ರಿವಾ(ಮಧ್ಯಪ್ರದೇಶ):ದೇಶಾದ್ಯಂತ ನಿನ್ನೆ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗಿದ್ದು, ಮಧ್ಯಪ್ರದೇಶದಲ್ಲಿ ಗಾಂಧಿ ಭಸ್ಮ ಕಳಸ ಕಳ್ಳತನವಾಗಿದೆ.
ಗಾಂಧಿ ಭಸ್ಮ ಕಳಸ ಕಳ್ಳತನ: ಬಾಪುವಿನ 150ನೇ ಜನ್ಮ ದಿನಾಚರಣೆಯಂದೇ ಕೃತ್ಯ!
ರಾಷ್ಟ್ರಪತಿ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನದಂದೇ ಮಧ್ಯಪ್ರದೇಶದ ರಿವಾದಲ್ಲಿ ಅವರ ಭಸ್ಮ ಕಳಸ ಕಳ್ಳತನ ಮಾಡಿರುವ ಘಟನೆ ನಡೆದಿದೆ.
1970ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಸ್ಮಕಳಸವನ್ನು ಮಧ್ಯಪ್ರದೇಶದ ರೇವಾಕ್ಕೆ ತಂದು, ಐತಿಹಾಸಿಕ ಲಕ್ಷ್ಮಣಬಾಗ್ನಲ್ಲಿ ದರ್ಶನಕ್ಕಾಗಿ ಇಡಲಾಗಿತ್ತು. ನಿನ್ನೆ ಕಳ್ಳರು ಕೃತ್ಯ ತಮ್ಮ ಕೈಚಳಕ ತೋರಿದ್ದು, ಭಸ್ಮ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಗೋಡ್ಸೆ ಬೆಂಬಲಿಗರಿಂದ ಈ ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕಿತರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಲಕ್ಷ್ಮಣಬಾಗ್ಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಹಿಂದಿನಿಂದಲೂ ಇಲ್ಲಿನ ಬಾಪು ಕಟೌಟ್ ಮೇಲೆ ಅವಾಚ್ಯ ಶಬ್ದಗಳಿಂದ ಅಸಹ್ಯವಾಗಿ ಬರೆಯಲಾಗುತ್ತಿದೆ ಎಂಬ ಆರೋಪವಿದೆ. ಇದರ ಮಧ್ಯೆ ಈ ಘಟನೆ ನಡೆದಿದೆ.