ಕರ್ನಾಟಕ

karnataka

By

Published : Jun 15, 2019, 4:22 PM IST

ETV Bharat / bharat

'ಮನ್ ಕಿ ಬಾತ್​'ನಲ್ಲಿ ಮೋದಿ ಜತೆಗೆ ನಿಮ್ಮ ಮನದ ಮಾತು ಹಂಚ್ಕೊಳ್ಳಿ.. ಈ ನಂಬರ್​ಗೆ ಕರೆ ಮಾಡಿ!

ಇದೇ ತಿಂಗಳು ಪುನರಾರಂಭಗೊಳ್ಳಲಿರುವ ಮನ್​ ಕಿ ಬಾತ್​ಗಾಗಿ ಟೋಲ್ ಫ್ರೀ ನಂಬರ್​ 1800-11-7800ಗೆ ಕರೆ ಮಾಡಿ, ನಿಮ್ಮ ಸಂದೇಶವೇನೆಂದು ತಿಳಿಸಬಹುದು. ಅಲ್ಲದೆ, MyGov Open Forum ಮೂಲಕವೂ ಸಲಹೆ ಬರೆದು ಕಳಿಸಬಹುದು. ಅತ್ಯುತ್ತಮ ಸಂವಾದಕ್ಕಾಗಿ ಎದುರುನೋಡುತ್ತಿರುವೆ ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

Mann Ki Baat

ನವದೆಹಲಿ:ಪ್ರಧಾನಿಯಾದ ಮೊದಲ ಅವಧಿಯಲ್ಲಿ ಮನ್​ ಕಿ ಬಾತ್​ ಮೂಲಕ ದೇಶದ ಜನರಿಗ ಅಗತ್ಯ ಸಂದೇಶ ನೀಡುತ್ತಿದ್ದ ಮೋದಿ, ಇದೀಗ ಎರಡನೇ ಅವಧಿಯಲ್ಲಿ ಜನರನ್ನೂ ಸಂವಾದದಲ್ಲಿ ಒಳಗೊಳ್ಳಲು ಮುಂದಾಗಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ಇದೇ ತಿಂಗಳು ಪುನರಾರಂಭಗೊಳ್ಳಲಿರುವ ಮನ್​ ಕಿ ಬಾತ್​ಗಾಗಿ ಟೋಲ್ ಫ್ರೀ ನಂಬರ್​ 1800-11-7800ಗೆ ಕರೆ ಮಾಡಿ, ನಿಮ್ಮ ಸಂದೇಶವೇನೆಂದು ತಿಳಿಸಬಹುದು. ಅಲ್ಲದೆ, MyGov Open Forum ಮೂಲಕವೂ ಸಲಹೆ ಬರದು ಕಳಿಸಬಹುದು. ಅತ್ಯುತ್ತಮ ಸಂವಾದಕ್ಕಾಗಿ ಎದುರುನೋಡುತ್ತಿರುವೆ ಎಂದಿದ್ದಾರೆ.

ಜೂನ್​ 30ರಂದು ಮನ್ ಕಿ ಬಾತ್ ಕಾರ್ಯಕ್ರಮದ ಪ್ರಸಾರ ಆರಂಭವಾಗಲಿದೆ. ಜೂನ್ 11 ರಿಂದ 26ರವರೆಗೆ ಈ ಸಂಖ್ಯೆ ಸಕ್ರಿಯವಾಗಿರಲಿದ್ದು, ಜನರ ಸಲಹೆಗಳನ್ನು ಮುದ್ರಿಸಿಕೊಳ್ಳಲಾಗುತ್ತದೆ.ಕಳೆದ ಫೆಬ್ರವರಿ ತಿಂಗಳಲ್ಲಿ ತಮ್ಮ ಮೊದಲ ಅವಧಿಯ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮೋದಿ ನೀಡಿದ್ದರು. ಲೋಕಸಭೆ ಚುನಾವಣೆ ಕಾರಣ ಸ್ಥಗಿತಗೊಂಡಿದ್ದ ಅವರ ಜನಪ್ರಿಯ ಕಾರ್ಯಕ್ರಮ ಇದೀಗ ಪುನರಾರಂಭಗೊಳ್ಳುತ್ತಿದೆ. ಈ ಬಾರಿ ಜನರ ಅಭಿಪ್ರಾಯಗಳನ್ನೂ ಆಲಿಸಿ, ಅವುಗಳನ್ನು ಸಾರ್ವಜನಿಕಗೊಳಿಸುವ ಉದ್ದೇಶ ಪ್ರಧಾನಿಗಳದ್ದಾಗಿದೆ.

For All Latest Updates

TAGGED:

ABOUT THE AUTHOR

...view details