ಕರ್ನಾಟಕ

karnataka

ETV Bharat / bharat

ವೃದ್ಧ ಭಿಕ್ಷುಕಿ ಬಳಿ ಇಷ್ಟೊಂದು ನಗದು, ಆಧಾರ್​ ಕಾರ್ಡ್​... ಬ್ಯಾಂಕ್​ನಲ್ಲಿದ್ದ ಠೇವಣಿ ನೋಡಿ ಬೆಚ್ಚಿದ ಪೊಲೀಸರು..! - ಪುದುಚರಿ ಸುದ್ದಿ

ತಮಿಳುನಾಡಿನ ಕಲ್ಲಿಕುರಿಚಿ ಮೂಲದ ಪಾರ್ವತಮ್ಮ ಅವರು ಸುಮಾರು 2 ಲಕ್ಷ ರೂ. ಠೇವಣಿ ಬ್ಯಾಂಕ್​ನಲ್ಲಿ ಇರಿಸಿದ್ದಾರೆ. ಸುಮಾರು 12,000 ರೂ. ನಗದು ಮೊತ್ತ ಹೊಂದಿದ್ದಾರೆ. ಪುದುಚೇರಿ ದೇವಾಲಯ ಮುಂಭಾಗದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಬಳಿಯ ಹಣ ಕಂಡು ಪೊಲೀಸ್​ ಅಧಿಕಾರಿಗಳು ಅಚ್ಚರಿಗೊಂಡರು.

ಬಿಕ್ಷುಕಿ

By

Published : Nov 8, 2019, 10:08 AM IST

ಪುದುಚೇರಿ:ಪುದುಚೇರಿ ದೇವಾಲಯ ಮುಂಭಾಗದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಬಳಿಯ ಹಣ ಕಂಡು ಪೊಲೀಸ್​ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.

ಪಾರ್ವತಮ್ಮ (70) ಎಂಬ ವೃದ್ಧ ಭಿಕ್ಷುಕಿ ಬಳಿ ಅಧಿಕಾರಿಗಳು 12,000 ರೂ. ನಗದು, 2 ಲಕ್ಷ ರೂ. ಬ್ಯಾಂಕ್ ಖಾತೆಯಲ್ಲಿ ಠೇವಣಿ ಮತ್ತು ಆಧಾರ್ ಕಾರ್ಡ್ ಸಹ ಹೊಂದಿದ್ದಾರೆ. ಭಿಕ್ಷೆಯ ಮೂಲಕ ಈ ಹಣ ಸಂಪಾದಿಸಿರುವುದಾಗಿ ಪಾರ್ವತಮ್ಮ ಹೇಳಿಕೊಂಡಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಂದ ಭಿಕ್ಷೆ ಪಡೆಯುವ ಮೂಲಕ. ದೇವಾಲಯದ ಹೊರಗೆ ಪಾರ್ವತಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಳು. ಅವಳು ದಾರಿಹೋಕರನ್ನು ನೆರವಾಗುವಂತೆ ಮನವಿ ಮಾಡುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ಎಸ್​​ಪಿ ಮಾರನ್ ತಿಳಿಸಿದ್ದಾರೆ.

ತಮಿಳುನಾಡಿನ ಕಲ್ಲಿಕುರಿಚಿ ಮೂಲದ ಪಾರ್ವತಮ್ಮ ಅವರು ಸುಮಾರು 2 ಲಕ್ಷ ರೂ. ಠೇವಣಿ ಬ್ಯಾಂಕ್​ನಲ್ಲಿ ಇರಿಸಿದ್ದಾರೆ. ಸುಮಾರು 12,000 ರೂ. ನಗದು ಮೊತ್ತ ಹೊಂದಿದ್ದಾರೆ. ಈಗ ಅವರನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದರು.

ಪತಿ 40 ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಅಂದಿನಿಂದ ಅವಳು ಪುದುಚೇರಿಯ ಬೀದಿಗಳಲ್ಲಿ ಸಂಚರಿಸುತ್ತಿದ್ದಳು. ಪಾರ್ವತಮ್ಮ ಕಳೆದ ಎಂಟು ವರ್ಷಗಳಿಂದ ದೇವಾಲಯದಲ್ಲಿ ವಾಸಿಸುತ್ತಿದ್ದು, ಅಪರಿಚಿತರು ನೀಡುವ ಆಹಾರವನ್ನೇ ಸೇವಿಸಿ ಭಿಕ್ಷೆ ಬೇಡುತ್ತಿದ್ದಳು ಎಂದು ನಾಥಿಯಾ ಎಂಬ ಅಂಗಡಿಯವರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details