ಕರ್ನಾಟಕ

karnataka

ETV Bharat / bharat

ಸೋಷಿಯಲ್​​​ ಮೀಡಿಯಾದಲ್ಲಿ ಪೋಸ್ಟ್​​​​​​ ಶೇರ್​​​ ಮಾಡುವ ಮುನ್ನ ಜಾಗ್ರತೆ ವಹಿಸಿ: ಪ್ರಣಬ್​ ದಾದಾ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಪ್ರಣಾಬ್ ದಾದಾ, ಜನರು ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿಗಳನ್ನು ಶೇರ್​ ಮಾಡುವ ಮೊದಲು ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಹಲವರು ಸಾಮಾಜಿಕ ಮತ್ತು ಕೋಮು ಉದ್ವಿಗ್ನತೆಗಳನ್ನು ಸೃಷ್ಟಿಸುವ ವದಂತಿಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮುಗ್ಧವಾದ ಜನರು ಸಹಜವಾಗಿ ಅಂತಹ ಪೋಸ್ಟ್​ಗಳನ್ನು ಹಂಚಿಕೊಂಡು ಕಿಡಿಗೇಡಿತನದ ಪಾಲುದಾರರಾಗಿದ್ದಾರೆ ಎಂದರು.

ಸಾಂದರ್ಭಿಕ ಚಿತ್ರ

By

Published : Aug 25, 2019, 10:17 PM IST

ಕೋಲ್ಕತ್ತಾ:ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿಗಳು ಓದುಗರ ಮೇಲೆ ತುಂಬ ಪರಿಣಾಮ ಬೀರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳನ್ನು ಹಂಚಿಕೊಳ್ಳುವ ಮುನ್ನ ಜನರು ಅವುಗಳ ಸತ್ಯಾಸತ್ಯತೆ ಕಂಡುಕೊಳ್ಳಬೇಕು ಎಂದು ಮಾಜಿ ರಾಷ್ಟ್ರಪ್ರತಿ ಪ್ರಣಬ್ ಮುಖರ್ಜಿ ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಪ್ರಣಾಬ್ ದಾದಾ, ಜನರು ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿಗಳನ್ನು ಶೇರ್​ ಮಾಡುವ ಮೊದಲು ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಹಲವರು ಸಾಮಾಜಿಕ ಮತ್ತು ಕೋಮು ಉದ್ವಿಗ್ನತೆಗಳನ್ನು ಸೃಷ್ಟಿಸುವ ವದಂತಿಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮುಗ್ಧ ಜನರು ಸಹಜವಾಗಿ ಅಂತಹ ಪೋಸ್ಟ್​ಗಳನ್ನು ಹಂಚಿಕೊಂಡು ಕಿಡಿಗೇಡಿತನದ ಪಾಲುದಾರರಾಗಿದ್ದಾರೆ ಎಂದರು.

ಮುದ್ರಣ ಮಾಧ್ಯಮದಲ್ಲಿ ತಮಗೆ ಅಪಾರ ವಿಶ್ವಾಸವಿದೆ ಎಂದು ಪ್ರತಿಪಾದಿಸಿದ ಭಾರತ ರತ್ನ ಪುರಸ್ಕೃತ ಮುಖರ್ಜಿ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂಗತಿಗಳನ್ನು ಬಿತ್ತರಿಸುವ ಮುನ್ನ ಆ ವರದಿಯನ್ನು ಮತ್ತೊಮ್ಮೆ ಸಂಪಾದಿಸಿ ಮತ್ತು ಪರಿಶೀಲಿಸಿ ಪ್ರಕಟಿಸುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details