ಕರ್ನಾಟಕ

karnataka

ETV Bharat / bharat

ಏ. 30ರಂದು ತೆರೆಯಲಿದೆ ಬದರಿನಾಥ ದೇವಸ್ಥಾನದ ಬಾಗಿಲು! - ಹಿಮಾಚ್ಛಾದಿತ

ಏ. 30ರಂದು ಭಗವಾನ್ ಬದರಿನಾಥ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತಿದ್ದು, ಲಾಕ್​ಡೌನ್ ಹಿನ್ನೆಲೆಯಲ್ಲಿ ಈ ಬಾರಿಯ ದ್ವಾರ ತೆರೆಯುವ ಸಂದರ್ಭದಲ್ಲಿ ಕೇವಲ 40 ಜನ ಮಾತ್ರ ಉಪಸ್ಥಿತರಿರಲಿದ್ದಾರೆ.

Badrinath Temple will open on the 30th
Badrinath Temple will open on the 30th

By

Published : Apr 18, 2020, 2:59 PM IST

ಬದರಿನಾಥ(ಉತ್ತರಾಖಂಡ್): ಇದೇ ಏ. 30ರಂದು ಭಗವಾನ್ ಬದರಿನಾಥ ದೇವಾಲಯದ ಬಾಗಿಲು ತೆರೆಯಲಾಗುವುದು. ದೇವಸ್ಥಾನದ ಸಿಬ್ಬಂದಿ ಈಗಾಗಲೇ ಪೂರ್ವಸಿದ್ಧತಾ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬದರಿನಾಥ ದೇವಸ್ಥಾನದ ಸುತ್ತಲಿನ ಪ್ರದೇಶ ಈಗಲೂ 4 ಅಡಿ ಎತ್ತರದಷ್ಟು ಹಿಮಾವೃತವಾಗಿದೆ. ಈ ಹಿಮ ತಗೆಯಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಈ ಬಾರಿ ದ್ವಾರ ತೆರೆಯುವ ಸಂದರ್ಭದಲ್ಲಿ ಕೇವಲ 40 ಜನ ಮಾತ್ರ ಉಪಸ್ಥಿತರಿರಲಿದ್ದಾರೆ.

ಚಳಿಗಾಲದಲ್ಲಿ ದೇವಸ್ಥಾನದ ಸುರಕ್ಷತೆಗಾಗಿ ದೇವಸ್ಥಾನದ ನಾಲ್ವರು ಸಿಬ್ಬಂದಿ ಹಾಗೂ ಪೊಲೀಸರು ಇಲ್ಲಿ ಯಾವಾಗಲೂ ಕಾವಲಿರುತ್ತಾರೆ. ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಬಿ.ಡಿ.ಸಿಂಗ್ ನೇತೃತ್ವದಲ್ಲಿ ದೇವಸ್ಥಾನದ ಸಿಬ್ಬಂದಿ, ಅಧಿಕಾರಿಗಳ ತಂಡ ಶೀಘ್ರವೇ ಆಗಮಿಸಲಿದ್ದು, ದ್ವಾರ ತೆರೆಯುವ ಸಮಾರಂಭದ ಎಲ್ಲಾ ತಯಾರಿಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ಬದರಿನಾಥ ದೇವಸ್ಥಾನದ ಧರ್ಮಾಧಿಕಾರಿ ಭುವನ್ ಚಂದ್ರ ಉನಿಯಾಲ್ ತಿಳಿಸಿದರು.

ಈ ಬಾರಿಯ ಚಳಿಗಾಲದಲ್ಲಿ ಹಿಮದಿಂದಾಗಿ ಕುಡಿಯುವ ನೀರು ಹಾಗೂ ವಿದ್ಯುತ್​ ವ್ಯವಸ್ಥೆಯ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮವಾಗಿದ್ದು, ಅದನ್ನೆಲ್ಲ ಸರಿಪಡಿಸುವ ಕೆಲಸ ಭರದಿಂದ ಸಾಗಿದೆ ಎಂದು ಧರ್ಮಾಧಿಕಾರಿ ಭುವನ್ ಚಂದ್ರ ಹೇಳಿದರು.

ABOUT THE AUTHOR

...view details