ಕರ್ನಾಟಕ

karnataka

ETV Bharat / bharat

'ಶೌರ್ಯ ಚಕ್ರ' ಪುರಸ್ಕೃತ ಬಲ್ವಿಂದರ್​ ಸಿಂಗ್​ ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು!

ದುಷ್ಕರ್ಮಿಗಳು ನಡೆಸಿರುವ ಗುಂಡಿನ ದಾಳಿಯಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್​ ಸಿಂಗ್​ ಅಸುನೀಗಿದ್ದಾರೆ.

Balwinder Singh
Balwinder Singh

By

Published : Oct 16, 2020, 4:42 PM IST

ಚಂಡೀಗಢ: 'ಶೌರ್ಯ ಚಕ್ರ ಪ್ರಶಸ್ತಿ' ಪುರಸ್ಕೃತ ಬಲ್ವಿಂದರ್​ ಸಿಂಗ್​ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಪಂಜಾಬ್​​ನಲ್ಲಿ ನಡೆದಿದೆ.

ತರನ್ ತಾರನ್​ ಭಿಖವಿಂಡ್​ ಗ್ರಾಮದಲ್ಲಿನ ಕಚೇರಿಯಲ್ಲಿದ್ದ ವೇಳೆ ಮೋಟಾರ್​ ಸೈಕಲ್​ ಮೇಲೆ ಆಗಮಿಸಿರುವ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಲ್ವಿಂದರ್​ ಸಿಂಗ್​ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದ ಇವರಿಗೆ 1993ರಲ್ಲಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 1990 ಮತ್ತು 1991ರಲ್ಲಿ ಇವರ ಮನೆಯ ಮೇಲೆ ಭಯೋತ್ಪಾದಕರು ಅನೇಕ ಸಲ ದಾಳಿ ನಡೆಸಿದ್ದರು. ಇದಾದ ಬಳಿಕ ರಾಜ್ಯ ಸರ್ಕಾರ ಇವರಿಗೆ ಭದ್ರತೆ ಒದಗಿಸಿತ್ತು. ಆದರೆ, ಕಳೆದ ವರ್ಷ ಅವರಿಗೆ ನೀಡಿದ್ದ ಭದ್ರತೆ ವಾಪಸ್ ಪಡೆದುಕೊಳ್ಳಲಾಗಿತ್ತು.

ಇದೇ ವಿಷಯವಾಗಿ ಮಾತನಾಡಿರುವ ಅವರ ಸಹೋದರ ರಂಚಿತ್​​ ನಮ್ಮ ಕುಟುಂಬಕ್ಕೆ ಭಯೋತ್ಪಾದಕರ ದಾಳಿ ಬೆದರಿಕೆ ಇದೆ ಎಂದಿದ್ದಾರೆ. 1990ರಲ್ಲಿ ಇವರ ನಿವಾಸದ ಮೇಲೆ 200ಕ್ಕೂ ಅಧಿಕ ಸಲ ಭಯೋತ್ಪಾದಕ ದಾಳಿ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ. ಈ ವೇಳೆ, ಸಿಂಗ್​ ಹಾಗೂ ಅವರ ಸಹೋದರ ಉಗ್ರರ ವಿರುದ್ಧ ಹೋರಾಟ ನಡೆಸಿದ್ದರು.

ABOUT THE AUTHOR

...view details