ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದೀಪಾವಳಿ ಶುಭಾಶಯ ಕೋರಿದ್ದು, ಬೆಳಕಿನ ಹಬ್ಬದ ವೇಳೆ ಒಬ್ಬರು ಇನ್ನೊಬ್ಬರ ಜೀವನದ ಸಂತೋಷದ ಮೂಲವಾಗಬೇಕು ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಮತ್ತೋರ್ವ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ತಮ್ಮ ಕುಟುಂಬದೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದು. ಅವರ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬೆಳಕಿನ ಹಬ್ಬವನ್ನು ಮಗಳು ಮತ್ತು ಪತ್ನಿ ಜೊತೆ ಆಚರಿಸಿರುವ ಹೃದಯಸ್ಪರ್ಶಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
ಭಾರತ ಮತ್ತು ಪ್ರಪಂಚದಾದ್ಯಂತದ ಜನರು ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸುವ ಮೂಲಕ, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತು "ಕತ್ತಲೆಯ ಮೇಲೆ ಬೆಳಕಿನ ವಿಜಯ, ಮತ್ತು ಅಜ್ಞಾನದ ಮೇಲಿನ ಜ್ಞಾನ" ವನ್ನು ಸ್ಮರಿಸುವ ಸಲುವಾಗಿ ಈ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸುತ್ತಾರೆ.