ಕರ್ನಾಟಕ

karnataka

ETV Bharat / bharat

'ನೇತ್ರಾಹಿನ್' ಪುಣ್ಯಾಶ್ರಮ': ಅಂಧರ ಪಾಲಿಗೆ ಬೆಳಕು, ಅನಾಥರಿಗೂ ದಾರಿದೀಪ - ಬಾಬಾ ಸುಬಾ ಸಿಂಗ್

ಪಂಜಾಬ್‌ನ ಬರ್ನಾಲಾ ಜಿಲ್ಲೆಯ ನಾರಾಯಣಘರ್​​​ ಸೋಹಿಯಾ ಗ್ರಾಮದಲ್ಲಿ, ಅಂಧ ಮಕ್ಕಳಿಗಾಗಿ ಆಶ್ರಯ ಮನೆಯೊಂದಿದೆ. ಅದು ದೃಷ್ಟಿ ಹೊಂದಿರದ ಅದೆಷ್ಟೋ ಮಕ್ಕಳಿಗೆ ಬೆಳಕಾಗಿದೆ.

Baba Suba Singh
ನೇತ್ರಾಹಿನ್ ಪುಣ್ಯಾಶ್ರಮ

By

Published : Oct 13, 2020, 6:03 AM IST

ಪಂಜಾಬ್:ಅಸಹಾಯಕರನ್ನು ಕಾಪಾಡಲು ದೇವರು ಯಾವುದೋ ಒಂದು ರೂಪದಲ್ಲಿ ಬರುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ. ಈ ಮಾತುಗಳು ಪಂಜಾಬ್‌ನ ಬಾಬಾ ಸುಬಾ ಸಿಂಗ್ ಅವರಿಗೆ ಅನ್ವಯಿಸುತ್ತದೆ. ಬರ್ನಾಲಾ ಜಿಲ್ಲೆಯ ನಾರಾಯಣಘರ್​​​ ಸೋಹಿಯಾ ಗ್ರಾಮದಲ್ಲಿ, ಅಂಧ ಮಕ್ಕಳಿಗಾಗಿ ಆಶ್ರಯ ಮನೆಯೊಂದಿದೆ. ಅದರ ಮುಖ್ಯ ಉಸ್ತುವಾರಿಯೇ ಬಾಬಾ ಸುಬಾ ಸಿಂಗ್. ಅವರು ಕುರುಡರಾಗಿದ್ದರೂ ತಮ್ಮಂತಹ ದೃಷ್ಟಿ ಹೊಂದಿರದ ಅದೆಷ್ಟೋ ಮಕ್ಕಳಿಗೆ ಬೆಳಕಾಗಿದ್ದಾರೆ.

ಸ್ಥಳೀಯವಾಗಿ ನೇತ್ರಾಹಿನ್ ಆಶ್ರಮ ಎಂದು ಜನಪ್ರಿಯವಾಗಿರುವ ಈ ಆಶ್ರಯ ಮನೆಯು, ತನ್ನದೇ ಆದ ಆದಾಯದ ಮೂಲವನ್ನು ಹೊಂದಿಲ್ಲ. ಸ್ಥಳೀಯರು ಮತ್ತು ಪಂಜಾಬಿ ವಲಸೆಗಾರರಿಂದ ಯಾವುದೇ ಕೊಡುಗೆಗಳು ಬಂದರೂ ಅದು ತನ್ನ ಅಗತ್ಯಗಳನ್ನು ಪೂರೈಸುತ್ತದೆ.

ಪಂಜಾಬ್‌ನ ಬರ್ನಾಲಾ ಜಿಲ್ಲೆಯ ನೇತ್ರಾಹಿನ್' ಪುಣ್ಯಾಶ್ರಮ

ಈ ಆಶ್ರಯ ಮನೆಯಲ್ಲಿ ಅಂಧರು, ವಿಶೇಷ ಚೇತನರು, ದಿವ್ಯಾಂಗರು ಅಥವಾ ಅನಾಥ ಮಕ್ಕಳ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿಸಲಾಗುತ್ತದೆ. ಸುಮಾರು 20 ವರ್ಷಗಳ ಹಿಂದೆ ಸುಬಾ ಸಿಂಗ್ ಅವರು, ಈ ಆಶ್ರಮವನ್ನು ಬಂಜರು ಭೂಮಿಯೊಂದರಲ್ಲಿ ಪ್ರಾರಂಭಿಸಿದರು. ಇದರಲ್ಲಿ ಈಗ 40 ಮಕ್ಕಳು ಇದ್ದಾರೆ.

ಈ ಆಶ್ರಯ ಮನೆಯಲ್ಲಿ ಅಂಧರು ಮತ್ತು ಅನಾಥ ಮಕ್ಕಳನ್ನು ನೋಡಿಕೊಳ್ಳುವ ವಿಧಾನವು ಪ್ರಶಂಸನೀಯವಾಗಿದ್ದು, ಪ್ರತಿಯೊಂದು ಸೇವೆಯು ಅವರಿಗೆ ಉಚಿತವಾಗಿದೆ. ಆಗಾಗ್ಗೆ ಜಿಲ್ಲಾಡಳಿತ ಕೂಡ ಇಂತಹ ಮಕ್ಕಳನ್ನು ಆಶ್ರಯ ಮನೆಗೆ ಕರೆತರುತ್ತದೆ. ಯಾವುದೇ ಅನಾಥ ಅಥವಾ ಬಡ ಮಗುವಿನ ಬಗ್ಗೆ ತಿಳಿದುಬಂದಾಗ ಆಶ್ರಮಕ್ಕೆ ಅವರನ್ನು ಕರೆ ತರುತ್ತೇವೆ ಎನ್ನುತ್ತಾರೆ ಬಾಬಾ ಸಿಂಗ್​.

ಆಶ್ರಮದಲ್ಲಿ ವಾಸಿಸುವ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಲ್ಲದೆ, ಸಾಂಪ್ರದಾಯಿಕ ಶಾಲಾ ಶಿಕ್ಷಣದ ಹೊರತಾಗಿ ‘ಗುರ್ಬಾನಿ’ ಪಠಣ ಮತ್ತು ಇತರ ಧಾರ್ಮಿಕ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಅಂಧ ಮಕ್ಕಳಿಗೆ ಬ್ರೈಲ್ ಲಿಪಿಯ ಸಹಾಯದಿಂದ ಕಲಿಸಲಾಗುತ್ತದೆ.

ಆಶ್ರಮದ ಮೇಲಿನ ಮಹಡಿಯನ್ನು ಶ್ರೀ ಗುರು ಗ್ರಂಥ ಸಾಹೀಬ್ ಪವಿತ್ರ ಸ್ಥಳವಿದೆ. ಅಲ್ಲಿ ಮಕ್ಕಳಿಗೆ ಪ್ರತಿದಿನ ಪವಿತ್ರ ಮಂತ್ರ ಪಠಿಸಲು ವ್ಯವಸ್ಥೆ ಮಾಡಲಾಗಿದೆ. ಆಶ್ರಮದೊಂದಿಗೆ ಸಂಬಂಧ ಹೊಂದಿರುವ ಜನರು ತಮ್ಮ ಖುಷಿಯ ಕ್ಷಣಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾರೆ. ಆಶ್ರಮದ ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಹಾಯ ಮಾಡಲು, ಹತ್ತಿರದ ಹಳ್ಳಿಗಳ ಜನರು ಒಂದು ಟ್ರಸ್ಟ್ ಅನ್ನು ರಚಿಸಿದ್ದಾರೆ.

ಈ ಆಶ್ರಮವನ್ನು ಗುರುದ್ವಾರ ಚಂದುವಾನಾ ಸಾಹೀಬ್ ಎಂದೂ ಕರೆಯುತ್ತಾರೆ. ವಾಸ್ತವವಾಗಿ ಇದು ಅಸಹಾಯಕರಿಗೆ ಸಹಾಯ ಮಾಡುವ ಮೂಲಕ, ಮಹಾನ್ ಸಿಖ್ ಗುರುಗಳ ತತ್ವಗಳನ್ನು ಅನುಸರಿಸುವ ಆಶ್ರಮವಾಗಿದೆ.

ABOUT THE AUTHOR

...view details