ಕರ್ನಾಟಕ

karnataka

ETV Bharat / bharat

ಬರೇಲಿ ಶಾಸಕ ರಾಜೇಶ್ ಮಿಶ್ರಾ ಪುತ್ರಿ ಮದುವೆ ಮಾನ್ಯ ಎಂದ ಅಲಹಬಾದ್​ ಕೋರ್ಟ್​ - kannadanews

ಉತ್ತರಪ್ರದೇಶದ ಬರೇಲಿ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಪುತ್ರಿ ಸಾಕ್ಷಿ ಹಾಗೂ ಪತಿ ಅಜಿತೇಶ್ ಮದುವೆಗೆ ಮಾನ್ಯತೆ ನೀಡಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಶಾಸಕ ರಾಜೇಶ್ ಮಿಶ್ರಾ ಪುತ್ರಿ ಮದುವೆ ಮಾನ್ಯ ಎಂದ ಅಲಹಬಾದ್​ ಕೋರ್ಟ್​

By

Published : Jul 15, 2019, 1:45 PM IST

ಬರೇಲಿ: ಉತ್ತರಪ್ರದೇಶದ ಬರೇಲಿ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ ಮಿಶ್ರಾ ಪುತ್ರಿ ಸಾಕ್ಷಿ ಹಾಗೂ ಪತಿ ಅಜಿತೇಶ್ ಮದುವೆಗೆ ಅಲಹಬಾದ್​ ಕೋರ್ಟ್​ ಮಾನ್ಯತೆ ನೀಡಿದೆ.

ನ್ಯಾ. ಸಿದ್ದಾರ್ಥ ವರ್ಮಾ ಈ ಕುರಿತು ವಿಚಾರಣೆ ನಡೆಸಿದ್ದು, ಸಾಕ್ಷಿ ಹಾಗೂ ಪತಿ ಅಜಿತೇಶ್ ವಯಸ್ಕರಾಗಿದ್ದು, ಅವರಿಗೆ ಇಷ್ಟ ಬಂದವರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ ಎಂದು ಹೇಳಿದ್ದಾರೆ. ಅಲ್ಲದೇ ಕೋರ್ಟ್​ ಹಾಜರಾಗುವ ಮುನ್ನ ಸಾಕ್ಷಿ ಹಾಗೂ ಅಜಿತ್​ ಮೇಲೆ ಕೋರ್ಟ್​ ಆವರಣದಲ್ಲಿ ಮುಸುಕುಧಾರಿ ವ್ಯಕ್ತಿಗಳಿಂದ ಹಲ್ಲೆ ನಡೆದಿದ್ದು, ಉತ್ತರ ಪ್ರದೇಶ ಸರ್ಕಾರ ಸಾಕ್ಷಿ ದಂಪತಿಗೆ ಪೊಲೀಸರಿಂದ ರಕ್ಷಣೆ ಒದಗಿಸಬೇಕೆಂದು ಕೋರ್ಟ್​ ಸೂಚಿಸಿದೆ.

ಜುಲೈ 3 ರಂದು ಶಾಸಕ ರಾಜೇಶ್ ಮಿಶ್ರಾ ಪುತ್ರಿ ಸಾಕ್ಷಿ ಮನೆ ಬಿಟ್ಟು ಓಡಿ ಬಂದು ಪ್ರಯಾಗ್​ರಾಜ್​ನ ದೇವಾಲಯದಲ್ಲಿ ಜುಲೈ 4 ರಂದು ತನ್ನ ಪ್ರಿಯಕರ ಅಜಿತೇಶ್ ಜೊತೆ ವಿವಾಹವಾಗಿದ್ದಳು. ಸಾಕ್ಷಿ ತಂದೆ ರಾಜೇಶ್​ ಮಿಶ್ರಾಗೆ ಈ ಪ್ರೇಮವಿವಾಹ ಇಷ್ಟವಿರಲಿಲ್ಲ. ಏಕೆಂದರೆ ಸಾಕ್ಷಿ ಬ್ರಾಹ್ಮಣ ಜಾತಿಯವಳಾಗಿದ್ದು, ಅಜಿತೇಶ್​ ದಲಿತ ವರ್ಗಕ್ಕೆ ಸೇರಿದ್ದವನಾಗಿದ್ದರಿಂದ ಸಾಕ್ಷಿ ಪ್ರೀತಿಗೆ ತಂದೆ ರಾಜೇಶ್ ವಿರೋಧವಿತ್ತು. ಹೀಗಾಗಿ ತಂದೆಯಿಂದ ನಮಗೆ ಪ್ರಾಣ ಭಯ ಇದೆ ಎಂದು ಪುತ್ರಿ ಸಾಕ್ಷಿ ಜುಲೈ 9 ರಂದು ವಿಡಿಯೊವೊಂದನ್ನು ಪೋಸ್ಟ್​ ಮಾಡಿದ್ದರು. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸಾಕ್ಷಿ ತಂದೆ ಶಾಸಕ ರಾಜೇಶ್​ ಮಿಶ್ರಾ, ಮದುವೆ ನನ್ನ ವಿರೋಧವಿರಲಿಲ್ಲ, ಆದರೆ ಅವರಿಬ್ಬರ ನಡುವೆ ಸುಮಾರು 9 ವರ್ಷಗಳಷ್ಟು ವಯಸ್ಸಿನ ಅಂತರವಿದ್ದರಿಂದ ನನಗೆ ಒಪ್ಪಿಗೆ ಇಲ್ಲ ಎಂದಿದ್ರು. ಅಲ್ಲದೇ ಅಜಿತೇಶ್ ಗೆ ಒಳ್ಳೆಯ ಉದ್ಯೋಗವಿಲ್ಲ ಎಂದು ಹೇಳಿದ್ರು.

ABOUT THE AUTHOR

...view details