ಕರ್ನಾಟಕ

karnataka

ETV Bharat / bharat

ಮಾನವೀಯತೆ ಮೆರೆದ ಏಂಜಲೀನಾ ಜೂಲಿ, ಕೊರೊನಾ ವಿರುದ್ಧ ಸಮರಕ್ಕೆ 1M​ ಡಾಲರ್​ ದೇಣಿಗೆ

ಕೊರೊನಾ ವಿರುದ್ಧ ಹೋರಾಡಲು ಅನೇಕ ಮಂದಿ ತಮ್ಮ ಕೈಲಾದಷ್ಟು ಸಹಕಾರ ನೀಡುತ್ತಿದ್ದಾರೆ. ಚಲನಚಿತ್ರ ತಾರೆಯರು ಇದರಲ್ಲಿ ಹಿಂದೆ ಬಿದ್ದಿಲ್ಲ. ಹಾಲಿವುಡ್ ನಟಿ ಏಂಜಲೀನಾ ಜೂಲಿ 1 ಮಿಲಿಯನ್​ ಡಾಲರ್​ ಹಣವನ್ನು ಸಂಘಟನೆಯೊಂದಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

Angelina Jolie
ಏಂಜಲೀನಾ ಜೋಲಿ

By

Published : Mar 26, 2020, 1:36 PM IST

ವಾಷಿಂಗ್ಟನ್: ಕೊರೊನಾ ವಿರುದ್ಧದ ಸಮರಕ್ಕೆ ಬೆಂಬಲ ಸೂಚಿಸಿ ಹಾಲಿವುಡ್ ನಟಿ ಏಂಜಲೀನಾ ಜೂಲಿ 1 ಮಿಲಿಯನ್ ಡಾಲರ್​​ ಕ್(7 ಕೋಟಿ ರೂ) ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಕೊರೊನಾ ಹರಡುತ್ತಿರುವ ವೇಳೆ ಯಾವುದೇ ಮಗು ಹಸಿವಿನಿಂದ ನರಳಬಾರದು ಎಂಬ ಕಾರಣಕ್ಕೆ ''ನೊ ಕಿಡ್​ ಹಂಗ್ರಿ'' ಎಂಬ ಸಂಘಟನೆಗೆ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

ಜಗತ್ತಿನಾದ್ಯಂತ ಒಂದು ವಾರದಿಂದ ಕೊರೊನಾ ಕಾರಣಕ್ಕೆ ಕೋಟ್ಯಂತರ ಮಕ್ಕಳು ಶಾಲೆಗಳಿಂದ ಹೊರಗೆ ಉಳಿದಿದ್ದಾರೆ. ಪೋಷಕಾಂಶಗಳಿಗಾಗಿ ಶಾಲೆಗಳನ್ನೇ ಅವಲಂಬಿಸಿದ್ದ ಮಕ್ಕಳು ಈಗ ಗುಣಮಟ್ಟದ ಆಹಾರದಿಂದ ವಂಚಿತವಾಗಿವೆ. ಅಮೆರಿಕವೊಂದರಲ್ಲೇ 22 ಮಿಲಿಯನ್​ ಮಕ್ಕಳು ಪೋಷಕಾಂಶಯುಕ್ತ ಆಹಾರವಿಲ್ಲದೇ ನರಳುವಂತಾಗಿದೆ ಎಂದಿರುವ ಅವರು ಯಾವುದೇ ಮಗು ಹಸಿವಿನಿಂದ ನರಳಬಾರದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಜೋಲಿ ಮನವಿ ಮಾಡಿದ್ದಾರೆ.

ಇದಕ್ಕೂ ಮೊದಲು ಹಾಲಿವುಡ್​ನ ತಾರೆಗಳಾದ ರಿಹಾನ್ನಾ, ಅರ್ನಾಲ್ಡ್​, ರಯಾನ್​ ರೆನಾಲ್ಡ್​, ಬ್ಲೇಕ್​ ಲೈವ್ಲಿ ಮುಂತಾದವರು ಕೊರೊನಾ ವಿರುದ್ಧ ಹೋರಾಟಕ್ಕೆ ವಿವಿಧ ಸಂಘಟನೆಗಳಿಗೆ ದೇಣಿಗೆ ನೀಡಿದ್ದರು. ಅಮೆರಿಕ ಮಾಧ್ಯಮ ದಿಗ್ಗಜರಾದ ಕೈಲಿ ಜೆನ್ನರ್ 1 ಮಿಲಿಯನ್​ ಡಾಲರ್​ ಅನ್ನು ದೇಣಿಗೆಯಾಗಿ ನೀಡಿದ್ದರು. ಈ ಹಣವನ್ನು ಮಾಸ್ಕ್​ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲು ಸಂಘಟನೆಯೊಂದು ಬಳಸಿಕೊಂಡಿತ್ತು.

ABOUT THE AUTHOR

...view details