ಕರ್ನಾಟಕ

karnataka

ETV Bharat / bharat

ಜನಿಸಿದ ಮೂರೇ ದಿನದಲ್ಲಿ ಕೊರೊನಾ: ಮಹಾಮಾರಿ ವಿರುದ್ಧ ಗೆದ್ದ ವಿಶ್ವದ ಕಡಿಮೆ ತೂಕದ ಮಗು! - corona positive

ಅವಧಿಗೂ ಮುನ್ನ ಜನಿಸಿದ್ದ ಮಗು 21 ದಿನದ ಬಳಿಕ ಕೊರೊನಾದಿಂದ ಗುಣಮುಖವಾಗಿದ್ದು, ಇದಾದ ಬಳಿಕ ಮಗುವಿನಲ್ಲಿ ಹೃದಯ ಸಂಬಂಧಿ ಕಾಯಿಲೆ ಕಂಡುಬಂದಿತ್ತು. ಬಳಿಕ ಹೃದಯ ಸಂಬಂಧಿ ಕಾಯಿಲೆಗೂ ಚಿಕಿತ್ಸೆ ನೀಡಲಾಗಿತ್ತು.

baby-defeats-covid-19-in-kolkata
ಕೊರೊನಾ ಗೆದ್ದು ಬಂದ ವಿಶ್ವದ ಕಡಿಮೆ ತೂಕದ ಮಗು

By

Published : Sep 10, 2020, 4:29 PM IST

ಕೋಲ್ಕತ್ತಾ:ವಿಶ್ವದ ಅತ್ಯಂತ ಕಡಿಮೆ ತೂಕದ ನವಜಾತ ಶಿಶು ಕೊರೊನಾ ಜಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಶಿಶುವೀಗ ಜಗತ್ತಿನಲ್ಲಿ ಕೊರೊನಾ ಜಯಿಸಿರುವ ಅತೀ ಕಡಿಮೆ ತೂಕದ ಮಗು ಎಂಬ ಸಾಲಿಗೆ ಸೇರಿದೆ.

ಅವಧಿಗೂ ಮುನ್ನ ಜನಿಸಿದ ಮಗುವಿಗೆ ಮೂರೇ ದಿನದಲ್ಲಿ ಕೊರೊನಾ ಇರುವುದು ದೃಢವಾಗಿತ್ತು. ಕೇವಲ 1.3 ಕೆ.ಜಿ ತೂಕವಿದ್ದ ಮಗುವಿಗೆ ತೀವ್ರ ನಿಗಾ ವಹಿಸಿ ಚಿಕಿತ್ಸೆ ನೀಡಲಾಗಿತ್ತು.

ಇಲ್ಲಿನ ಆನಂದಪುರ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಈ ಮಗು ಚೇತರಿಸಿಕೊಂಡಿದ್ದು, ಕೊರೊನಾ ನೆಗೆಟಿವ್ ವರದಿಯಾಗಿದೆ. ತಾಯಿಗೂ ಕೊರೊನಾವಿದ್ದ ಕಾರಣ ಮಗುವಿಗೂ ದೃಢವಾಗಿತ್ತು. ಅಲ್ಲದೆ ತಾಯಿ ಎರಡು ಮಗುವಿಗೆ ಜನ್ಮ ನೀಡಿದ್ದು, ಮೂರು ದಿನದ ಬಳಿಕ ಒಂದು ಮಗು ಸಾವನಪ್ಪಿತ್ತು.

ಕೊರೊನಾ ದೃಢಪಟ್ಟಿದ್ದ ಮಗು ಜನಿಸಿದ 21 ದಿನದ ಬಳಿಕ ಕೊರೊನಾದಿಂದ ಗುಣಮುಖವಾಗಿದ್ದು, ಇದಾದ ಬಳಿಕ ಮಗುವಿನಲ್ಲಿ ಹೃದಯ ಸಂಬಂಧಿ ಕಾಯಿಲೆ ಕಂಡುಬಂದಿತ್ತು. ಬಳಿಕ ಹೃದಯ ಸಂಬಂಧಿ ಕಾಯಿಲೆಗೂ ಚಿಕಿತ್ಸೆ ನೀಡಲಾಗಿತ್ತು. ಇದೀಗ 32ನೇ ದಿನಕ್ಕೆ ಮಗು ಗುಣಮುಖವಾಗಿದ್ದು, ಡಿಸ್ಚಾರ್ಜ್ ಮಾಡಲಾಗಿದೆ.

ಈ ಮಗು ಕೋವಿಡ್​ನಿಂದ ಗುಣಮುಖವಾದ ವಿಶ್ವದ ಅತ್ಯಂತ ಕಡಿಮೆ ತೂಕವುಳ್ಳ ಶಿಶುವಾಗಿದೆ ಎಂದು ವೈದ್ಯರು ತಿಳಿಸಿದ್ದು, ಇದಕ್ಕೂ ಮೊದಲು ಯುಕೆಯಲ್ಲಿ 1.5 ಕೆ.ಜಿ ಮಗು ಕೋವಿಡ್​​​ನಿಂದ ಗುಣಮುಖವಾಗಿತ್ತು.

ABOUT THE AUTHOR

...view details