ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಜಾಗಕೊಟ್ಟಿದ್ದೇ ಠಾಕ್ರೆ: ಮಾಜಿ ಪಿಎಂ ದೇವೇಗೌಡ - ಮಾಜಿ ಪ್ರಧಾನಿ ದೇವೇಗೌಡ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಇದೀಗ ಮತ್ತಷ್ಟು ಬಿರುಸು ಪಡೆದುಕೊಂಡಿದ್ದು, ಇದೇ ವಿಷಯವಾಗಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ

By

Published : Nov 11, 2019, 4:13 PM IST

ನವದೆಹಲಿ:ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಳೆಯಲು ಅವಕಾಶ ನೀಡಿದ್ದೇ ಬಾಳಾ ಸಾಹೇಬ್​ ಠಾಕ್ರೆ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಅಡ್ವಾಣಿ ಮತ್ತು ವಾಜಪೇಯಿ ಸೀಟುಗಳ ಹಂಚಿಕೆ ಮಾಡಿಕೊಳ್ಳಲು ಬಾಳಾ ಸಾಹೇಬ್​​ ಠಾಕ್ರೆ ಅವರ ಮನೆ ಬಾಗಿಲಿಗೆ ತೆರಳಿ ಮಾತುಕತೆ ನಡೆಸುತ್ತಿದ್ದರು.

ಆದರೆ ಬಿಜೆಪಿ ಹಳೆಯದನ್ನ ಮರೆತು ವರ್ತಿಸುತ್ತಿದೆ. ಹೀಗಾಗಿ ಉದ್ದವ್​ ಠಾಕ್ರೆ ಕಠಿಣ ನಿಲುವು ತಳೆದಿದ್ದು, ಬಿಜೆಪಿಗೆ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಕಾಂಗ್ರೆಸ್​​​​ ಶಿವಸೇನೆಗೆ ಬೆಂಬಲ ನೀಡಿದರೆ ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷ ತೊಂದರೆಯನ್ನುಂಟು ಮಾಡಬಾರದು ಎಂದು ಹೆಚ್​ ಡಿ ದೇವೇಗೌಡ ಹಳೆ ದೋಸ್ತಿಗೆ ಸಲಹೆ ನೀಡಿದ್ದಾರೆ. ಹೀಗೆ ಮಾಡಿದಲ್ಲಿ ಮಾತ್ರ ಜನ ಕಾಂಗ್ರೆಸ್​ ನಂಬುತ್ತಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ 50:50 ಸೂತ್ರಕ್ಕೆ ಇಟ್ಟಿರುವ ಒಪ್ಪಂದಕ್ಕೆ ಬಿಜೆಪಿ ಒಪ್ಪಿಕೊಳ್ಳದ ಕಾರಣ ಎರಡು ಪಕ್ಷಗಳ ನಡುವಿನ ಮೈತ್ರಿ ಮುರಿದು ಬಿದ್ದಿದೆ.

ABOUT THE AUTHOR

...view details