾಜಧಾನಿ ಬೀಜಿಂಗ್ನಿಂದ ಹೊರಡುವ ಹಾಗೂ ಬೀಜಿಂಗ್ಗೆ ಬರುವ ನೂರಾರು ವಿಮಾನಗಳನ್ನು ರದ್ದು ಮಾಡಿದೆ.
ಕೊರೊನಾ ಸೋಂಕಿತರ ಸಂಖ್ಯೆ ಬೀಜಿಂಗ್ನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಗರದಲ್ಲಿ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಬೀಜಿಂಗ್ನಿಂದ ಹೊರ ಪ್ರಯಾಣಿಸುವ ಅನಿವಾರ್ಯತೆ ಇದ್ದವರು ತಾವು ಹೊರಡುವ ಏಳು ದಿನ ಮೊದಲು ಕೊರೊನಾ ಸೋಂಕು ಪತ್ತೆ ಹೆಚ್ಚುವ ನ್ಯೂಕ್ಲಿಕ್ ಆಸಿಡ್ ಟೆಸ್ಟ್ ವರದಿಯ ಫಲಿತಾಂಶವನ್ನು ಬಹಿರಂಗಪಡಿಸಬೇಕು. ವರದಿಯ ಫಲಿತಾಂಶ ನೆಗೆಟಿವ್ ಇದ್ದರೆ ಮಾತ್ರ ಅವರನ್ನು ಬೇರೆಡೆಗೆ ತೆರಳಲು ಅವಕಾಶ ಮಾಡಿಕೊಡಲಾಗುತ್ತದೆ.