ಕರ್ನೂಲ್(ಆಂಧ್ರಪ್ರದೇಶ): ಮಸೀದಿಯೊಂದರ ಬಳಿ ಇದ್ದ ಭಿಕ್ಷುಕನ ಬಳಿ ಎರಡು ಲಕ್ಷ ರೂಪಾಯಿ ನಗದು ಪತ್ತೆಯಾದ ಘಟನೆ ಕರ್ನೂಲ್ ಜಿಲ್ಲೆಯ ಧೋಣ್ ಬಳಿ ನಡೆದಿದೆ. ಶೋಚನೀಯ ಸ್ಥಿತಿಯಲ್ಲಿದ್ದ ಈ ಭಿಕ್ಷುಕನನ್ನು ಶ್ರೀನು ಎಂದು ಗುರುತಿಸಲಾಗಿದ್ದು, ಆತನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಗ್ಗರ್ ಅಲ್ಲ ಕುಬೇರ.. ಭಿಕ್ಷುಕನ ಬಳಿ ಪತ್ತೆಯಾಯ್ತು 2 ಲಕ್ಷ ರೂ. ನಗದು, 12 ಅಂಗಿಗಳು! - ಕರ್ನೂಲ್ನಲ್ಲಿ ಭಿಕ್ಷುಕ
ಮಸೀದಿಯೊಂದರ ಬಳಿ ಪತ್ತೆಯಾದ ಭಿಕ್ಷುಕನ ಬಳಿ 2 ಲಕ್ಷ ನಗದು ಹಾಗೂ 12 ಅಂಗಿಗಳು ಪತ್ತೆಯಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಭಿಕ್ಷುಕ
ಈ ವ್ಯಕ್ತಿ ತೆಲಂಗಾಣದ ಮೆಹಬೂಬ್ ನಗರಕ್ಕೆ ಸೇರಿದವನೆಂದು ಧೋಣ್ನ ಸರ್ಕಲ್ ಇನ್ಸ್ಪೆಕ್ಟರ್ ಸ್ಪಷ್ಟಪಡಿಸಿದ್ದಾರೆ. ಈತನ ಬಳಿಯಿದ್ದ ನಗದು ಹಣದಲ್ಲಿ 11 ಸಾವಿರ ರೂಪಾಯಿ ಹಳೆಯ ನೋಟುಗಳು ಹಾಗೂ 1.25 ಲಕ್ಷ ರೂಪಾಯಿ ಹೊಸ ನೋಟುಗಳು ಕಂಡುಬಂದಿವೆ. ಇದರ ಜೊತೆಗೆ 12 ಅಂಗಿಗಳು ಕೂಡಾ ಪತ್ತೆಯಾಗಿದ್ದು, ಪೊಲೀಸರಲ್ಲಿ ಅಚ್ಚರಿ ಮೂಡಿಸಿದೆ.
ಈ ವ್ಯಕ್ತಿಯನ್ನು ಈಗ ಪೊಲೀಸರು ರಕ್ಷಣೆ ಮಾಡಿದ್ದು, ತುಂಬಾ ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ ಎಂದು ತಿಳಿದುಬಂದಿದೆ.