ಕರ್ನಾಟಕ

karnataka

ETV Bharat / bharat

ಬಾಂದ್ರಾ ವಲಸಿಗರ ಪ್ರತಿಭಟನೆ: ಪ್ರಚೋದನಕಾರಿ ಪೋಸ್ಟ್​ ಹಾಕಿದವ ಅಂದರ್​​​ - ಲಾಕ್​ಡೌನ್​ ಸಿಲುಕಿದ ಜನ

ಲಾಕ್​​​​ಡೌನ್ ಉಲ್ಲಂಘಿಸಿ ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಸಾವಿರಾರು ವಲಸಿಗರು ಪ್ರತಿಭಟನೆ ನಡೆಸಿದ್ದರು. ಈ ಘಟನೆ ಸಂಬಂಧ ಮುಂಬೈನ ನಿವಾಸಿ ದುಬೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋಧನಕಾರಿ ಪೋಸ್ಟ್ ಹಾಕಿದ್ದ ಹಿನ್ನೆಲೆ ಬಂಧಿಸಲಾಗಿದ್ದು, ಏ​ 21ರ ವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

Bandra migrant protest: Man held for offensive social media posts
ಬಾಂದ್ರಾ ವಲಸಿಗರ ಪ್ರತಿಭಟನೆ: ಪ್ರಚೋಧನಕಾರಿ ಪೋಸ್ಟ್​ ಹಾಕಿದ್ದಾತನ ಬಂಧನ

By

Published : Apr 15, 2020, 6:38 PM IST

ಮುಂಬೈ:ದೇಶದಾದ್ಯಂತ ಲಾಕ್​ಡೌನ್​ ಆದೇಶವನ್ನು 3ರ ವೆರೆಗೆ ವಿಸ್ತರಿಸಿದ್ದ ಪರಿಣಾಮ ಮುಂಬೈನಲ್ಲಿ ಸಾವಿರಾರು ವಲಸಿಗರು ಪ್ರತಿಭಟನೆಗೆ ಮುಂದಾಗಿದ್ದರು. ತಮ್ಮ ತಾಯ್ನಾಡಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಇಲ್ಲಿನ ರೈಲ್ವೆ ನಿಲ್ದಾಣಗಳಲ್ಲಿ ಜನ ಜಮಾಯಿಸಿದ್ರು. ಇವರ ನಿಯಂತ್ರಣಕ್ಕಾಗಿ ಪೊಲೀಸರು ಹರಸಾಹಸ ಪಡಬೇಕಾಯಿತು.

ಇದೀಗ ಈ ಪ್ರಕರಣ ಸಂಬಂಧ ಮುಂಬೈನ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಆರೋಪದಡಿ ಬಂಧಿಸಲಾಗಿದೆ. ದುಬೆ ಎಂಬಾತ ತನ್ನ ಸಾಮಾಜಿಕ ಜಾಲತಾಣದಲ್ಲಿ ಮಹಾರಾಷ್ಟ್ರ ಸರ್ಕಾರದ ಕುರಿತಾಗಿ ವಿಡಿಯೋ ಪೋಸ್ಟ್ ಮಾಡಿದ್ದ.

ಇದರಲ್ಲಿ ಮಹಾರಾಷ್ಟ್ರ ಸರ್ಕಾರವೂ ವಲಸಿಗರಿಗೆ ನೆರವು ನೀಡಬೇಕು. ಲಾಕ್​ಡೌನ್​​ನಿಂದಾಗಿ ಸಿಲುಕಿರುವ ವಲಸಿಗರಿಗೆ ವಾಹನ ವ್ಯವಸ್ಥೆ ಕಲ್ಪಿಸಬೇಕು. ಅವರೆಲ್ಲ ತಮ್ಮ ಊರಿಗೆ ಪ್ರಯಾಣಿಸಲು ಬಯಸುತ್ತಿದ್ದಾರೆ ಅಂತಾ ಹೇಳಿದ್ದರು. ಅಲ್ಲದೇ ಈ ಕುರಿತು ಟ್ವೀಟ್ ಸಹ ಮಾಡಿದ್ದು, ವಲಸಿಗರಿಗೆ ಸೌಲಭ್ಯ ಕಲ್ಪಿಸದೇ ಹೋದಲ್ಲಿ ಏಪ್ರಿಲ್​ 18ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರೆ ನೀಡಿದ್ದರು. ಈ ಹಿನ್ನೆಲೆ ನವಿ ಮುಂಬೈ ಪೊಲೀಸರು ದುಬೆಯನ್ನು ಬಂಧಿಸಿ ಬಾಂದ್ರಾ ಪೊಲೀಸರಿಗೆ ಒಪ್ಪಿಸಿದ್ದಾರೆ. ದುಬೆಗೆ ಏಪ್ರಿಲ್ 21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ABOUT THE AUTHOR

...view details