ನವದೆಹಲಿ:ಅನೇಕ ಸಂದರ್ಭಗಳಲ್ಲಿ ಜನರ ಸಂಕಷ್ಟ ದೇಶದ ಮುಂದೆ ತೆರೆದಿಡಲು ಸಾಮಾಜಿಕ ಜಾಲತಾಣ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ ಎಂಬುದು ಈ ಹಿಂದಿನಿಂದಲೂ ಸಾಭೀತಾಗಿದೆ. ಸದ್ಯ ಅಂತಹ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಮಹಾಮಾರಿ ಕೊರೊನಾ ವೈರಸ್ನಿಂದಾಗಿ ವ್ಯಾಪಾರವಿಲ್ಲದೆ ಕಣ್ಣೀರು ಹಾಕಿದ್ದ ವೃದ್ಧ ದಂಪತಿಗೆ ಇದೀಗ ಎಲ್ಲೆಡೆಯಿಂದ ಸಹಾಯಹಸ್ತ ಹರಿದು ಬರುತ್ತಿದೆ. ದೆಹಲಿಯ ಮಾಳ್ವಿಯಾ ನಗರದಲ್ಲಿ 'ಬಾಬಾ ಕಾ ಢಾಬಾ' ಎಂಬ ಹೆಸರಿನಲ್ಲಿ ರಸ್ತೆ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ವೃದ್ಧ ದಂಪತಿ ಹೋಟೆಲ್ ನಡೆಸುತ್ತಿದ್ದರು. ಏಕಾಏಕಿ ಕೊರೊನಾ ಹಾವಳಿ ಹೆಚ್ಚಾದ ಕಾರಣ ಇವರ ಅಂಗಡಿಯತ್ತ ಬರುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಹೀಗಾಗಿ ಅಂಗಡಿ ಸಂಪೂರ್ಣವಾಗಿ ಕೆಲ ತಿಂಗಳ ಕಾಲ ಬಂದ್ ಮಾಡಿದ್ದ ವೃದ್ಧ ದಂಪತಿ ಇದೀಗ ಲಾಕ್ಡೌನ್ ಸಡಿಲಗೊಂಡಿರುವ ಕಾರಣ ಮತ್ತೊಮ್ಮೆ ಅದನ್ನ ರೀ ಓಪನ್ ಮಾಡಿದ್ದಾರೆ.