ದೆಹಲಿ:ಅಂತರಾಷ್ಟ್ರಿಯ ಹಣಕಾಸು ನಿಧಿ (ಐಎಂಎಫ್) ಭಾರತದ 2019-20ರ ಆರ್ಥಿಕಾಭಿವೃದ್ದಿಯ ಮುನ್ಸೂಚನೆಯನ್ನು 4.8% ಕ್ಕೆ ಇಳಿಸಿದೆ. ಇದಾದ ನಂತರ, ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಡಾ.ಗೀತಾ ಗೋಪಿನಾಥ್ ಮೇಲೆ ಸರ್ಕಾರದ ಸಚಿವರು ನಡೆಸುವ ದಾಳಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.
'ದೇಶದ ಆರ್ಥಿಕ ಕುಸಿತ ಊಹಿಸಿದ IMF ಅರ್ಥಶಾಸ್ತ್ರಜ್ಞೆ ಮೇಲೆ ಸರ್ಕಾರ ದಾಳಿ ನಡೆಸಲಿದೆ'
ಅಂತಾರಾಷ್ಟ್ರಿಯ ಹಣಕಾಸು ನಿಧಿ (ಐಎಂಎಫ್) ಭಾರತದ 2019-20ರ ಬೆಳವಣಿಗೆಯ ಮುನ್ಸೂಚನೆಯನ್ನು 4.8% ಕ್ಕೆ ಇಳಿಸಿದ್ದು,ಇದಕ್ಕೆ ಪ್ರತಿಯಾಗಿ ಐಎಂಎಫ್ ನ ಮುಖ್ಯ ಅರ್ಥಶಾಸ್ತ್ರಜ್ಞೆ ಡಾ.ಗೀತಾ ಗೋಪಿನಾಥ್ ಮೇಲೆ ಕೇಂದ್ರ ಸರ್ಕಾರದ ಸಚಿವರು ನಡೆಸುವ ದಾಳಿಗೆ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರ ಮೇಲೆ ಸರ್ಕಾರದ ದಾಳಿಗೆ ಸಿದ್ಧರಾಗಿರಿ
ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ನಿರ್ಧಾರ ಖಂಡಿಸಿದವರಲ್ಲಿ ಗೀತಾ ಗೋಪಿನಾಥ್ ಪ್ರಮುಖರು ಎಂದು ಅವರು ಟ್ವೀಟ್ ಮಾಡಿದ್ದಾರೆ. ಮೋದಿ ಸರ್ಕಾರದ ಈ ನಿರ್ಧಾರಭಾರತದಲ್ಲಿನ ಮಂದಗತಿ ಆರ್ಥಕ ವೃದ್ಧಿಗೆ ಕಾರಣವಾಗಲಿದೆ. ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಗೋಪಿನಾಥ್ ಭವಿಷ್ಯ ನುಡಿದಿದ್ದರು.