ಲಾಸ್ ಎಂಜಲೀಸ್:ವಿಶ್ವವಿಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ಬ್ರಿಯಾಂಟ್ ನಿನ್ನೆ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಕ್ರೀಡಾ ಲೋಕವೇ ಕಂಬನಿ ಮಿಡಿದಿದೆ.
ವಿಶ್ವವಿಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ನಿಧನಕ್ಕೆ ಕೊಹ್ಲಿ ಸೇರಿ ಹಲವರಿಂದ ಸಂತಾಪ - ವಿಶ್ವವಿಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ಬ್ರಿಯಾಂಟ್
ವಿಶ್ವವಿಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ಬ್ರಿಯಾಂಟ್ ನಿನ್ನೆ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ನಿಧನಕ್ಕೆ ಕ್ರೀಡಾ ಲೋಕವೇ ಕಂಬನಿ ಮಿಡಿದಿದೆ.
ವಿಶ್ವವಿಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಕೊಬೆ ಹಾಗೂ ಅವರ ಪುತ್ರಿ ನಿಧನ
41 ವರ್ಷದ ಬ್ರಿಯಾಂಟ್ ಹಾಗೂ 13 ವರ್ಷದ ಅವರ ಪುತ್ರಿ ಸಿಯಾನ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಲಾಸ್ ಎಂಜಲೀಸ್ ಸಮೀಪ ನಿನ್ನೆ ಹೆಲಿಕಾಪ್ಟರ್ ಪತನವಾಗಿತ್ತು.
ಕೊಬೆ ಒಲಂಪಿಕ್ ಚಿನ್ನದ ಪದಕ ವಿಜೇತ ಕೂಡಾ ಹೌದು. ಅಲ್ಲದೆ ಕ್ರೀಡಾ ಲೋಕದಲ್ಲಿ ಅಪ್ರತಿಮ ಸಾಧನೆ ಮಾಡಿ ದಂತಕಥೆ ಎನಿಕೊಂಡಿದ್ದಾರೆ. ಕೊಬೆ ಸಾವಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಇಡೀ ಕ್ರೀಡಾ ಲೋಕವೇ ಕಂಬನಿ ಮಿಡಿದಿದೆ.
Last Updated : Jan 27, 2020, 10:24 AM IST