ಕೋಲ್ಕತ್ತಾ:ಇಂಡಿಯನ್ ಪ್ರೀಮಿಯರ್ ಲೀಗ್, ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರದ ಕುರಿತು ಮಗಳ ಟ್ವೀಟ್ ಹಾಗೂ ಪಾಕಿಸ್ತಾನದ ಜತೆಗಿನ ಕ್ರಿಕೆಟ್ ಪಂದ್ಯಾವಳಿ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.
'ಐಪಿಎಲ್ ಅದ್ಭುತ ವೇದಿಕೆ'
ಐಪಿಎಲ್ ಎಲ್ಲ ಆಟಗಾರರಿಗೂ ಅದ್ಭುತ ವೇದಿಕೆ. ಯುವ, ಹಿರಿಯ ಹಾಗೂ ಕಿರಿಯ ಪ್ಲೇಯರ್ಸ್ ಈ ಅತೀ ದೊಡ್ಡ ಟೂರ್ನಿಯಲ್ಲಿ ಪಾಲ್ಗೊಳ್ತಿದ್ದು ರಾಷ್ಟ್ರೀಯ ತಂಡಗಳಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸಲು ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದ್ದಾರೆ.
ಪಾಕ್ ವಿರುದ್ಧದ ಸರಣಿ ಕುರಿತು..
ಕಳೆದ ಅನೇಕ ವರ್ಷಗಳಿಂದ ನಮ್ಮ ತಂಡ ಪಾಕ್ನೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಸಿಲ್ಲ. ಪಾಕ್ ವಿರುದ್ಧ ಆಡುವುದು ,ಬಿಡುವುದು ಕೇಂದ್ರ ಸರ್ಕಾರದ ನಿರ್ಧಾರ ಎಂದರು.
ಮಗಳ ಟ್ವೀಟ್ ಬಗ್ಗೆ ಮತ್ತೆ ದಾದಾ ಸ್ಪಷ್ಟನೆ:
ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರವಾಗಿ ನನ್ನ ಮಗಳು ಮಾಡಿದ್ದಾಳೆ ಎನ್ನಲಾಗಿರುವ ಟ್ವೀಟ್ ಬಗ್ಗೆ ಈಗಾಗಲೇ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದೇನೆ. ಅನೇಕ ನಕಲಿ ಟ್ವಿಟರ್ ಅಕೌಂಟ್ಗಳು ಹರಿದಾಡುತ್ತಿದ್ದು, ಯಾವುದನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಎಚ್ಚರದಿಂದಿರಬೇಕು ಎಂದಿದ್ದಾರೆ. ನನ್ನ ಮಗಳು ಇನ್ನೂ ಚಿಕ್ಕವಳು. ಇಂತಹ ವಿಷಯಗಳು ಆಕೆಗೆ ಗೊತ್ತಾಗುವುದಿಲ್ಲ ಎಂದರು.