ಕರ್ನಾಟಕ

karnataka

ETV Bharat / bharat

ಏರ್​ಸ್ಟ್ರೈಕ್​ ಸಾಕ್ಷಿ ಕಣ್ಮುಂದೆ ಇದ್ದರೂ ಪಾಕ್​ ಒಪ್ಪುತ್ತಿಲ್ಲ: ವಾಯುಪಡೆ ಮುಖ್ಯಸ್ಥರ ಟೀಕೆ - ಬಾಲಕೋಟ್ ಏರ್​ಸ್ಟ್ರೈಕ್​

ಏರ್​ಸ್ಟ್ರೈಕ್​ನ ಸಾಕ್ಷಿ ಕಣ್ಣೆದುರೇ ಇದ್ದರೂ ಪಾಕ್​ ನಾಟಕವಾಡ್ತಿದೆ ಎಂದು ವಾಯುಪಡೆಯ ಮುಖ್ಯಸ್ಥ ಬಿ.ಎಸ್​. ಧನೋವಾ ಟೀಕಿಸಿದ್ದಾರೆ

ಏರ್​ಸ್ಟ್ರೈಕ್​ ಕುರಿತು ಪಾಕ್​ ನಾಟಕವಾಡ್ತಿದೆ ಎಂದ ವಾಯುಪಡೆಯ ಮುಖ್ಯಸ್ಥ ಬಿ.ಎಸ್​. ಧನೋವಾ

By

Published : Mar 30, 2019, 2:18 PM IST

ನವದೆಹಲಿ:ಭಾರತದ ದಾಳಿಯಿಂದ ಉಗ್ರರ ನೆಲೆಗಳು ಧ್ವಂಸಗೊಂಡ ಕುರುಹು ಕಣ್ಣೆದುರೇ ಇದ್ದರೂ ಪಾಕಿಸ್ತಾನ​ ಇದನ್ನು ಒಪ್ಪುತ್ತಿಲ್ಲವಷ್ಟೇ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಬಿ.ಎಸ್​. ಧನೋವಾ ಟೀಕಿಸಿದ್ದಾರೆ.

ಭಾರತ ತನ್ನ ಟಾರ್ಗೆಟ್​ನಂತೆಯೇ ಮಿರಾಜ್​ 2000 ಯುದ್ಧ ವಿಮಾನದ ಮೂಲಕ ಬಾಲಕೋಟ್​ನಲ್ಲಿನ ಉಗ್ರರ ನೆಲೆ ಮೇಲೆ ದಾಳಿ ಮಾಡಿತ್ತು. ಆದರೆ ಏರ್​ಸ್ಟ್ರೈಕ್​ನಿಂದ ತನಗೆ ಯಾವುದೇ ಹಾನಿಯಾಗಿಲ್ಲವೆಂದು ಪಾಕ್​ ನಾಟಕವಾಡುತ್ತಿದೆ ಎಂದರು.

ಕಣ್ಣೆದುರೇ ಇರುವ ಸತ್ಯ ಕಾಣದೇ ಪಾಕ್​ ಎಷ್ಟು ಬಾರಿ ಕತ್ತು ತಿರುಗಿಸುತ್ತದೆ. ಈ ವೇಳೆ ನನಗೆ ಡೈಲಾನ್​​ ನೆನಪಾಗುತ್ತಾನೆ ಎಂದ ಅವರು, ಅಮೆರಿಕಾದ ಕಲಾವಿದ ಬಾಬ್​ ಡೈಲಾನ್​ನ 'ಮೈ ಫ್ರೆಂಡ್​, ಈಸ್ ಬ್ಲೋಯಿನ್​ ಇನ ದ ವಿಂಡ್'​ ಹಾಡನ್ನು ನೆನಪಿಸಿಕೊಂಡರು.

ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತ ಫೆಬ್ರವರಿ 26ರಂದು ಪಾಕ್ ಆಕ್ರಮಿತ ಬಾಲಕೋಟ್​ ಮೇಲೆ ಏರ್​ಸ್ಟ್ರೈಕ್​ ನಡೆಸಿ, ಜೈಷೆ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಆದರೆ ಅಂದಿನಿಂದಲೂ ಪಾಕ್​ ತನಗೆ ಯಾವುದೇ ನಷ್ಟವಾಗಿಲ್ಲ ಎನ್ನುವ ಮೂಲಕ ಉಗ್ರರ ಪೋಷಣೆ ಆರೋಪದಿಂದ ನುಣುಚಿಕೊಳ್ಳುತ್ತಿದೆ. ಇತ್ತೀಚೆಗೆ ಭಾರತಕ್ಕೆ ನೀಡಿದ ಪ್ರಾಥಮಿಕ ವರದಿಯಲ್ಲೂ ಇದನ್ನೇ ಉಲ್ಲೇಖಿಸಿದೆ.



ABOUT THE AUTHOR

...view details