ಕರ್ನಾಟಕ

karnataka

ETV Bharat / bharat

ಬಿಹಾರ ಫೈಟ್​: ಮಹತ್ವದ ಘೋಷಣೆ ಮಾಡಿದ ಬಿಎಸ್​​​​ಪಿ ಮುಖ್ಯಸ್ಥೆ ಮಾಯಾವತಿ! - ಬಿಹಾರ ಚುನಾವಣೆ ಸುದ್ದಿ

ಮೈತ್ರಿ ಪಕ್ಷಗಳೊಂದಿಗೆ ಬಿಹಾರ ಚುನಾವಣೆ ಎದುರಿಸಲು ಮಾಯಾವತಿ ನಿರ್ಧರಿಸಿದ್ದು, ಇದೇ ವಿಚಾರವಾಗಿ ಅವರು ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದಾರೆ.

Bahujan Samaj Party chief Mayawati
Bahujan Samaj Party chief Mayawati

By

Published : Sep 29, 2020, 6:58 PM IST

ಲಖನೌ:ಬಿಹಾರ ವಿಧಾನಸಭಾ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ.ಅದಕ್ಕಾಗಿ ಎಲ್ಲ ಪಕ್ಷಗಳು ಈಗಾಗಲೇ ಆಡಳಿತ ಚುಕ್ಕಾಣಿ ಹಿಡಿಯಲು ಹೊಸ ಹೊಸ ಪ್ಲಾನ್​ ಹಾಕಿಕೊಳ್ಳುತ್ತಿದ್ದು, ಉತ್ತರ ಪ್ರದೇಶ ಮಾಜಿ ಸಿಎಂ, ಬಹುಜನ ಪಕ್ಷದ ಮುಖ್ಯಸ್ಥೆ ಮಾಯಾವತಿ ಮಹತ್ವದ ಘೋಷಣೆ ಮಾಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಾಯಾವತಿ, ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ ಹಾಗೂ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಬಿಹಾರ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ. ಇದರ ಜತೆಗೆ ಉಪೇಂದ್ರ ಕುಶ್ವಾಹ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದಾರೆ.

ಬಿಎಸ್​​​​​​ಪಿ ಮುಖ್ಯಸ್ಥೆ ಮಾಯಾವತಿ ಸುದ್ದಿಗೋಷ್ಠಿ

ಹೊಸ ಮೈತ್ರಿಕೂಟವು ಬಿಹಾರದ ಜನರ ನಿರುದ್ಯೋಗ, ಬಡತನ ಮತ್ತು ಪ್ರವಾಹ ಸಮಸ್ಯೆ ಹೊಗಲಾಡಿಸುವುದಾಗಿದೆ ಎಂದು ತಿಳಿಸಿದ್ದಾರೆ. ಈ ಮೈತ್ರಿ ಗೆಲ್ಲಿಸುವಂತೆ ನಾನು ಬಿಹಾರ ಜನರಲ್ಲಿ ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಬಡವರು, ದೀನ ದಲಿತರು, ರೈತರು ಹಾಗೂ ಯುವಕರನ್ನ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಘೋಷಣೆಯಾಗಿರುವ ಉಪಚುನಾವಣೆಗಳಲ್ಲಿ ಸ್ವತಃ ಸ್ಪರ್ಧೆ ಮಾಡುವುದಾಗಿ ಮಾಹಿತಿ ನೀಡಿದ್ದು, ಇದರಲ್ಲಿ ಯಾವುದೇ ರೀತಿಯ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದೆ. ರಾಜ್ಯದಲ್ಲಿ ಕೊರೊನಾ ವೈರಸ್​ ವಿರುದ್ಧ ಹೋರಾಡಲು ಯಾವುದೇ ರೀತಿಯ ಪ್ರಯತ್ನ ಮಾಡುತ್ತಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ ಇದರಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ ಎಂದರು.

243 ಕ್ಷೇತ್ರಗಳ ಬಿಹಾರ ವಿಧಾನಸಭೆ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು, ಅಕ್ಟೋಬರ್​ 28, ನವೆಂಬರ್​ 3 ಹಾಗೂ ನವೆಂಬರ್​ 7ರಂದು ನಡೆಯಲಿದ್ದು, ನವೆಂಬರ್​ 10ಕ್ಕೆ ಫಲಿತಾಂಶ ಬಹಿರಂಗಗೊಳ್ಳಲಿದೆ.

ABOUT THE AUTHOR

...view details