ಕರ್ನಾಟಕ

karnataka

ETV Bharat / bharat

ಲವ್ ಜಿಹಾದ್ ವಿರುದ್ಧ ಫತ್ವಾ: ಯೋಗಿ ಸರ್ಕಾರಕ್ಕೆ ಇಸ್ಲಾಂ ಸಂಸ್ಥೆ ಸಾಥ್ - ನ್ಯಾಷನಲ್ ಸುನ್ನಿ ಉಲೇಮಾ ಕೌನ್ಸಿಲ್

ಬರೈಲಿಯಲ್ಲಿರುವ ದರ್ಗಾ-ಇ-ಹಜರತ್ ಬುಧವಾರ ಲವ್ ಜಿಹಾದ್ ವಿರುದ್ಧ ಫತ್ವಾ ಹೊರಡಿಸಿದ್ದು, ಯೋಗಿ ಸರ್ಕಾರದ ಕಾನೂನಿಗೆ ಬೆಂಬಲ ಸೂಚಿಸಿದೆ.

fatwa against love jihad
ಲವ್ ಜಿಹಾದ್ ವಿರುದ್ಧ ಫತ್ವಾ

By

Published : Dec 2, 2020, 7:41 PM IST

ಬರೈಲಿ (ಉತ್ತರ ಪ್ರದೇಶ): ಲವ್ ಜಿಹಾದ್ ವಿರುದ್ಧದ ಕಾನೂನಿನ ವಿರುದ್ಧ ಹಲವೆಡೆ ವಿರೋಧಗಳು ಕೇಳಿಬರುತ್ತಿದ್ದು, ಬರೈಲಿಯಲ್ಲಿರುವ ದರ್ಗಾ-ಇ-ಹಜರತ್ ಬುಧವಾರ ಲವ್ ಜಿಹಾದ್ ವಿರುದ್ಧ ಫತ್ವಾ ಹೊರಡಿಸಿದೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಿದ್ದು, ಈ ಕಾನೂನಿಗೆ ಬೆಂಬಲವಾಗಿ ದರ್ಗಾ - ಇ- ಹಜರತ್ ಪತ್ವಾ ಹೊರಡಿಸಿದೆ. ಬಲವಂತದ ಮತಾಂತರ ಧರ್ಮ ವಿರೋಧಿ ಎಂದು ಫತ್ವಾದಲ್ಲಿ ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಷನಲ್ ಸುನ್ನಿ ಉಲೇಮಾ ಕೌನ್ಸಿಲ್​​ನ ಅಧ್ಯಕ್ಷ ಮೌಲಾನಾ ವೈತತ್​ ಅಹ್ಮದ್ ಖಾದ್ರಿ 'ಮುಸ್ಲಿಂ ವ್ಯಕ್ತಿ ಮುಸ್ಲೀಮೇತರ ಮಹಿಳೆಯನ್ನು ತನ್ನ ಧರ್ಮಕ್ಕೆ ಮತಾಂತರಿಸಿಕೊಳ್ಳಲು ಮದುವೆಯಾಗಬಹುದೇ..? ಷರಿಯಾ ಕಾನೂನು ಲವ್ ಜಿಹಾದ್ ಅಸ್ತಿತ್ವದ ಬಗ್ಗೆ ಮಾತನಾಡುತ್ತದೆಯೇ? ' ಎಂದು ಪ್ರಶ್ನಿಸಿದ್ದಾರೆ.

​ಇಸ್ಲಾಂ ನ್ಯಾಯಶಾಸ್ತ್ರ ಸಂಸ್ಥೆಯಾದ ದಾರುಲ್ ಇಫ್ತಾ ಸಂಸ್ಥೆಯ ಅಧ್ಯಕ್ಷ ಮುಫ್ತಿ ಮುಸಿಬುರ್ ರಹಮಾನ್ ರಜ್ವಿ ಮತ್ತೊಂದು ಫತ್ವಾ ಹೊರಡಿಸಿದ್ದು, ಕುರಾನ್ ಹಾಗೂ ಷರಿಯಾ ಪ್ರಕಾರ ಬಲವಂತದ ಮತಾಂತರ ತಪ್ಪು ಎಂದಿದ್ದು, ಉತ್ತರ ಪ್ರದೇಶ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.

ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರಭಾವಿತವಾದ ಲವ್ ಜಿಹಾದ್‌ನಂತಹ ಸಾಮಾಜಿಕ ದುಷ್ಕೃತ್ಯಗಳ ಬಗ್ಗೆ ಇಸ್ಲಾಂನಲ್ಲಿ ಯಾವುದೇ ಉಲ್ಲೇಖವಿಲ್ಲ. ಹುಡುಗಿಯ ಒಪ್ಪಿಗೆಯಿಲ್ಲದೇ ಮದುವೆಯಾಗಬಾರದು ಎಂದು ಅವರು ಹೇಳಿದ್ದಾರೆ.

ಜೊತೆಗೆ 'ಲವ್' ಇಂಗ್ಲಿಷ್ ಪದ ಮತ್ತು ಜಿಹಾದ್ ಅರೇಬಿಕ್ ಆಗಿದೆ. ಅವುಗಳಿಗೆ ಪರಸ್ಪರ ಸಂಬಂಧವಿಲ್ಲ. ಲವ್ ಜಿಹಾದ್​​ನಂತಹ ಮೋಸದ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ ಎಂದು ಉಲ್ಲೇಖಿಸಿದ್ದಾರೆ.

ABOUT THE AUTHOR

...view details