ನವದೆಹಲಿ: ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಸೇರಿದಂತೆ 19 ಕ್ರೀಡಾಪಟುಗಳ ಹೆಸರನ್ನು 2019ನೇ ಸಾಲಿನ ಅರ್ಜುನ್ ಅವಾರ್ಡ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಬಜರಂಗ್ ಪೂನಿಯಾ ಹಾಗೂ ದೀಪಾ ಮಲಿಕ್ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸುಗೊಂಡಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟ್ನ ಆಲ್ರೌಂಡರ್ ರವೀಂದ್ರ ಜಡೇಜಾ 156 ಏಕದಿನ, 42 ಟಿ-20 ಹಾಗೂ 41 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 2128,135 ಹಾಗೂ 1485 ರನ್ಗಳಿಕೆ ಮಾಡಿದ್ದಾರೆ. ಜತೆಗೆ ಏಕದಿನದಲ್ಲಿ 178 ವಿಕೆಟ್, ಟೆಸ್ಟ್ನಲ್ಲಿ 192 ಹಾಗೂ ಟಿ-20ಯಲ್ಲಿ 32 ವಿಕೆಟ್ ಪಡೆದುಕೊಂಡಿದ್ದಾರೆ. ವಿಶ್ವಕಪ್ ಸೆಮಿಫೈನಲ್ನಲ್ಲಿ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದರು.
ಉಳಿದಂತೆ ಮಹಿಳಾ ಕ್ರಿಕೆಟರ್ ಪೂನಂ ಯಾದವ್, ತೇಜೆಂದ್ರ ಪಾಲ್ ಸಿಂಗ್,ಮೊಹಮ್ಮದ್ ಅನ್ಸ್,ಸ್ವಪ್ನಾ ಬರ್ಮನ್,ಗುರಪಿತ್ ಸಿಂಗ್ ಸೇರಿದಂತೆ ಅನೇಕ ಕ್ರೀಡಾಪಟುಗಳು ಈ ಅವಾರ್ಡ್ಗೆ ಶಿಫಾರಸುಗೊಂಡಿದ್ದಾರೆ. ಕಳೆದ ವರ್ಷ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ,ವೆಟ್ಲಿಫ್ಟರ್ ಮೀರಾಬಾಯ್ ಚಾಂದ್ ಖೇಲ್ ರತ್ನ ಅವಾರ್ಡ್ ಪಡೆದುಕೊಂಡಿದ್ದರು.ಅರ್ಜುನ್ ಅವಾರ್ಡ್ ಪ್ರಶಸ್ತಿಯಲ್ಲಿ 5 ಲಕ್ಷ ರೂಪಾಯಿ ನಗದು ಬಹುಮಾನ, ಗೌರವ ಪತ್ರವನ್ನು ನೀಡಲಾಗುತ್ತದೆ.
ಅಂತಿಮ ಪಟ್ಟಿ ಈ ಕೆಳಗಿನಂತಿದೆ
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ:
- ಬಜರಂಗ್ ಪೂನಿಯಾ (ಕುಸ್ತಿ)
- ದೀಪಾ ಮಲಿಕ್ (ಪ್ಯಾರಾ ಅಥ್ಲೀಟಿಕ್ಸ್)
ದ್ರೋಣಾಚಾರ್ಯ ಪ್ರಶಸ್ತಿ:
- ವಿಮಲ್ ಕುಮಾರ್ (ಬ್ಯಾಡ್ಮಿಂಟನ್)
- ಸಂದೀಪ್ ಗುಪ್ತಾ (ಟೇಬಲ್ ಟೆನಿಸ್)
- ಮೊಹಿಂದರ್ ಸಿಂಗ್ ದಿಲ್ಲಾನ್ (ಅಥ್ಲೀಟಿಕ್ಸ್)
- ಜೀವಮಾನ ವಿಭಾಗ:
- ಮೆರ್ಜ್‌ಬಾನ್ ಪಟೇಲ್ (ಹಾಕಿ)
- ರಂಭೀರ್ ಸಿಂಗ್ ಖೋಖರ್ (ಕಬಡ್ಡಿ)
- ಸಂಜಯ್ ಭಾರಧ್ವಾಜ್ (ಕ್ರಿಕೆಟ್)
ಅರ್ಜುನ ಪ್ರಶಸ್ತಿ:
1.ತೆಜಿಂದರ್‌ಪಾಲ್ ಸಿಂಗ್ ತೊರ್ (ಅಥ್ಲೀಟಿಕ್ಸ್)
2. ಮೊಹಮ್ಮದ್ ಅನಾಸ್ ಯಾಹಿಯಾ (ಅಥ್ಲೀಟಿಕ್ಸ್)
3. ಎಸ್ ಬಾಸ್ಕರನ್ (ಬಾಡಿ ಬಿಲ್ಡಿಂಗ್)
4. ಸೋನಿಯಾ ಲ್ಯಾಥರ್ (ಬಾಕ್ಸಿಂಗ್)
5. ರವೀಂದ್ರ ಜಡೇಜಾ (ಕ್ರಿಕೆಟ್)
6. ಚಿಂಗ್ಲೆನ್ಸಾನ ಸಿಂಗ್ ಕಂಗುಜಂ (ಹಾಕಿ)
7. ಅಜಯ್ ಠಾಕೂರ್ (ಕಬಡ್ಡಿ)
8. ಗೌರವ್ ಸಿಂಗ್ ಗಿಲ್ (ಮೋಟಾರ್ ಸ್ಪೋರ್ಟ್ಸ್)
9. ಪ್ರಮೋದ್ ಭಾಗತ್ (ಪ್ಯಾರಾ ಕ್ರೀಡೆ - ಬ್ಯಾಡ್ಮಿಂಟನ್)
10. ಅಂಜುಮ್ ಮೌದ್ಗಿಲ್ (ಶೂಟಿಂಗ್)
11. ಹರ್ಮೀತ್ ರಾಜುಲ್ ದೇಸಾಯಿ (ಟೇಬಲ್ ಟೆನಿಸ್)
12. ಪೂಜಾ ದಂಡ (ಕುಸ್ತಿ)
13. ಫೌದ್ ಮಿರ್ಜಾ (ಇಕ್ವೇಸ್ಟ್ರೇನ್)
14. ಗುರ್ಪೀತ್ ಸಿಂಗ್ ಸಾಂಧು (ಫುಟ್ಬಾಲ್)
15. ಪೂನಂ ಯಾದವ್ (ಕ್ರಿಕೆಟ್)
16. ಸ್ವಪ್ನ ಬರ್ಮನ್ (ಅಥ್ಲೀಟ್)
17. ಸುಂದರ್ ಸಿಂಗ್ ಗುರ್ಜಾರ್ (ಪ್ಯಾರಾ ಸ್ಪೋರ್ಟ್ಸ್-ಅಥ್ಲೀಟಿಕ್ಸ್)
18. ಬಿಎಸ್ ಪ್ರಣೀತ್ (ಬ್ಯಾಡ್ಮಿಂಟನ್)
19. ಸಿಮ್ರಾನ್ ಸಿಂಗ್ ಶೆರ್ಗಿಲ್ (ಪೊಲೊ)
- ಮ್ಯಾನುವಲ್ ಫೆಡ್ರಿಕ್ಸ್ (ಹಾಕಿ)
- ಅರುಪ್ ಬಸಕ್ (ಟೇಬಲ್ ಟೆನಿಸ್)
- ಮನೋಜ್ ಕುಮಾರ್ (ಕುಸ್ತಿ)
- ನಿತೆನ್ ಕಿರ್ತನೆ (ಟೆನಿಸ್)
- ಸಿ ಲಾಲ್‌ರಮ್‌ಸಂಗ (ಆರ್ಚರಿ)