ಮುಂಬೈ: ಮನಿ ಲಾಂಡರಿಂಗ್ ತಡೆ ಕಾಯ್ದೆಯ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ವಿಜಯ ಮಲ್ಯಗೆ ಲೋನ್ ನೀಡಿದ ಬ್ಯಾಂಕ್ಗಳಿಗೆ ವಿಶೇಷ ಅನುಮತಿಯನ್ನ ನೀಡಿದೆ. ಬ್ಯಾಂಕ್ ಗಳುಈಗಾಗಲೇ ವಶಪಡಿಸಿಕೊಂಡ ವಿಜಯ್ ಮಲ್ಯ ಆಸ್ತಿ ದ್ರವೀಕರಿಸಿ (ಕರಗಿಸಿ) ಬಳಸಿಕೊಳ್ಳುವ ಅವಕಾಶ ನೀಡಿದೆ.
ವಿಜಯ ಮಲ್ಯಗೆ ಸಾಲ ನೀಡಿದ್ದ ಬ್ಯಾಂಕ್ಗಳಿಗೆ ದೊರೆತಿದೆ ವಿಶೇಷ ಅನುಮತಿ.. - ಉದ್ಯಮಿ ವಿಜಯ್ ಮಲ್ಯ
ಮನಿ ಲಾಂಡರಿಂಗ್ ತಡೆ ಕಾಯ್ದೆಯ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು, ಮಲ್ಯಗೆ ಲೋನ್ ನೀಡಿದ ಬ್ಯಾಂಕ್ಗಳಿಗೆ ಈಗಾಗಲೇ ವಶಪಡಿಸಿಕೊಂಡಿರುವ ವಿಜಯ್ ಮಲ್ಯ ಆಸ್ತಿಯನ್ನು ದ್ರವೀಕರಿಸಿ ಬಳಸಿಕೊಳ್ಳುವ ಅವಕಾಶವನ್ನು ನೀಡಿದೆ.
ಮಲ್ಯಗೆ ಸಾಲ ನೀಡಿದ ಬ್ಯಾಂಕ್ಗಳಿಗೆ ದೊರೆತಿದೆ ವಿಶೇಷ ಅನುಮತಿ
ಕೋರ್ಟ್ ಈ ತೀರ್ಪನ್ನು ಜನವರಿ 18 ರವರೆಗೆ ತಡೆಹಿಡಿದಿರುತ್ತದೆ. ಅಷ್ಟರೊಳಗೆ ತೀರ್ಪಿನ ಕುರಿತು ಯಾವುದೇ ಪಕ್ಷಕ್ಕೆ ಆಕ್ಷೇಪವಿದ್ದರೂ ಅವರು ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದೆ.
ಪರಾರಿಯಾದ ಉದ್ಯಮಿ ವಿಜಯ ಮಲ್ಯ ಬ್ಯಾಂಕ್ಗಳಿಗೆ ಸುಮಾರು 6,200 ಕೋಟಿ ರೂಪಾಯಿ ಸಾಲ ಬಾಕಿ ಕಟ್ಟಿಲ್ಲ. ಆದರೆ, ಮಲ್ಯ ಆಸ್ತಿ ದ್ರವೀಕರಣದ ನಂತರ ಅಂದಾಜು 11,000 ಕೋಟಿ ರೂ. ಸಿಗುವ ಸಾಧ್ಯತೆಯಿದೆ. ಇದು ಬ್ಯಾಂಕ್ ನೀಡಿರುವ ಲೋನ್ಗಿಂತಲೂ ಅಧಿಕವಾಗಿದೆ ಎನ್ನಲಾಗಿದೆ.