ಲಖನೌ(ಉತ್ತರಪ್ರದೇಶ):ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಜೂನ್ 4 ರಿಂದ ಮತ್ತೆ ವಿಚಾರಣೆ ಆರಂಭವಾಗುತ್ತಿದೆ. ಈ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಹಿರಿಯ ನಾಯಕರಾದ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ ಸೇರಿದಂತೆ ಒಟ್ಟು 32 ಮಂದಿಯ ಹೇಳಿಕೆಗಳನ್ನು ಸಿಬಿಐ ವಿಶೇಷ ಕೋರ್ಟ್ ದಾಖಲು ಮಾಡಿಕೊಳ್ಳಲಿದೆ.
ಜೂ.4 ರಿಂದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ - ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಆರೋಪಿಗಳು ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸಿಬಿಐ ವಿಶೇಷ ಕೋರ್ಟ್ ಅನುಮತಿ ನೀಡಿದೆ. ತಾವು ನಿರಪರಾಧಿಗಳು ಎಂದು ನಿರೂಪಿಸಿಕೊಳ್ಳುವುದಕ್ಕೆ ಆರೋಪಿಗಳಿಗೆ ಮತ್ತೊಂದು ಅವಕಾಶವನ್ನು ನೀಡಿರುವುದಾಗಿ ಕೋರ್ಟ್ ಹೇಳಿದೆ.
ಜೂ.4 ರಿಂದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ; ಅಡ್ವಾಣಿ ಸೇರಿ 32 ಮಂದಿ ಹೇಳಿಕೆ ದಾಖಲಿಸಲಿರುವ ಸಿಬಿಐ ಕೋರ್ಟ್
ಲಖನೌದಲ್ಲಿರುವ ಸಿಬಿಐ ವಿಶೇಷ ನ್ಯಾಯಾಯಲದ ನ್ಯಾಯಮೂರ್ತಿ ಎಸ್‌ಕೆ ಯಾದವ್ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಐಪಿಸಿ 313ರಡಿ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದಾಗಿ ನ್ಯಾಯಮೂರ್ತಿ ತಿಳಿಸಿದ್ದಾರೆ. ತಾವು ಈ ಪ್ರಕರಣದಲ್ಲಿ ನಿರಪರಾಧಿಗಳು ಎಂದು ಹೇಳಲು ಆರೋಪಿಗಳಿಗೆ ಇದೊಂದು ಅವಕಾಶ ಎಂದು ಹೇಳಿದ್ದಾರೆ. ಪ್ರಾಸಿಕ್ಯೂಷನ್ ಸಂಗ್ರಹಿಸಿರುವ ಆಧಾರಗಳನ್ನು ಆರೋಪಿಗಳಿಗೆ ವಿವರಿಸುವುದಾಗಿ ಲಖನೌ ಸಿಬಿಐ ಕೋರ್ಟ್ ಹೇಳಿದೆ.