ಹೈದರಾಬಾದ್:ತನ್ನ ಮಗುವನ್ನು ಕಾಪಾಡಿದವರಿಗೆ ಆನೆಯೊಂದು ಧನ್ಯವಾದ ತಿಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಗುಂಡಿಯೊಂದರಲ್ಲಿ ಮರಿ ಆನೆಯೊಂದು ಬಿದ್ದಿದೆ. ತಾಯಿ ಸೇರಿದಂತೆ ಆನೆಗಳ ದಂಡ ಮಗುವನ್ನು ಕಾಪಾಡಲು ಹರಸಾಹಸ ಪಟ್ಟಿವೆ. ಆದ್ರೂ ಪ್ರಯೋಜನವಾಗಲಿಲ್ಲ.

ಇನ್ನು ಈ ಘಟನೆಯನ್ನು ಸ್ಥಳೀಯರು ನೋಡಿ ಮರಿ ಆನೆ ಸಹಾಯಕ್ಕೆ ದೌಡಾಯಿಸಿದ್ದಾರೆ. ಜೆಸಿಬಿ ಮೂಲಕ ಗುಂಡಿಗೆ ಮಣ್ಣನ್ನು ಹಾಕಿ ಮರಿ ಆನೆ ಮೇಲೆ ಬರುವಂತೆ ಮಾಡಿದ್ದಾರೆ. ಮರಿ ಆನೆ ಮೇಲಕ್ಕೆ ಬಂದು ತನ್ನ ತಾಯಿ ಜೊತೆ ಸೇರಿತು. ಇದರಿಂದ ತಾಯಿ ಆನೆ ಹರ್ಷ ವ್ಯಕ್ತ ಪಡಿಸಿದೆ. ಎರಡ್ಮೂರು ಬಾರಿ ಹಿಂದಕ್ಕೆ ತಿರುಗಿ ತನ್ನ ಸೊಂಡಿಲು ಎತ್ತಿ ಧನ್ಯವಾದ ಸಲ್ಲಿಸಿ ಕಾಡಿನತ್ತ ಮುಖ ಮಾಡಿದೆ. ಈ ಘಟನೆ ನಡೆದಿರುವುದು ಎಲ್ಲಿ ಎಂಬುದು ಮಾತ್ರ ಗೊತ್ತಾಗಿಲ್ಲ
ಇನ್ನು ಈ ವಿಡಿಯೋ ಅರಣ್ಯಾಧಿಕಾರಿ ಪ್ರವೀಣ್ ಕಾಸ್ವಾನ್ ಟ್ವೀಟರ್ನಲ್ಲಿ ಹರಿ ಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.