ನವದೆಹಲಿ:ಕೊರೊನಾ ಏಟಿನಿಂದ ತತ್ತರಿಸಿದ ಬಳಿಕದೇಶದ ಆರ್ಥಿಕತೆ ತೆರೆದುಕೊಳ್ಳುತ್ತಿದ್ದು, ಈ ವೇಳೆ ಹೆಚ್ಚಿನ ಜಾಗ್ರತೆಯ ಅವಶ್ಯಕತೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಆರ್ಥಿಕತೆ ತೆರೆದುಕೊಳ್ತಿದ್ದಂತೆ ಹೆಚ್ಚಿನ ಜಾಗ್ರತೆ ಅವಶ್ಯ: ಮನ್ ಕಿ ಬಾತ್‌ನಲ್ಲಿ ಮೋದಿ - lock down
ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ದೇಶದ ಆರ್ಥಿಕತೆ ತೆರೆದುಕೊಳ್ಳುತ್ತಿದ್ದು ಹೆಚ್ಚಿನ ಮುಂಜಾಗ್ರತೆ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.
ಪ್ರಧಾನಿ ಮೋದಿ
ಇಂದು ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ದೇಶಗಳಲ್ಲಿ ಹರಡುತ್ತಿರುವಷ್ಟು ವೇಗವಾಗಿ ಕೊರೊನಾ ನಮ್ಮ ದೇಶದಲ್ಲಿ ಹರಡುತ್ತಿಲ್ಲ. ನಮ್ಮ ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಅವಕಾಶಗಳು ತೆರೆದಿವೆ. ಈ ಅವಕಾಶಗಳೊಂದಿಗೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿಯ ಮನ್ ಕಿ ಬಾತ್ ರೇಡಿಯೋ ಭಾಷಣದ ಪ್ರಮುಖಾಂಶಗಳು ಇಲ್ಲಿವೆ:
- ಲಾಕ್ಡೌನ್ 5.o ಘೋಷಣೆಯಾಗಿದ್ದು, ವಿಶೇಷ ಸಡಿಲಿಕೆಗಳನ್ನು ಮಾಡಲಾಗಿದೆ.
- ಕೊರೊನಾ ವಿರುದ್ಧದ ಹೋರಾಟಕ್ಕೆ ರಾಷ್ಟ್ರ ಒಗ್ಗಟ್ಟಾಗಿದ್ದು, ಜನರು ನೆರವು ನೀಡುತ್ತಿದ್ದಾರೆ.
- ಕೊರೊನಾ ಅವಧಿಯಲ್ಲಿ ಹಲವಾರು ರೀತಿಯ ಸಂಶೋಧನೆಗಳು ನಡೆಯುತ್ತಿವೆ.
- ವಲಸೆ ಕಾರ್ಮಿಕರ ಹಿತಕ್ಕಾಗಿ ಸರ್ಕಾರ ಸತತವಾಗಿ ಶ್ರಮಿಸುತ್ತಿದೆ.
- ಆಯುಷ್ಮಾನ್ ಭಾರತ್ ಯೋಜನೆಯಿಂದ ಜನ ಪ್ರಯೋಜನ ಪಡೆದಿದ್ದಾರೆ.
- ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಅಂಫಾನ್ ಸಂಕಷ್ಟ ನಿವಾರಣೆಗೆ ಶ್ರಮಿಸಿದ್ದೇವೆ.
- ಜನತೆ ಸ್ವದೇಶಿ ಉತ್ಪನ್ನಗಳನ್ನು ಬಳಸಿ, ಆತ್ಮ ನಿರ್ಭರ ಭಾರತದ ಕನಸು ನನಸಾಗಿಸಬೇಕು.
- ಕೆಲ ರಾಜ್ಯಗಳಲ್ಲಿ ಮಿಡತೆಗಳ ದಾಳಿ ಹೆಚ್ಚಾಗಿದ್ದು, ಕೃಷಿ ಇಲಾಖೆಯೊಂದಿಗೆ ಕ್ರಮ ಕೈಗೊಳ್ಳಲಾಗಿದೆ.
- ನಾವು ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಲಿದ್ದೇವೆ.
- ಅನಗತ್ಯವಾಗಿ ಯಾರೂ ಕೂಡಾ ಮನೆಯಿಂದ ಹೊರಬರಬೇಡಿ.