ರಣತಂಬೂರ್(ರಾಜಸ್ಥಾನ):ಅರಣ್ಯ ಪ್ರದೇಶದಲ್ಲಿ ನರಭಕ್ಷಕ ಪ್ರಾಣಿಗಳು ಸಾಮಾನ್ಯವಾಗಿ ಸಾಧು ಪ್ರಾಣಿಗಳ ಮೇಲೆ ದಾಳಿ ನಡೆಸಿ ತಮ್ಮ ಆಹಾರ ಪಡೆದುಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ ಕೆಲವೊಮ್ಮೆ ಸಾಧು ಪ್ರಾಣಿ ತಮ್ಮ ಜೀವ ರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡಬೇಕಾಗುತ್ತದೆ. ಸದ್ಯ ಅಂತಹ ಘಟನೆವೊಂದು ರಾಜಸ್ಥಾನದಲ್ಲಿ ನಡೆದಿದೆ.
ಹುಲಿಗಳ ದಾಳಿ ಹಿಮ್ಮೆಟ್ಟಿ ನಿಂತ ಕರಡಿ... ಹೆದರಿ ಕಾಲ್ಕಿತ್ತ ಟೈಗರ್ಸ್!
ತನ್ನ ಪ್ರಾಣ ಉಳಿಸಿಕೊಳ್ಳುವ ಉದ್ದೇಶದಿಂದ ಕರಡಿವೊಂದು ಹುಲಿಗಳನ್ನೇ ಹಿಮ್ಮೆಟ್ಟಿಸಿರುವ ಘಟನೆ ನಡೆದಿದ್ದು, ಇದೀಗ ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ರಾಜಸ್ಥಾನದ ರಣತಂಬೂರ್ನಲ್ಲಿರುವ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಅಚ್ಚರಿ ಘಟನೆ ನಡೆದಿದೆ. ಕರಡಿ ಬೇಟೆಯಾಡಲು ಹುಲಿವೊಂದು ಅದರ ಹಿಂದೆ ಬಂದಿದೆ. ಈ ವೇಳೆ ಕರಡಿ ಏಕಾಏಕಿಯಾಗಿ ಹುಲಿ ಮೇಲೆ ತಿರುಗಿ ಬಿದ್ದಿದೆ. ಈ ವೇಳೆ ಕಂಗಾಲಾದ ಟೈಗರ್ ಅಲ್ಲಿಂದ ಓಡಲು ಶುರು ಮಾಡಿದೆ. ಇದರ ಬೆನ್ನಲ್ಲೇ ಮತ್ತೊಂದು ಹುಲಿ ಅಲ್ಲಿರುವುದು ಕಂಡು ಬಂದಿದೆ. ಮೊದಲ ಹುಲಿ ಓಡಿ ಹೋಗಿದ್ದರಿಂದ ಎರಡನೇ ಹುಲಿ ಕೂಡ ದಾಳಿ ನಡೆಸುವ ಧೈರ್ಯ ಮಾಡಿಲ್ಲ. ಇದೇ ವೇಳೆ ಕರಡಿ ತನ್ನ ಎರಡು ಕಾಲು ಮೇಲೆತ್ತಿ ಹುಲಿಗಳನ್ನ ಬೆದರಿಸುವ ಕೆಲಸ ಮಾಡಿದೆ.
ಈ ವಿಡಿಯೋ ತುಣಕು ಇದೀಗ ರಾಜ್ಯಸಭಾ ಸಂಸದ ಪರಿಮಳ್ ನಾಥ್ವಾನಿ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ನೆಟ್ಟಿಜನ್ಸ್ ಕುತೂಹಲ ಹಾಗೂ ಅಚ್ಚರಿಗೆ ಕಾರಣವಾಗಿದೆ.