ಕರ್ನಾಟಕ

karnataka

ETV Bharat / bharat

ಮನೆಯೊಳಗೆ ಹೋಗದಂತಹ ಪರಿಸ್ಥಿತಿ: ಹೊರಗೆ ಕುಳಿತೇ ಊಟ ಸೇವಿಸಿದ ಪೊಲೀಸ್​ ಅಧಿಕಾರಿ - ಕೊರೊನಾ ವೈರಸ್​​

ನೊವೆಲ್​ ಕೊರೊನಾದಿಂದ ಜಗತ್ತು ತೀವ್ರ ತೊಂದರೆಗೊಳಗಾಗಿದೆ. ಜನರು ಇತರರೊಂದಿಗೆ ಸಾಮಾಜಿಕ ಅಂತರದಲ್ಲೇ ಮಾತನಾಡುವ ಅನಿವಾರ್ಯತೆ ಇದೆ. ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯುವ ಪೊಲೀಸರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕೂ ವೈರಾಣು ತೊಡಕಾಗಿದೆ.

Baroda SDOP Niranjan was seen eating outside
Baroda SDOP Niranjan was seen eating outside

By

Published : Apr 9, 2020, 12:06 PM IST

ಬರೋಡ (ಮಧ್ಯಪ್ರದೇಶ): ಕೊರೊನಾ ವೈರಸ್​ ಸೃಷ್ಟಿಸಿರುವ ಆತಂಕ ಅಷ್ಟಿಷ್ಟಲ್ಲ. ಜನರು ಮನೆಯಿಂದ ಹೊರಬರದಂತೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ತಾವೂ ಕೂಡಾ ಮನೆಗೆ ಹೋಗದಂತಹ ಪರಿಸ್ಥಿತಿ ಇದೆ.

ಸದಾ ಜನರ ಚಲನವಲನ ಗಮನಿಸಲು ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರು ಮನೆಗೆ ಹೋಗಲೂ ಸಾಧ್ಯವಾಗುತ್ತಿಲ್ಲ. ಸಿಕ್ಕಿರುವ ಸಮಯದಲ್ಲಿ ಮನೆಗೆ ಹೋದರೂ ಮನೆಯೊಳಗೆ ಕಾಲಿಡಲಾಗುತ್ತಿಲ್ಲ. ಎಲ್ಲಿ ಮನೆಯವರಿಗೂ ಸೋಂಕು ತಗುಲುತ್ತೋ ಎಂಬ ಆತಂಕ ಅವರದ್ದು.

ಮನೆಯ ಹೊರಗಡೆ ಊಟ ಮಾಡುತ್ತಿರುವ ಅಪ್ಪನನ್ನು ದೂರದಿಂದಲೇ ಮಾತನಾಡಿಸುತ್ತಿರುವ ಮಗಳು

ಮಧ್ಯಪ್ರದೇಶದ ಶಯೋಪೂರ್​​ ಎಸ್​​ಡಿಒಪಿ ನಿರಂಜನ್ ಸಿಂಹ ಮನೆ ಹೊರಗೆ ಕುಳಿತುಕೊಂಡು ಊಟ ಮಾಡ್ತಿರುವ ಫೋಟೋ ಸುದ್ದಿಯಾಗಿದೆ. ಮಗಳು ಭೂಮಿಕಾ ಮನೆ ಬಾಗಿಲ ಬಳಿ ನಿಂತು ಅಪ್ಪನ ಜೊತೆ ಮಾತನಾಡುತ್ತಿದ್ದಾಳೆ.

ABOUT THE AUTHOR

...view details