ಕುಂಬಳ: ಕುಂಬಳ ಅನಂತಪುರ ದೇವಸ್ಥಾನದಲ್ಲಿ ಬಬಿಯಾ ದೇಗುಲದ ಆವರಣದೊಳಗೆ ಬಂದಿದ್ದು, ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಕೇರಳದ ಕಾಸರಗೋಡುನ ಕುಂಬಳ ಅನಂತಪುರ ದೇವಾಲಯದ ಕೊಳದಲ್ಲಿರುವ ಬಬಿಯಾ ಸಸ್ಯಾಹಾರಿ ಮೊಸಳೆ ಎಂದೇ ಪ್ರಖ್ಯಾತ. ಸದಾ ಕೊಳ ಮತ್ತು ಅದರ ಸುತ್ತಮುತ್ತ ಕಾಲ ಕಳೆಯುತ್ತಿದ್ದ ಬಬಿಯಾ ದೇವಸ್ಥಾನದ ಪ್ರಾಂಗಣದೊಳಗೆ ಬಂದಿದ್ದು ಇದೇ ಮೊದಲ ಬಾರಿಗೆ.
ಹೆಚ್ಚಿನ ಓದಿಗಾಗಿ:ಗಡಿಭಾಗದ ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಸಸ್ಯಹಾರಿ ಮೊಸಳೆ: ಇದಕ್ಕಿದೆ ಇತಿಹಾಸ!
ಬಬಿಯಾ ದೇವಸ್ಥಾನದ ಪ್ರಾಂಗಣದೊಳಗೆ ಕೊಂಚ ಸಮಯ ಕಾಲ ಕಳೆದಿದೆ. ದೇವಸ್ಥಾನದ ದಾರಿಯಲ್ಲಿ ಮಲಗಿರುವ ಬಬಿಯಾವನ್ನು ಕಂಡ ಪ್ರಧಾನ ಅರ್ಚಕರು ಕೈ ಮುಗಿದು ದೇವರ ಮಂತ್ರ ಪಠಿಸಿದ್ದಾರೆ. ಬಳಿಕ ತನ್ನ ಶಾಶ್ವತ ಆವಾಸಸ್ಥಾನಕ್ಕೆ ತೆರಳುವಂತೆ ಕೇಳಿಕೊಂಡಾಗ ಬಬಿಯಾ ಕೊಳಕ್ಕೆ ಹಿಂತಿರುಗಿದೆ.